ಎಬಿ ಡಿವಿಲಿಯರ್ಸ್ ಈ ಬಾರಿ ಐಪಿಎಲ್ನಲ್ಲಿ ಇಲ್ಲದಿರುವುದು ಸಾಕಷ್ಟು ಅಭಿಮಾನಿಗಳನ್ನ ನಿರಾಸೆಗೊಳಿಸಿದೆ. ಆದ್ರೆ, ದಕ್ಷಿಣ ಆಫ್ರಿಕಾದಲ್ಲಿ ‘ಬೇಬಿ ಎಬಿ’ ಅಂತಲೇ ಕರೆಸಿಕೊಳ್ಳೋ ಡೆವಾಲ್ಡ್ ಬ್ರೆವಿಸ್ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಬ್ಯಾಟ್ ಬೀಸೋದಕ್ಕೆ ಸಜ್ಜಾಗಿದ್ದಾರೆ.
ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಮುಂಬೈ ಪಾಲಾಗಿರೋ ಡೆವಾಲ್ಡ್, ರೋಹಿತ್ ಶರ್ಮಾ ನಾಯಕತ್ವದಡಿ ಸಾಮರ್ಥ್ಯ ಸಾಬೀತುಪಾಡಿಸಲು ಸಜ್ಜಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಬ್ರೆವಿಸ್, ಸಚಿನ್ ತೆಂಡೂಲ್ಕರ್ ನನ್ನ ಬಾಲ್ಯದ ಹೀರೋ ಎಂದು ಕ್ರಿಕೆಟ್ ದೇವರನ್ನು ಹಾಡಿ ಹೊಗಳಿದ್ದಾರೆ. ಅಲ್ಲದೇ ಭಾರತದ ನೆಲದ ಮೇಲೆ ಕಾಲಿಡುತ್ತಿರುವುದು ನನಗೆ ಹೆಮ್ಮೆಯ ವಿಷಯ, ರೋಹಿತ್ ನಾಯಕತ್ವದಲ್ಲಿ ಆಡಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.
ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಬ್ರೆವಿಸ್ ಅವರನ್ನ ಮೂರು ಕೋಟಿಗೆ ಖರೀದಿ ಮಾಡಿದೆ.