International Yoga Day 2022: ಯಾವ ಸಮಯದಲ್ಲಿ ಯೋಗ ಮಾಡುವುದು ಹೆಚ್ಚು ಸೂಕ್ತ? | International Yoga Day 2022 Which is the best time to do yoga and know its benefits


ಯಾವ ಸಮಯದಲ್ಲಿ ಯೋಗ ಮಾಡುವುದು ಒಳ್ಳೆಯದು ಅನ್ನುವ ಬಗ್ಗೆ ಹಲವರಿಗೆ ಗೊಂದಲಗಳಿವೆ. ಹೆಚ್ಚಾಗಿ ಎಲ್ಲರೂ ಬೆಳಗ್ಗೆದ್ದು ಯೋಗ ಮಾಡುತ್ತಾರೆ. ಆದರೆ ಬೆಳಗ್ಗೆದ್ದು ಯೋಗ ಮಾಡಲು ಸಮಯ ಸಿಗದವರು ಸಂಜೆ ಮಾಡುವುದು ಸೂಕ್ತವೇ ಎಂಬುದರ ಬಗ್ಗೆ ಗೊಂದಲವಿರುತ್ತದೆ. ಆ ಎಲ್ಲಾ ಗೊಂದಲಗಳಿಗೆ ಉತ್ತರ ಇಲ್ಲಿದೆ.

ಯೋಗ(Yoga)ಭಾರತದ ಸಂಸ್ಕೃತಿಯಷ್ಟೇ ಅಲ್ಲ, ಅದು ಸನಾತನ ಕಾಲದಿಂದಲೂ ನಮ್ಮ ಹಿರಿಯರು ಮುಂದಿನ ಪೀಳಿಗೆಗೆ ಬಿಟ್ಟ ಹೋಗಿರುವ ಸಂಪತ್ತು. ಯೋಗದ ಮಹತ್ವ ತಿಳಿದಿದ್ದ ನಮ್ಮ ಹಿರಿಯರು ಕಾಯಿಲೆ, ರೋಗ-ರುಜಿನಗಳಿಲ್ಲದೇ ಶತಾಯುಷಿಯಾಗಿ ಬದುಕಿ ತೋರಿಸಿದ್ದಾರೆ. ಯೋಗದಿಂದ ಉತ್ತಮ ಆರೋಗ್ಯ(Good Health) ಪಡೆಯಬಹುದು. ಯೋಗದಿಂದ ಮನಸ್ಸಿನ ಒತ್ತಡ ಕಡಿಮೆಯಾಗಿ ಶಾಂತಿ ಪಡೆಯಬಹುದು. ಬಿಡುವಿಲ್ಲದ ಒತ್ತಡದ ಜೀವನಕ್ಕೆ ಯೋಗ ಅತಿ ಮುಖ್ಯ. ಯೋಗ ಮಾಡುವುದರಿಂದ ಶರೀರ ಬಲಗೊಳ್ಳುವುದು, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು, ಶ್ವಾಸಕೋಶ, ಹೃದಯ, ನರಮಂಡಲ ಸಂಬಂಧಿತ ಆರೋಗ್ಯ ಸಮಸ್ಯೆಗಳು ಪರಿಹಾರವಾಗುವುದು. ಆದ್ರೆ ಇದಕೆಲ್ಲ ಸರಿಯಾದ ಕ್ರಮ ಕೂಡ ಅತಿ ಮುಖ್ಯ. ಬನ್ನಿ ಹಾಗಾದ್ರೆ ಯಾವ ಸಮಯದಲ್ಲಿ ಯಾಗ ಮಾಡುವುದರಿಂದ ಯಾವ ಪ್ರಯೋಜನ? ಯಾವ ಮಾಡಲು ಉತ್ತಮ ಸಮಯ ಯಾವುದು ಎಂಬ ಬಗ್ಗೆ ತಿಳಿಯೋಣ.

ನಿಯಮಿತವಾಗಿ ಯೋಗ ಮಾಡುವುದರಿಂದ ದೈಹಿಕ, ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತೆ. ದೇಹವನ್ನು ಸುಸ್ಥಿತಿಗೆ ತರಲು ಯೋಗಕ್ಕಿಂತ ಉತ್ತಮವಾದ ಬೇರೊಂದು ಉಪಾಯವಿಲ್ಲ. ಅಲ್ಲದೆ ಯೋಗದಿಂದ ಯಾವ ಅಡ್ಡ ಪರಿಣಾಮಗಳೂ ಉಂಟಾಗುವುದಿಲ್ಲ. ಯೋಗದಿಂದ ಜೀವನಶೈಲಿಯಲ್ಲಿ ವಿಪರೀತ ಬದಲಾವಣೆಯನ್ನು ತರದೆಯೇ ದೇಹವನ್ನು ಯೋಗವು ಪರಿಣಾಮಕಾರಕವಾಗಿ ಸುಸ್ಥಿತಿಗೆ ತರುತ್ತದೆ. ಆದರೆ, ಯಾವ ಸಮಯದಲ್ಲಿ ಯೋಗ ಮಾಡುವುದು ಒಳ್ಳೆಯದು ಅನ್ನುವ ಬಗ್ಗೆ ಹಲವರಿಗೆ ಗೊಂದಲಗಳಿವೆ. ಹೆಚ್ಚಾಗಿ ಎಲ್ಲರೂ ಬೆಳಗ್ಗೆದ್ದು ಯೋಗ ಮಾಡುತ್ತಾರೆ. ಆದರೆ ಬೆಳಗ್ಗೆದ್ದು ಯೋಗ ಮಾಡಲು ಸಮಯ ಸಿಗದವರು ಸಂಜೆ ಮಾಡುವುದು ಸೂಕ್ತವೇ ಎಂಬುದರ ಬಗ್ಗೆ ಗೊಂದಲವಿರುತ್ತದೆ. ಆ ಎಲ್ಲಾ ಗೊಂದಲಗಳಿಗೆ ಉತ್ತರ ಇಲ್ಲಿದೆ.

ಯೋಗ ತಜ್ಞರು ಸೂರ್ಯೋದಯದ ಸಮಯದಲ್ಲಿ ಯೋಗಾಭ್ಯಾಸ ಮಾಡುವುದು ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಸಂಜೆ ಯೋಗ ಮಾಡುವುದರಿಂದಲೂ ಯಾವುದೇ ರೀತಿಯ ತೊಂದರೆಯಿಲ್ಲ ಅನ್ನೋ ಅಭಿಪ್ರಾಯ ಕೂಡ ಇದೆ. ಹೆಚ್ಚಿನ ಯೋಗ ಶಾಲೆಗಳಲ್ಲಿ ಬೆಳಗ್ಗಿನ ಸಮಯ ಯೋಗಾಭ್ಯಾಸ ಮಾಡಿಸಲಾಗುತ್ತದೆ. ಆದರೆ ಬೆಳಗ್ಗೆದ್ದು ಕಾಲೇಜು, ಕಚೇರಿಗೆಂದು ಹೋಗುವವರಿಗೆ ಯೋಗ, ವಾಕಿಂಗ್‍ ಎಂದು ಮಾಡಲು ಸಮಯವಿರುವುದಿಲ್ಲ. ಇಂಥವರು ಸಂಜೆ ಹೊತ್ತಿನಲ್ಲಿಯೂ ಯೋಗಾಭ್ಯಾಸ ಮಾಡಬಹುದು.

TV9 Kannada


Leave a Reply

Your email address will not be published.