IPLನಲ್ಲಿ ಇಂಗ್ಲೆಂಡ್​ ಆಟಗಾರರು ಆಡೋದು ಅನುಮಾನ -ಇದು ಶಿಕ್ಷೆನಾ? ಎಚ್ಚರಿಕೆನಾ?


ಇಂಡಿಯನ್​ ಪ್ರೀಮಿಯರ್​ ಲೀಗ್​ನ ಮೆಗಾ ಆಕ್ಷನ್​ಗೆ ಭರ್ಜರಿ ಸಿದ್ಧತೆ ಆರಂಭವಾಗಿದೆ. ಆಳೆದು ತೂಗಿ ಯಾವ ಆಟಗಾರರನ್ನ ಆಯ್ಕೆ ಮಾಡಿಕೊಳ್ಳಬೇಕು ಅನ್ನೋ ಪಟ್ಟಿಯನ್ನೂ ತಂಡಗಳು ಸಿದ್ಧಪಡಿಸಿಕೊಂಡಿವೆ. ಹಾಗೆ ಫೈನಲ್​ ಮಾಡಿಕೊಂಡಿದ್ದ ಪಟ್ಟಿಯಲ್ಲಿದ್ದ ಇಂಗ್ಲೆಂಡ್​ ಆಟಗಾರರ ಹೆಸರನ್ನ ಕಿತ್ತು ಹಾಕಬೇಕಾದ ಪರಿಸ್ಥಿತಿ ಈಗ ನಿರ್ಮಾಣವಾಗಿದೆ.

2 ದಿನಗಳ ಹಿಂದೆ ಎಜಿಎಮ್​ ಮೀಟಿಂಗ್​ ನಡೆಸಿದ ಐಪಿಎಲ್​ ಆಡಳಿತ ಮಂಡಳಿ ಹಲವು ಪ್ರಮುಖ ನಿರ್ಣಯಗಳನ್ನ ಕೈಗೊಂಡಿದೆ. ನೂತನ ಫ್ರಾಂಚೈಸಿಗಳಿಗೆ ಅಧಿಕೃತವಾಗಿ ಗ್ರೀನ್​ ಸಿಗ್ನಲ್​ ನೀಡಿದ್ದು, ಡ್ರಾಫ್ಟ್​ ಪಿಕ್​ಗೆ ಕಾಲಾವಕಾಶವನ್ನ ವಿಸ್ತರಿಸಿದ್ದು ಸಭೆಯ ಬಳಿಕ ಹೆಚ್ಚು ಸುದ್ದಿಯಾಯ್ತು. ಆದರೆ ಐಪಿಎಲ್​ ಮೆಗಾ ಹರಾಜಿಗೆ ಸಂಬಂಧಿಸಿದಂತೆ ತೆಗೆದುಕೊಂಡ ಪ್ರಮುಖ ನಿರ್ಣಯ ಸದ್ದು ಮಾಡಲಿಲ್ಲ.

ಹರಾಜಿಗೆ ಆಟಗಾರರ ನೋಂದಣಿಗೆ ದಿನಾಂಕ ನಿಗದಿ
ಐಪಿಎಲ್​ ಮೆಗಾ ಆಕ್ಷನ್​ಗೆ ಫ್ರಾಂಚೈಸಿಗಳ ಭರ್ಜರಿ ಸಿದ್ಧತೆ ಆರಂಭವಾಗಿದೆ. ಫೆಬ್ರವರಿ 12 ಮತ್ತು 13ಕ್ಕೆ ಆಕ್ಷನ್ ನಡೆಯುತ್ತೆ ಎನ್ನಲಾಗ್ತಿದ್ದು, ಯಾವೆಲ್ಲಾ ಆಟಗಾರರನ್ನ ಖರೀದಿ ಮಾಡಬೇಕು ಅನ್ನೋ ಲೆಕ್ಕಾಚಾರವೂ ಜೋರಾಗಿದೆ. ಇದೀಗ ಹರಾಜು ಪ್ರಕ್ರಿಯೆಗೆ ಆಟಗಾರರು ತಮ್ಮ ಹೆಸರನ್ನ ನೋಂದಣಿ ಮಾಡಿಕೊಳ್ಳಲು ಗ್ರೀನ್​ ಸಿಗ್ನಲ್​ ನೀಡಲಾಗಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಫೆಬ್ರವರಿ ಮೊದಲ ವಾರದವರೆಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ.

ನೋಂದಣಿಗೆ ಅವಕಾಶದ ಬೆನ್ನಲ್ಲೇ ಇಂಗ್ಲೆಂಡ್​ ಆಟಗಾರರಿಗೆ ಶಾಕ್
ಐಪಿಎಲ್​ ಆಡಳಿತ ಮಂಡಳಿ ಹರಾಜಿಗೆ ಆಟಗಾರರ ನೋಂದಣಿಗೆ ಅವಕಾಶವನ್ನೇನೋ ನೀಡಿದೆ. ಆದ್ರೆ, ಅದರ ಬೆನ್ನಲ್ಲೇ ಇಂಗ್ಲೆಂಡ್​ ಆಟಗಾರರಿಗೆ ಇಸಿಬಿ ಹಾಗೂ ವೇಲ್ಸ್​ ಕ್ರಿಕೆಟ್​ ಮಂಡಳಿ ಶಾಕ್​ ನೀಡಿದೆ. ಹರಾಜಿನ ಭಾಗವಾಗಲು ಸಿದ್ಧರಾಗಿದ್ದ ಜಾನಿ ಬೇರ್​ ಸ್ಟೋ, ಜೋಸ್​ ಬಟ್ಲರ್​, ಇಯಾನ್​ ಮಾರ್ಗನ್​, ಸ್ಯಾಮ್​ ಕರನ್​ ಸೇರಿದಂತೆ ಇಂಗ್ಲೆಂಡ್​ನ ಎಲ್ಲಾ ಆಟಗಾರರಿಗೆ ಐಪಿಎಲ್​ ಆಡೋ ಅವಕಾಶವನ್ನ ನಿರಾಕರಿಸುವ ಸಾಧ್ಯತೆಯಿದೆ.

ಆ್ಯಷನ್​ನ ಕಳಪೆ ಪ್ರದರ್ಶನಕ್ಕೆ ಇದು ಶಿಕ್ಷೆನಾ? ಎಚ್ಚರಿಕೆನಾ?
ಮೂಲಗಳ ಪ್ರಕಾರ ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿ ಆಟಗಾರರಿಗೆ ಅವಕಾಶ ನಿರಾಕರಿಸಲು ಪ್ರತಿಷ್ಠಿತ ಆ್ಯಷನ್​ನಲ್ಲಿ ನೀಡಿದ ಕಳಪೆ ಪ್ರದರ್ಶನ ಕಾರಣ ಎನ್ನಲಾಗ್ತಿದೆ. ಸದ್ಯ ನಡೆಯುತ್ತಿರುವ ಆ್ಯಷಸ್​ ಸರಣಿಯಲ್ಲಿ ಇಂಗ್ಲೆಂಡ್​ ಹೀನಾಯ ಪ್ರದರ್ಶನ ನೀಡಿದ್ದು, ಆಡಿದ 4 ಪಂದ್ಯಗಳಲ್ಲಿ 3 ಪಂದ್ಯ ಸೋಲು 1ರಲ್ಲಿ ಡ್ರಾ ಸಾಧಿಸಿದೆ. ಪ್ರತಿಷ್ಠೆಯ ಸರಣಿಯನ್ನ ಕೈಚೆಲ್ಲಿದ ಬೆನ್ನಲ್ಲೇ, ಟೀಕೆಗಳು ತೂರಿ ಬಂದಿವೆ. ಹೀಗಾಗಿ ಇಂಗ್ಲೆಂಡ್​ ಮಂಡಳಿ ಈ ನಿರ್ಧಾರ ಕೈಗೊಳ್ಳಲಿದೆ ಎನ್ನಲಾಗ್ತಿದೆ. ಅದರ ಬೆನ್ನಲ್ಲೇ, ಇದನ್ನ ಆ್ಯಷನ್​ನ ಕಳಪೆ ಪ್ರದರ್ಶನಕ್ಕೆ ನೀಡಲಾಗ್ತಿರುವ ಶಿಕ್ಷೆನಾ? ಅಥವಾ ವಾರ್ನಿಂಗಾ? ಎಂಬ ಚರ್ಚೆಯೂ ಹುಟ್ಟಿಕೊಂಡಿದೆ.

News First Live Kannada


Leave a Reply

Your email address will not be published. Required fields are marked *