International Yoga Day 2022: 22,850 ಅಡಿ ಎತ್ತರದಲ್ಲಿ ಯೋಗಾಭ್ಯಾಸ ಮಾಡಿದ ITBP ಸಿಬ್ಬಂದಿಗಳು! | ITBP personnel practicing yoga at an altitude of 22,850 feet


International Yoga Day 2022: 22,850 ಅಡಿ ಎತ್ತರದಲ್ಲಿ ಯೋಗಾಭ್ಯಾಸ ಮಾಡಿದ ITBP ಸಿಬ್ಬಂದಿಗಳು!

ಯೋಗಾಭ್ಯಾಸ ಮಾಡಿದ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿಗಳು

Image Credit source: ITBP

ಯೋಗ ದಿನಾಚರಣೆಗೂ ಮುನ್ನವೇ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿಗಳು ಉತ್ತರಾಖಂಡದ ಹಿಮಾಲಯದಲ್ಲಿ 22,850 ಅಡಿ ಎತ್ತರದಲ್ಲಿ ಯೋಗವನ್ನು ಅಭ್ಯಾಸ ಮಾಡಿ ಗಮನಸೆಳೆದಿದ್ದಾರೆ. 14 ಸಿಬ್ಬಂದಿಗಳು ಸುಮಾರು 20 ನಿಮಿಷಗಳ ಕಾಲ ಯೋಗಾಭ್ಯಾಸ ನಡೆಸಿದರು.

ಶಿಮ್ಲಾ: ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನಾ (International Yoga Day)ಚರಣೆಯನ್ನು ಆಚರಿಸಲಾಗುತ್ತಿದೆ. ಭಾರತದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ ಯೋಗ ದಿನ ಆಚರಿಸಲಾಗುತ್ತಿದ್ದು, ಹಲವೆಡೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಈ ನಡುವೆ ಯೋಗ ದಿನಾಚರಣೆಯ ಪ್ರಯುಕ್ತ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಸಿಬ್ಬಂದಿಗಳು ಹಿಮಾಚಲ ಪ್ರದೇಶದ ಎತ್ತರದ ಬಾರ್ಡರ್ ಔಟ್ ಪೋಸ್ಟ್‌ಗಳಲ್ಲಿ ಯೋಗಾಭ್ಯಾಸ ನಡೆಸಿದ್ದಾರೆ. ಹಿಮದಿಂದ ಆವೃತವಾದ ಉತ್ತರಾಖಂಡದ ಹಿಮಾಲಯದಲ್ಲಿ 22,850 ಅಡಿ ಎತ್ತರದಲ್ಲಿ ಯೋಗವನ್ನು ಅಭ್ಯಾಸ ಮಾಡಿ ಗಮನಸೆಳೆದಿದ್ದಾರೆ. ಒಟ್ಟು 14 ಸಿಬ್ಬಂದಿಗಳು ಸುಮಾರು 20 ನಿಮಿಷಗಳ ಕಾಲ ಯೋಗಾಭ್ಯಾಸ ನಡೆಸಿದ್ದಾರೆ.

TV9 Kannada


Leave a Reply

Your email address will not be published.