Exercise
ಕಳೆದ ಕೆಲವು ವರ್ಷಗಳಿಂದ ಪುರುಷರು ಹೆಚ್ಚಿನ ಕೆಲಸದ ಒತ್ತಡ, ಪ್ರಯಾಣ ಮತ್ತು ಶ್ರಮದಿಂದ ತಮ್ಮ ಆರೋಗ್ಯವನ್ನು ನಿರ್ಲಕ್ಷ್ಯಿಸುತ್ತಿದ್ದಾರೆ. ಇಂದು ಆಚರಿಸುತ್ತಿರುವ ಅಂತಾಷ್ಟ್ರೀಯ ಪುರುಷರ ದಿನವು, ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ- ಜೀವನ ಶೈಲಿಯಲ್ಲಿನ ಕೆಲವು ಬದಲಾವಣೆಗಳು ಆರೋಗ್ಯವಾಗಿರಲು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂಬುದನ್ನು ಪುರುಷರಿಗೆ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ. ಮಾನಸಿಕ ನೆಮ್ಮದಿ ಮತ್ತು ಸಂತೋಷವು ನಿಮ್ಮ ಒಟ್ಟಾರೆ ಆರೋಗ್ಯವನ್ನು ನಿರ್ವಹಿಸಲು ಮತ್ತು ಸುಧಾರಿಸಲು ಸಹಾಯ ಮಾಡುತ್ತದೆ. ಹೀಗಿರುವಾಗ ನಿಮ್ಮ ಆರೋಗ್ಯದ ಸುಧಾರಣೆಗೆ ನೀವು ಅನುಸರಿಸಬೇಕಾದ ಕೆಲವು ಮಾರ್ಗಸೂಚಿಗಳು ಈ ಕೆಳಗಿನಂತಿವೆ;
ಸಂಜೆ 6 ಗಂಟೆಯಿಂದ 7 ಗಂಟೆಯ ವರೆಗೆ ಅಥವಾ ಕನಿಷ್ಠ 8 ಗಂಟೆಯ ಒಳಗೆ ಅಂದರೆ ಸೂರ್ಯಾಸ್ತದ ಒಳಗೆ ರಾತ್ರಿ ಊಟವನ್ನು ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಇದು ನಿಮ್ಮ ಹೊಟ್ಟೆಯ ಆರೋಗ್ಯ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ನೀವು ರಾತ್ರಿ ಊಟ ಮಾಡಿದ 3 ಗಂಟೆಗಳ ಬಳಿಕ ನಿದ್ರೆ ಮಾಡುವ ಅಭ್ಯಾಸ ಹೊಂದಿರಬೇಕು. ಹಾಗಾಗಿ ಸೂರ್ಯಾಸ್ತದ ಒಳಗೆ ನೀವು ಊಟ ಮಾಡುವುದು ಒಳ್ಳೆಯದು. ಬೇಗ ಮಲಗುವ ಅಭ್ಯಾಸ ನಿಮ್ಮ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಉತ್ತಮ ನಿದ್ರೆ ಪಡೆಯಲು, ಹಸಿವನ್ನು ಕಡಿಮೆ ಮಾಡಲು ಜೊತೆಗೆ ಕೆಫೀನ್ ಸೇವನೆಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ.
ಸಮಯ ಪಾಲನೆಯನ್ನು ಎಂದಿಗೂ ಮರೆಯಬೇಡಿ. ಇದು ಕೆಲಸಕ್ಕೂ ಇರಬಹುದು ಇಲ್ಲವೇ ಊಟದ ವಿಚಾರದಲ್ಲಿಯೂ ಸಹ. ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಹೊಟ್ಟೆಯ ಸಮಸ್ಯೆಗಳನ್ನು ಉಂಟು ಮಾಡುವ ದೇಹದಲ್ಲಿ ಆಮ್ಲ ಸಂಗ್ರಹವಾಗುವುದನ್ನು ತಪ್ಪಿಸಲು ಉಪಹಾರ, ಮಧ್ಯಾಹ್ನದ ಊಟ ಪ್ರತಿನಿತ್ಯ ಸಮಯಕ್ಕೆ ಸರಿಯಾಗಿರಲಿ.
ಉತ್ತಮ ನಿದ್ರೆಯ ಸಮಯ ಮತ್ತು ನಿದ್ರೆಯಿಂದ ಏಳುವ ಸಮಯವನ್ನು ಸರಿಯಾಗಿ ಪಾಲಿಸಿ. ಏಕೆಂದರೆ ನೀವು ಉತ್ತಮ ನಿದ್ರೆ ಪಡೆದಾಗ ಮಾತ್ರ ನಿಮ್ಮ ದೇಹವು ಸರಿಯಾದ ಚಿಕಿತ್ಸೆ, ಚೇತರಿಕೆ ಪಡೆಯಲು ಸಹಾಯವಾಗುತ್ತದೆ. ಹೆಚ್ಚಿನ ದಿನಗಳಲ್ಲಿ ನೀವು ಚೆನ್ನಾಗಿ ನಿದ್ರೆ ಮಾಡಿದರೆ ನೀವು ಚಟುವಟಿಕೆಯಿಂದ ಕೂಡಿರುತ್ತೀರಿ.