International Coffee Day: ಒಂದು ಗುಟುಕಿನಲ್ಲೇ ಅಮೃತ ಅಡಗಿಟ್ಟಿಸಿಕೊಂಡಿರುವ ಕಾಫಿ ಭಾರತಕ್ಕೆ ಬಂದದ್ದು ಹೇಗೆ ಗೊತ್ತಾ? | International Coffee Day Know History, Significance and Importance of Coffee in kannada


ಇಡೀ ಜಗತ್ತಿನಲ್ಲಿ ಹೆಚ್ಚು ಸೇವನೆ ಆಗುವ ಈ ಪಾನಿಯ ಜನರ ಮನಸಲ್ಲಿ ವಿಶೇಷ ಸ್ಥಾನ ಪಡೆದಿದೆ. ಅದೆಷ್ಟೂ ಮಂದಿ ಒಂದು ಕಪ್ ಕಾಫಿ ಕುಡಿಯಲು ಕಿಲೋ ಮೀಟರ್ ಗಟ್ಟಲೆ ಸಾಗಿ ಕಾಫಿಯ ಪರಿಮಳ, ಸ್ವಾದವನ್ನು ಸವಿಯುತ್ತಾರೆ.

ಬೆಳಗ್ಗೆ ಎದ್ದು ದಿನ ಆರಂಭವಾಗುವುದರಿಂದ ಹಿಡಿದು ತಲೆ ನೋವು, ಬೇಜಾರು, ಮೈಂಡ್​ ಫ್ರೆಶ್ ಮಾಡಿಕೊಳ್ಳಲು, ಒಂಟಿಯಾಗಿದ್ದಾಗಲೆಲ್ಲ ಜೊತೆ ಗೂಡುವ ಕಾಫಿಗೆ(Coffee)  ಇಂದು ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ(International Coffee Day). ಕಾಫಿ ಬಗ್ಗೆ ಹೇಳೋದೆ ಬೇಡ. ಕಾಫಿ ಕುಡಿಯುವ ಪ್ರತಿಯೊಬ್ಬರೂ ಕಾಫಿಯನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷನೆ ನೀಡುತ್ತಾರೆ. ಇಡೀ ಜಗತ್ತಿನಲ್ಲಿ ಹೆಚ್ಚು ಸೇವನೆ ಆಗುವ ಈ ಪಾನಿಯ ಜನರ ಮನಸಲ್ಲಿ ವಿಶೇಷ ಸ್ಥಾನ ಪಡೆದಿದೆ. ಅದೆಷ್ಟೂ ಮಂದಿ ಒಂದು ಕಪ್ ಕಾಫಿ ಕುಡಿಯಲು ಕಿಲೋ ಮೀಟರ್ ಗಟ್ಟಲೆ ಸಾಗಿ ಕಾಫಿಯ ಪರಿಮಳ, ಸ್ವಾದವನ್ನು ಸವಿಯುತ್ತಾರೆ. ಅದು ಅವರ ಪಾಲಿಗೆ ಅಮೃತವೇ ಆಗಿದೆ. ಬನ್ನಿ ಈ ದಿನ ಕಾಫಿ ನಮ್ಮ ದೇಶಕ್ಕೆ ಬಂದದ್ದು ಹೇಗೆ? ಕಾಫಿಯ ಮಹತ್ವ, ಈ ದಿನವನ್ನು ಆಚರಿಸುವ ಉದ್ದೇಶವನ್ನು ತಿಳಿಯೋಣ.

ಅಂತರರಾಷ್ಟ್ರೀಯ ಕಾಫಿ ಸಂಸ್ಥೆಯ 77 ಸದಸ್ಯ ರಾಷ್ಟ್ರಗಳು ಮತ್ತು ಪ್ರಪಂಚದಾದ್ಯಂತದ ಕಾಫಿ ಸಂಘಗಳು ಅಕ್ಟೋಬರ್ 1ರಂದು ಕಾಫಿ ದಿನವನ್ನು ಆಚರಿಸುತ್ತವೆ. 2014 ರಲ್ಲಿ, ಕಾಫಿ ವಲಯದ ವೈವಿಧ್ಯತೆ, ಗುಣಮಟ್ಟ ಮತ್ತು ಕಾಫಿ ಬೇಳೆಯುವವರ ಉತ್ಸಾಹವನ್ನು ಆಚರಿಸಲು ಮತ್ತು ಎಲ್ಲಾ ಕಾಫಿ ಪ್ರಿಯರಿಗೆ ದಿನವನ್ನು ಮೀಸಲಿಡಲು ಅಂತರರಾಷ್ಟ್ರೀಯ ಕಾಫಿ ಸಂಸ್ಥೆ(ಐಸಿಒ) ನಿರ್ಧರಿಸಿತು. ಅದರಂತೆ 2015 ರಲ್ಲಿ ICO ಮಿಲನ್‌ನಲ್ಲಿ ಮೊದಲ ಅಂತರರಾಷ್ಟ್ರೀಯ ಕಾಫಿ ದಿನವನ್ನು ಪ್ರಾರಂಭಿಸಿತು. ಆದ್ರೆ ಇದಕ್ಕೂ ಮುನ್ನ 1997 ರಲ್ಲಿ ICO ಚೀನಾದಲ್ಲಿ ಆಚರಿಸಿತ್ತು. ಮತ್ತು ತೈವಾನ್ 2009 ರಲ್ಲಿ ಮೊದಲ ಬಾರಿಗೆ ಕಾಫಿ ದಿನವನ್ನು ಆಚರಿಸಿತು. ನೇಪಾಳದಲ್ಲಿ, ಮೊದಲ ಅಂತರರಾಷ್ಟ್ರೀಯ ಕಾಫಿ ದಿನವನ್ನು 2005 ರಲ್ಲಿ ನವೆಂಬರ್ 15 ರಂದು ಆಚರಿಸಲಾಯಿತು.

TV9 Kannada


Leave a Reply

Your email address will not be published.