International Beggar: ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ’ಅಂತಾರಾಷ್ಟ್ರೀಯ ಭಿಕ್ಷುಕ’ ಎಂದು ಜರಿದ ಜಮಾಯತ್ | Pakistan Prime Minister Imran Khan international beggar says Jamat e Islami chief


International Beggar: ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ’ಅಂತಾರಾಷ್ಟ್ರೀಯ ಭಿಕ್ಷುಕ’ ಎಂದು ಜರಿದ ಜಮಾಯತ್

International Beggar: ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ನನ್ನು ’ಅಂತಾರಾಷ್ಟ್ರೀಯ ಭಿಕ್ಷುಕ’ ಎಂದು ಜರಿದ

ಲಾಹೋರ್​​: ಮೊನ್ನೆಯಷ್ಟೇ ಪಾಕಿಸ್ತಾನದ ಆರ್ಥಿಕತೆ ಭಾರತಕ್ಕಿಂತ ಚೆನ್ನಾಗಿದೆ ಎಂದು ಪಾಕಿಸ್ತಾನದ ಪ್ರಧಾನಿ (Pakistan Prime Minister) ಜನಾಬ್ ಇಮ್ರಾನ್​ ಖಾನ್ ಫರ್ಮಾನು ಹೊರಡಿಸಿ, ನಗೆಪಾಟಲಿಗೀಡಾದ್ದರು. ಇದೀಗ ಜಮಾತ್​ ಎ ಇಸ್ಲಾಮಿ ಪಾಕಿಸ್ತಾನದ ನೂತನ ‘ಅರ್ಥಶಾಸ್ತ್ರಜ್ಞ’ ಜನಾಬ್ ಇಮ್ರಾನ್​ ಖಾನ್​ರನ್ನು ತರಾಟೆಗೆ ತೆಗೆದುಕೊಂಡಿದೆ. ಪಾಕಿಸ್ತಾನದ ಹಣಕಾಸು ಸಂಕಷ್ಟಗಳು ಬೆಟ್ಟದಷ್ಟು ಮಿತಿಮೀರಿದ್ದು ಪ್ರಧಾನಿ ಇಮ್ರಾನ್​ ಖಾನ್ ’ಅಂತಾರಾಷ್ಟ್ರೀಯ ಭಿಕ್ಷುಕ’ ಎಂದು (international beggar) ಜರಿದಿದೆ. ಅಷ್ಟೇ ಆತ (Imran Khan) ಪ್ರಧಾನಿ ಹುದ್ದೆಯಿಂದ ತೊಲಗಿದರೆ ಮಾತ್ರ ಈ ಸಮಸ್ಯೆಗಳಿಗೆಲ್ಲಾ ಪರಿಹಾರ ದೊರಕುವುದು ಎಂದೂ ಜಮಾಯತ್​ ಮುಖ್ಯಸ್ಥ ವ್ಯಾಖ್ಯಾನಿಸಿದ್ದಾರೆ.

ಲಾಹೋರ್​​ನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಿದ್ಧತಾ ಕಾರ್ಯದಲ್ಲಿ ತೊಡಗಿರುವ ಜಮಾಯತ್ (Jamat-e-Islami)​ ಮುಖ್ಯಸ್ಥ ಸಿರಾಜುಲ್ ಹಕ್ (Sirajul-Haq) ಪಾಕಿಸ್ತಾನದ ಸಮಸ್ಯೆಗಳೆಲ್ಲ ಪರಿಹಾರವಾಗಬೇಕೆಂದರೆ ಇಮ್ರಾನ್​ ಖಾನ್ ನಿರ್ಗಮನವೊಂದೇ ದಾರಿ ಎಂದಿದ್ದಾರೆ.

Also Read:

ಪಾಕಿಸ್ತಾನದ ಆರ್ಥಿಕತೆ ಭಾರತಕ್ಕಿಂತ ಚೆನ್ನಾಗಿದೆ ಎಂದ ಪಾಕ್​ ಪ್ರಧಾನಿ ಜನಾಬ್ ಇಮ್ರಾನ್​ ಖಾನ್!

TV9 Kannada


Leave a Reply

Your email address will not be published. Required fields are marked *