IPLಗೆ ಧೋನಿ ನಿವೃತ್ತಿ ಪಕ್ಕಾ..! CSK ನಾಯಕತ್ವದ ಪೈಪೋಟಿಯಲ್ಲಿ ಮೂವರು.!


MS ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​​ ಈ ಬಾರಿ 4ನೇ ಐಪಿಎಲ್​ ಕಿರೀಟಕ್ಕೆ ಮುತ್ತಿಕ್ಕಿತು. ಜೊತೆಗೆ ಐಪಿಎಲ್​ನ ಅತ್ಯಂತ ಯಶಸ್ವಿ ತಂಡಗಳ ಪಟ್ಟಿಯಲ್ಲೂ ಚೆನ್ನೈಗೆ 2ನೇ ಸ್ಥಾನ. ಇಷ್ಟರ ಮಟ್ಟಿಗೆ ತಂಡಕ್ಕೆ ಯಶಸ್ಸು ತಂದುಕೊಟ್ಟಿರುವ ಧೋನಿ, ಮುಂದಿನ IPLನಲ್ಲಿ ಸಿಎಸ್​​ಕೆ ಪರ ಕಣಕ್ಕಿಳಿಯಲ್ಲ ಅನ್ನೋದು ಕನ್ಫರ್ಮ್​ ಅಂತಾನೇ ಹೇಳಲಾಗ್ತಿದೆ.

ಧೋನಿ ನಿವೃತ್ತಿಯ ನಂತರ, ಚೆನ್ನೈ ಸೂಪರ್ ಕಿಂಗ್ಸ್‌ನ ಮುಂದಿನ ನಾಯಕ ಯಾರಾಗುತ್ತಾರೆ ಅನ್ನೋ ಕುತೂಹಲ ಇಂದಿಗೂ ಕಾಡ್ತಿದೆ. ಈ ಮಧ್ಯೆ ಚೆನ್ನೈ ಮಾಲೀಕ ಎನ್​.ಶ್ರೀನಿವಾಸನ್, ಧೋನಿ ಬಗ್ಗೆ ಬಹು ದೊಡ್ಡ ಹೇಳಿಕೆ ನೀಡಿದ್ರು. ತನ್ನ ಮೇಲೆ ಹೆಚ್ಚು ಹಣ ಹೂಡುವುದು ಬೇಡ ಎಂದು ಧೋನಿ ಹೇಳಿದ್ದಾರೆ ಅಂತ ಶ್ರೀನಿವಾಸನ್​ ಹೇಳಿದ್ರು. ಈ ಹೇಳಿಕೆ ನೀಡಿದ ಬೆನ್ನಲ್ಲೇ ಸಿಎಸ್​ಕೆಗೆ ನಾಯಕರಾಗಲು ಆಟಗಾರರು ಪೈಪೋಟಿಗೆ ಇಳಿದಿದ್ದಾರೆ. ಅದರಲ್ಲೂ ಈ ರೇಸ್​​ನಲ್ಲಿ ಮೂವರು ಆಟಗಾರರ ಹೆಸರು ದೊಡ್ಡದಾಗಿ ಕೇಳಿ ಬರ್ತಿದೆ.

ಋತುರಾಜ್​ ಗಾಯಕ್ವಾಡ್​, ರವೀಂದ್ರ ಜಡೇಜಾ ಮತ್ತು ಡೇವಿಡ್​ ವಾರ್ನರ್​​ ಹೆಸರು ಚೆನ್ನೈ ತಂಡಕ್ಕೆ ಮುಂದಿನ ನಾಯಕರ ರೇಸ್​​ನಲ್ಲಿವೆ. ಋತುರಾಜ್​​​​ಗೆ ಇನ್ನೂ ಯುವಕನಾಗಿದ್ದು, ಭವಿಷ್ಯದ ದೃಷ್ಟಿಯಿಂದ ಗಾಯಕ್ವಾಡ್​​ಗೆ ನಾಯಕತ್ವ ನೀಡಿದ್ರೆ ಉತ್ತಮ ಅನ್ನೋ ಮಾತುಗಳು ಕೇಳಿ ಬರ್ತಿವೆ. ಜಡೇಜಾ ಅನುಭವಿ ಆಟಗಾರನಾಗಿದ್ದು, ತಂಡದಲ್ಲಿ ದೀರ್ಘಕಾಲ ಪ್ರಯಾಣ ಬೆಳಸಿದ್ದಾರೆ. ಹಾಗಾಗಿ ಈ ಜವಾಬ್ದಾರಿಗೆ ಜಡೇಜಾ ಸೂಕ್ತ ಎನ್ನಲಾಗ್ತಿದೆ.

ಇವರ ಜೊತೆಗೆ ಸನ್​ರೈಸರ್ಸ್​ ತಂಡದ ಮಾಜಿ ನಾಯಕ ಡೇವಿಡ್​ ವಾರ್ನರ್​​​ನನ್ನು ತಂಡಕ್ಕೆ ಸೇರಿಸಿಕೊಂಡು ನಾಯಕತ್ವ ವಹಿಸುವ ನಿರ್ಧಾರಕ್ಕೂ ಬರಲಾಗಿದೆ ಎಂದು ಹೇಳಲಾಗ್ತಿದೆ. ಸನ್​ರೈಸರ್ಸ್​ ತಂಡವನ್ನ ಅತ್ಯದ್ಭುತವಾಗಿ ಮುನ್ನಡೆಸಿದ್ದಲ್ಲದೆ, ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟ ಕೀರ್ತಿ ಅವರಿಗಿದೆ. ಹಾಗಾಗಿ ಸಿಎಸ್​ಕೆ ಫ್ರಾಂಚೈಸಿ ಈ ನಿರ್ಧಾರಕ್ಕೆ ಬಂದಿದೆ ಎಂಬ ಮಾತಿದೆ. ಒಟ್ನಲ್ಲಿ ಸಿಎಸ್​ಕೆ ಯಾರಿಗೆ ಮಣೆ ಹಾಕುತ್ತೆ ಅನ್ನೋದನ್ನ ಕಾದುನೋಡಬೇಕಿದೆ.!

News First Live Kannada


Leave a Reply

Your email address will not be published.