
ಸಾಂದರ್ಭಿಕ ಚಿತ್ರ
Museum : ಎಲ್ಲರಿಗೂ ಸರಿಹೊಂದುವ ಸಾಮಾನ್ಯ ನೆಲೆಯನ್ನು ಮರುಸ್ಥಾಪಿಸಲು ಮತ್ತು ವಿಭಜನೆಗಿಂತ ಸೇತುವೆಗಳನ್ನು ನಿರ್ಮಿಸಲು, ಹೊಸ ದೃಷ್ಟಿಕೋನವನ್ನು ನೀಡುವಲ್ಲಿ ವಸ್ತುಸಂಗ್ರಹಾಲಯಗಳು ಪ್ರಮುಖ ಪಾತ್ರವಹಿಸುತ್ತವೆ.
Museum : ಅಯ್ಯೋ, ಏನು ಬೇಕಾದರೂ ಇಂಟರ್ನೆಟ್ ಅಲ್ಲಿ ಸಿಗುತ್ತೆ. ಮ್ಯೂಸಿಯಂಗಳಿಗೆ ಯಾರು ಭೇಟಿ ನೀಡುತ್ತಾರೆ? ಅದೆಲ್ಲ ಹಳೆ ಕಾಲದಲ್ಲಿ ಆಯ್ತು. ಈಗಿನ ಕಾಲದಲ್ಲಿ ಮ್ಯೂಸಿಯಂಗಳು ಹಳತಾಯ್ತು. ಹೀಗೆ ಮೂಗು ಮುರಿಯುವವರೇ ಹೆಚ್ಚು. ಆದರೆ ತಾಂತ್ರಿಕವಾಗಿ ಮುಂದುವರಿದ ಇಂದಿನ ಸಮಾಜಕ್ಕೆ ವಸ್ತುಸಂಗ್ರಹಾಲಯಗಳು ಇನ್ನೂ ಹೆಚ್ಚು ಪ್ರಸ್ತುತವಾಗಿವೆ. ನಮ್ಮ ಸಮಾಜ ಹಿಂದೆ ಏನಾಗಿತ್ತು, ಹೇಗೆ ಬದಲಾಗಿದೆ ಮತ್ತು ಮುಂದಿನ ಪೀಳಿಗೆಗೆ ಹೇಗಾಗಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಕಲೆ, ವಾಸ್ತುಶಿಲ್ಪ ಅಥವಾ ಇತಿಹಾಸದ ಛಾಯಾಚಿತ್ರಗಳನ್ನು ನೋಡುವುದು ಬೇರೆ ಕಣ್ಣೆದುರಿಗೆ ನೋಡುವುದು ಬೇರೆ. ಉದಾಹರಣೆಗೆ ಗಾಂಧೀಜಿಯವರ ವೇಷಭೂಷಣಗಳು ನಿಮಗೆ ಇಂಟರ್ನೆಟ್ ಅಲ್ಲೂ ಸಿಗುತ್ತವೆ. ಆದರೆ ಅದನ್ನು ನೇರವಾಗಿ ನೋಡುವುದು ಸಂಪೂರ್ಣವಾಗಿ ವಿಭಿನ್ನವಾದ ಅನುಭವವನ್ನು ನೀಡುತ್ತದೆ. ಇಂಟರ್ನೆಟ್ಟಿನಲ್ಲಿ ಸಿಗುವ ಮಾಹಿತಿಗಿಂತ ಮ್ಯೂಸಿಯಂನಲ್ಲಿ ಹೆಚ್ಚು ವಿಷಯಗಳನ್ನು ತಿಳಿಯಬಹುದು.
ಡಾ. ಸಹನಾ ಪ್ರಸಾದ್
ಅಂತರ್ಜಾಲದಲ್ಲಿ ಹುಡುಕಲು ಸಾಧ್ಯವಾಗದ ಹೊಸ ಮಾಹಿತಿ ನಮಗೆ ಮ್ಯೂಸಿಯಂನಲ್ಲಿ ಸಿಗುತ್ತದೆ. ಬರೀ ಪರದೆಯ ಮೂಲಕ ನೋಡಿ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಮ್ಯೂಸಿಯಂಗಳಿಗೆ ಹೋಗುವುದು, ನೋಡುವುದು, ಅಲ್ಲಿನ ವಸ್ತುಗಳ ವಾಸನೆ ಅರಿಯುವುದು, ಆ ವಸ್ತುಗಳನ್ನು ಸ್ಪರ್ಶಿಸುವುದು ನಮಗೆ ಬೇರೆಯೇ ಅನುಭವವನ್ನು ಕಟ್ಟಿಕೊಡುತ್ತದೆ. ಇತ್ತೀಚಿನ ತಂತ್ರಜ್ಞಾನವು ವಸ್ತುಸಂಗ್ರಹಾಲಯಗಳನ್ನು ಹಿಂದೆ ತಳ್ಳಿದರೂ ಸಹ, ಅವು ಇನ್ನೂ ಅಭಿವೃದ್ಧಿ ಹೊಂದುತ್ತಿವೆ. ವಸ್ತುಸಂಗ್ರಹಾಲಯಗಳು ಇನ್ನೂ ಪ್ರಪಂಚದಾದ್ಯಂತ ಬಹಳ ಜನಪ್ರಿಯವಾರುವುದೇ ಇದಕ್ಕೆ ಸಾಕ್ಷಿ. ಕಲಿಯಬಹುದು, ಜಗತ್ತಿನಲ್ಲಿ ನಡೆದ ಯುದ್ಧಗಳು, ಹತ್ಯಾಕಾಂಡಗಳು, ಬೃಹತ್ ಡೈನೋಸಾರ್ಗಳು, ಜನರನ್ನು ಬಳಿ ತೆಗೆದುಕೊಂಡ ಸಾಂಕ್ರಾಮಿಕ ರೋಗಗಳು ಎಲ್ಲವನ್ನೂ ಅರ್ಥ ಮಾಡಿಕೊಳ್ಳಬಹುದು ವಸ್ತುಸಂಗ್ರಹಾಲಯಗಳು. ಯಾವುದೇ ಎಲೆಕ್ಟ್ರಾನಿಕ್ ಸಾಧನಳನ್ನು ಪ್ಲಗ್ ಮಾಡದೆಯೇ, ಜನರಿಗೆ ಕಲಿಯಲು , ಸಮಮನಸ್ಕರೊಂದಿಗೆ ಬೆರೆಯಲು, ಚರ್ಚಿಸಲು ಅವಕಾಶ ನೀಡುತ್ತವೆ.
ವಸ್ತುಸಂಗ್ರಹಾಲಯಗಳು ನಮ್ಮ ಇತಿಹಾಸವನ್ನು , ನಮ್ಮ ಪೂರ್ವಜರ ಜೀವನದ ಎಲ್ಲಾ ಅಂಶಗಳನ್ನು ಸಂಕ್ಷಿಪ್ತಗೊಳಿಸಿ , ನಮ್ಮ ಇತಿಹಾಸ, ನಮ್ಮ ಹಿಂದಿನ ಸಮುದಾಯದ ಅನುಭವಗಳನ್ನು ನಾವು ಮರೆಯದಂತೆ, ಆ ಅನುಭವಗಳನ್ನು ಸಂರಕ್ಷಿಸುವ ಮತ್ತು ಕಾಲಕಾಲಕ್ಕೆ ಅವುಗಳನ್ನು ನಮಗೆ ಮರು ಪ್ರಸ್ತುತಪಡಿಸುವ ಕೆಲಸ ಮಾಡುತ್ತದೆ. ಐತಿಹಾಸಿಕ, ಕಲಾತ್ಮಕ ಅಥವಾ ಸಾಂಸ್ಕೃತಿಕವಾಗಿ ನಾವು ನೋಡಿರದ ನಾಗರಿಕತೆಗಳ ಚಿತ್ರವನ್ನು ನಮಗೆ ತಿಳಿಸಲು ಮ್ಯೂಸಿಯಂಗಳು ಸಹಾಯಕವಾಗಿವೆ. ಪರದೆಯ ಮೇಲೆ ಕಾಣುವ ಚಿತ್ರಗಳು ನಮಗೆ ಇವೆಲ್ಲರ ಅಂದಾಜು ಕೊಡಬಹುದು, ಅಷ್ಟೇ.