Investment: 100 ರೂಪಾಯಿ ಹೂಡಿಕೆ ಮಾಡಿ 25 ಲಕ್ಷ ರೂಪಾಯಿ ಪಡೆಯಿರಿ | PPF invest rs 100 per day in ppf get rs 25 lakh at the time of retirement


ನೀವು ಸುರಕ್ಷಿತ ಭವಿಷ್ಯಕ್ಕಾಗಿ ಅತ್ಯುತ್ತಮ ಹಣಕಾಸು ಹೂಡಿಕೆಯನ್ನು ಹುಡುಕುತ್ತಿದ್ದರೆ ಸಾರ್ವಜನಿಕ ಭವಿಷ್ಯ ನಿಧಿ ಉತ್ತಮ ಆಯ್ಕೆಯಾಗಿದೆ. ಈ ಯೋಜನೆ ಮೂಲಕ ನಿತ್ಯ 100 ರೂಪಾಯಿ ಹೂಡಿಕೆ ಮಾಡಿದರೆ ನಿಮ್ಮ ನಿವೃತ್ತಿ ಜೀವನಕ್ಕೆ ಸುರಕ್ಷಿತ ಆದಾಯ ಪಡೆಯಬಹುದು.

Investment: 100 ರೂಪಾಯಿ ಹೂಡಿಕೆ ಮಾಡಿ 25 ಲಕ್ಷ ರೂಪಾಯಿ ಪಡೆಯಿರಿ

ಸುರಕ್ಷಿತ ಭವಿಷ್ಯಕ್ಕಾಗಿ ಸಾರ್ವಜನಿಕ ಭವಿಷ್ಯ ನಿಧಿ ಅತ್ಯುತ್ತಮ ಹಣಕಾಸು ಹೂಡಿಕೆ ಆಯ್ಕೆ (ಸಾಂದರ್ಭಿಕ ಚಿತ್ರ)

ಹೆಚ್ಚಿನ ಜನರು ಆರ್ಥಿಕವಾಗಿ ಸುರಕ್ಷಿತ ಮತ್ತು ಸುರಕ್ಷಿತ ಭವಿಷ್ಯಕ್ಕಾಗಿ ಅತ್ಯುತ್ತಮ ಹಣಕಾಸು ಹೂಡಿಕೆಗಾಗಿ ಉತ್ತಮ ವೇದಿಕೆಯನ್ನು ಹುಡುಕಾಟ ನಡೆಸುತ್ತಿರುತ್ತಾರೆ. ಜನರ ಆಲೋಚನಾ ಪ್ರವೃತ್ತಿಯನ್ನು ಅನುಸರಿಸಿ ಹೂಡಿಕೆ ಮಾಡಲು ಹಲವಾರು ಯೋಜನೆಗಳಿವೆ. ಈ ಪೈಕಿ ಸಾರ್ವಜನಿಕ ಭವಿಷ್ಯ ನಿಧಿ (Public Provident Fund-PPF) ಇನ್ನೂ ಉತ್ತಮ ಆಯ್ಕೆ ಎಂದು ಪರಿಗಣಿಸಲಾಗುತ್ತದೆ.
ಕಡಿಮೆ ಬಡ್ಡಿ ದರದ ಹೊರತಾಗಿಯೂ ಪಿಪಿಎಫ್​ ಅನೇಕ ಪ್ರಯೋಜನಗಳನ್ನು ಹೊಂದಿದೆ. ಈ ಯೋಜನೆಯಲ್ಲಿ ಹಣ ಠೇವಣಿ ಇಟ್ಟರೆ ಹೂಡಿಕೆಯೂ ಆಗುವುದುರ ಜೊತೆಗೆ ತೆರಿಗೆಯೂ ಉಳಿತಾಯವಾಗಲಿದೆ. ಉದ್ಯೋಗಿ ಮತ್ತು ಸ್ವಯಂ ಉದ್ಯೋಗಿಗಳಿಬ್ಬರೂ ಇದರ ಪ್ರಯೋಜನವನ್ನು ಪಡೆಯಬಹುದು. ಈ ಉಳಿತಾಯ ಯೋಜನೆಯಲ್ಲಿ ಭದ್ರತೆಯನ್ನು ಸರ್ಕಾರವು ಖಾತರಿಪಡಿಸುತ್ತದೆ ಮತ್ತು ಆದಾಯವನ್ನು ಕೂಡ ಖಾತರಿಪಡಿಸುತ್ತದೆ.

ಮುಕ್ತಾಯದ ಮೇಲಿನ ಬಡ್ಡಿ ಆದಾಯ ಮತ್ತು ಮೆಚ್ಯೂರಿಟಿ ಮೊತ್ತವು ಇಲ್ಲಿ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ. ಇತರ ಯೋಜನೆಗಳಲ್ಲಿ, ಮ್ಯೂಚುವಲ್ ಫಂಡ್‌ಗಳಲ್ಲಿ ಆದಾಯವು ಖಂಡಿತವಾಗಿಯೂ ಹೆಚ್ಚಾಗಿರುತ್ತದೆ, ಆದರೆ 20 ಪ್ರತಿಶತದಷ್ಟು ದೀರ್ಘಾವಧಿಯ ಬಂಡವಾಳ ಲಾಭದ ತೆರಿಗೆಯನ್ನು ವಿಧಿಸಲಾಗುತ್ತದೆ. ಹಾಗಿದ್ದರೆ ಹೂಡಿಕೆಯ ಕೋನದಿಂದ ಈ ಯೋಜನೆಯ ಪ್ರತಿಯೊಂದು ಅಂಶವನ್ನು ನೋಡೋಣ.

ಇಕ್ವಿಟಿ ಮ್ಯೂಚುಯಲ್ ಫಂಡ್

ಇತ್ತೀಚಿನ ಹಣಕಾಸು ಸ್ವಾತಂತ್ರ್ಯ ಸಮೀಕ್ಷೆ ಫಲಿತಾಂಶದ ಪ್ರಕಾರ, ಇಕ್ವಿಟಿ ಮ್ಯೂಚುವಲ್ ಫಂಡ್‌ಗಳು ನಿವೃತ್ತಿಗೆ ಮೊದಲ ಆಯ್ಕೆಯಾಗಿದೆ. ಇದರ ನಂತರ ಉದ್ಯೋಗಿ ಭವಿಷ್ಯ ನಿಧಿ ಮತ್ತು ನಂತರ ಸಾರ್ವಜನಿಕ ಭವಿಷ್ಯ ನಿಧಿ. ಪಿಪಿಎಫ್ ದೀರ್ಘಾವಧಿಯಲ್ಲಿ ಉತ್ತಮ ಆದಾಯವನ್ನು ನೀಡುತ್ತದೆ. ನೀವೂ ಸಹ ನಿಮ್ಮ ನಿವೃತ್ತಿಗಾಗಿ ಯೋಜಿಸುತ್ತಿದ್ದರೆ ಈ ಯೋಜನೆಯಲ್ಲಿ ಹಣವನ್ನು ಠೇವಣಿ ಮಾಡಲು ಪ್ರಾರಂಭಿಸಬಹುದು.

ಮೆಚುರಿಟಿ ಅವಧಿ ಮತ್ತು ಹೂಡಿಕೆ ಲೆಕ್ಕಾಚಾರಗಳು

ಪಿಪಿಎಫ್​ನ ಮೆಚುರಿಟಿ ಅವಧಿಯು 15 ವರ್ಷಗಳಾಗಿವೆ. ಅದರ ನಂತರವೂ ಅದನ್ನು 5+5 ವರ್ಷಗಳಿಗೆ ವಿಸ್ತರಿಸಬಹುದು. ನಿತ್ಯ 100 ರೂಪಾಯಿ ಠೇವಣಿ ಇಟ್ಟರೆ ಒಂದು ವರ್ಷದಲ್ಲಿ 36,500 ರೂಪಾಯಿ ಜಮೆಯಾಗುತ್ತದೆ. ನೀವು ಈ ಹೂಡಿಕೆಯನ್ನು 15 ವರ್ಷಗಳವರೆಗೆ ಮಾಡಿದರೆ ಮತ್ತು ಪ್ರಸ್ತುತ ಇರುವ ಬಡ್ಡಿದರ ಶೇ.7.1 ಸ್ಥಿರವಾಗಿದ್ದರೆ ನೀವು ಒಟ್ಟು 9.89 ಲಕ್ಷ ರೂ.ವನ್ನು ಪಡೆಯುತ್ತೀರಿ. 15 ವರ್ಷಗಳಲ್ಲಿ ನಿಮ್ಮ ಠೇವಣಿ ಬಂಡವಾಳ 5,47,500 ರೂ. ಆಗಿರುತ್ತದೆ. ಇನ್ನು ನೀವು ಅವಧಿ ಮುಕ್ತಾಯಕ್ಕೂ ಮುನ್ನ ಮತ್ತೆ 5ವರ್ಷಗಳಿಗೆ ವಿಸ್ತರಿಸಬಹುದು. ನಂತರ ಮತ್ತೆ 5ವರ್ಷಗಳಿಗೆ ಅಂದರೆ 25 ವರ್ಷಗಳಿಗೆ ವಿಸ್ತರಿಸಬಹುದು. 25 ವರ್ಷಗಳಲ್ಲಿ 25 ಲಕ್ಷದ 8 ಸಾವಿರದ 284 ರೂಪಾಯಿ ಸಿಗಲಿದೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.