iPhone 15: ಐಫೋನ್ 15 ಬಗ್ಗೆ ಹೊರಬಿತ್ತು ಶಾಕಿಂಗ್ ವಿಚಾರ: ಇದರಲ್ಲಿರಲಿದೆ ಅಚ್ಚರಿಯ ಆಯ್ಕೆ – iPhone 15 series will ditch the lightning charging port and will switch to a USB-C port Kannada Technology News

USB-C Type Charger: 2023 ರಲ್ಲಿ ಬಿಡುಗಡೆ ಆಗಲಿರುವ ಐಫೋನ್ 15 ನಲ್ಲಿ USB-C (Type-C) ಚಾರ್ಜರ್‌ಗಳನ್ನು ಹೊಂದಿರಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಐಫೋನ್‌ಗಳಲ್ಲಿ ಯುಎಸ್‌ಬಿ ಟೈಪ್-ಸಿ ಚಾರ್ಜರ್‌ಗೆ ಬದಲಾಯಿಸಲು ಸಿದ್ದವಾಗಿರುವ ಬಗ್ಗೆ ಆ್ಯಪಲ್ ಕಂಪನಿಯ ಮಾರ್ಕೆಟಿಂಗ್ ಮುಖ್ಯಸ್ಥ ಗ್ರೆಗ್ ಜೋಸ್ವಿಯಾಕ್ ಹೇಳಿರುವುದನ್ನು ವರದಿ ಆಗಿದೆ.

Oct 28, 2022 | 3:35 PM

TV9kannada Web Team

| Edited By: Vinay Bhat

Oct 28, 2022 | 3:35 PM

ಆ್ಯಪಲ್ ಕಂಪನಿ ಪ್ರತಿವರ್ಷ ತನ್ನ ಐಫೋನ್​ನ ಹೊಸ ಹೊಸ ಆವೃತ್ತಿಯನ್ನು ಪರಿಚಯಿಸುತ್ತದೆ. ಕಳೆದ ವರ್ಷ ಐಫೊನ್ 13 ಅನ್ನು ಬಿಡುಗಡೆ ಮಾಡಿದ್ದ ಕಂಪನಿ ಈ ವರ್ಷ ಐಫೋನ್ 14 ರಿಲೀಸ್ ಮಾಡಿತ್ತು. 13 ಮತ್ತು 14 ಸರಣಿಯ ಫೋನ್​ಗಳಿಗೆ ಮಾರುಕಟ್ಟೆಯಲ್ಲಿ ಈಗಲೂ ಭರ್ಜರಿ ಬೇಡಿಕೆ ಇದೆ. ಹೀಗಿರುವಾಗ ಮುಂದಿನ ವರ್ಷ ಅನಾವರಣಗೊಳ್ಳಲಿರುವ ಐಫೋನ್ 15 ಬಗ್ಗೆ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ.

ಪ್ರತಿ ವರ್ಷ ಹೊಸ ಮಾಡೆಲ್ ಅನ್ನು ಬಿಡುಗಡೆ ಮಾಡುವ ಐಫೋನ್ ಅದಕ್ಕೆ ವಿಶೇಷ ಫೀಚರ್​ಗಳನ್ನು ಕೂಡ ಸೇರಿಸುತ್ತಾ ಬರುತ್ತಿದೆ. ಈ ವರ್ಷದ ಐಫೋನ್ 14  ಸರಣಿಯಲ್ಲಿ ಆಕರ್ಷಕವಾದ 48 ಮೆಗಾಫಿಕ್ಸೆಲ್ ಕ್ಯಾಮೆರಾ, ಸ್ಯಾಟಲೈಟ್ ಕನೆಕ್ಟಿವಿಟಿ, ಕ್ರ್ಯಾಶ್ ಡಿಟೆಕ್ಷನ್ ಸೇರಿದಂತೆ ನೂತನ ಆಯ್ಕೆ ಸೇರ್ಪಡೆ ಮಾಡಿತ್ತು.

ಇದೀಗ 2023 ರಲ್ಲಿ ಬಿಡುಗಡೆ ಆಗಲಿರುವ ಐಫೋನ್ 15 ನಲ್ಲಿ USB-C (Type-C) ಚಾರ್ಜರ್‌ಗಳನ್ನು ಹೊಂದಿರಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಐಫೋನ್‌ಗಳಲ್ಲಿ ಯುಎಸ್‌ಬಿ ಟೈಪ್-ಸಿ ಚಾರ್ಜರ್‌ಗೆ ಬದಲಾಯಿಸಲು ಸಿದ್ದವಾಗಿರುವ ಬಗ್ಗೆ ಆ್ಯಪಲ್ ಕಂಪನಿಯ ಮಾರ್ಕೆಟಿಂಗ್ ಮುಖ್ಯಸ್ಥ ಗ್ರೆಗ್ ಜೋಸ್ವಿಯಾಕ್ ಹೇಳಿರುವುದನ್ನು ವರದಿ ಆಗಿದೆ.

ಇ-ತ್ಯಾಜ್ಯವನ್ನು ಕಡಿಮೆ ಮಾಡುವ ಸಲುವಾಗಿ ಹಾಗೂ ಅಸ್ತಿತ್ವದಲ್ಲಿರುವ ಚಾರ್ಜರ್‌ಗಳನ್ನು ಮರುಬಳಕೆ ಮಾಡುವಂತೆ ಗ್ರಾಹಕರನ್ನು ಪ್ರೋತ್ಸಾಹಿಸಲು, ಯೂರೋಪ್‌ನಲ್ಲಿ ಮಾರಾಟ ಮಾಡಲಾಗುವ ಎಲ್ಲಾ ಗ್ಯಾಜೆಟ್ ಉತ್ಪನ್ನಗಳು USB-C (Type-C) ಚಾರ್ಜರ್‌ಗಳನ್ನು ಹೊಂದಿರಬೇಕು ಎಂಬ ನಿಯಮವನ್ನು ಈ ಹಿಂದೆ ಜಾರಿಗೊಳಿಸಲಾಗಿತ್ತು. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಆ್ಯಪಲ್ ಕಂಪನಿ ಇದೀಗ ಯುರೋಪಿಯನ್ ಯೂನಿಯನ್ ಕಾನೂನನ್ನು ಅನುಸರಿಸಲು ಮುಂದಾಗಿದೆ.

ಯುರೋಪಿಯನ್ ಕಮಿಷನ್ ಪ್ರಸ್ತಾಪಿಸಿದ್ದ ಹೊಸ ನಿಯಮದ ಅಡಿಯಲ್ಲಿ, ಯೂರೋಪ್‌ನಲ್ಲಿ ಮಾರಾಟ ಮಾಡಲಾಗುವ ಎಲ್ಲಾ ಪೋನ್‌ಗಳು 2024 ರ ವೇಳೆಗೆ USB-C ಚಾರ್ಜರ್‌ಗಳನ್ನು ಹೊಂದಿರಬೇಕು ಎಂದು ತಿಳಿಸಿತ್ತು. ಅದರಂತೆ ಇದೀಗ ಆ್ಯಪಲ್ ಕಂಪನಿ ಇದಕ್ಕೆ ಒಪ್ಪಿಗೆ ಸೂಚಿಸಿದ್ದು ಐಫೋನ್ 15ನಲ್ಲಿ USB-C ಚಾರ್ಜರ್‌ ಇರಲಿದೆ ಎಂದು ಹೇಳಲಾಗಿದೆ.

ಇನ್ನು ಆ್ಯಪಲ್ ಐಫೋನ್ 15ಜೊತೆ ಬಿಡುಗಡೆ ಆಗಲಿರುವ 15 ಪ್ರೊ ಮ್ಯಾಕ್ಸ್​ನಲ್ಲಿ A17 ಬಯೋನಿಕ್ ಚಿಪ್ ಇರಲಿದೆಯಂತೆ. ಇದು ಅತ್ಯಂತ ಬಲಿಷ್ಠವಾಗಿರಲಿದೆ ಎಂದು ಹೇಳಲಾಗಿದೆ. ಜೊತೆಗೆ 8GB RAM ಆಯ್ಕೆಯಿಂದ ಕೂಡಿರಲಿದೆ ಎಂಬ ಮಾತುಕೂಡ ಹರಿದಾಡುತ್ತಿದೆ.

ಐಫೋನ್ 15 ಕ್ಯಾಮೆರಾ 14ಗೆ ಹೋಲಿಸಿದರೆ ಹೆಚ್ಚಿನ ಗುಣಮಟ್ಟದಿಂದ ಕೂಡಿರಲಿದೆಯಂತೆ. ಮುಖ್ಯವಾಗಿ ಜೂಮ್ ಆಯ್ಕೆಯನ್ನು ಹೆಚ್ಚಿಸಲಾಗುತ್ತಿದ್ದು ಉತ್ತಮ ಕ್ವಾಲಿಟಿ ಪಡೆದುಕೊಂಡರಲಿದೆ ಎಂದು ಹೇಳಲಾಗಿದೆ.

Most Read StoriesTV9 Kannada

Leave a Reply

Your email address will not be published.