ಎಬಿ ಡಿವಿಲಿಯರ್ಸ್ ಮತ್ತು ಕೀರನ್ ಪೊಲ್ಲಾರ್ಡ್… ಈ ಇಬ್ಬರಲ್ಲಿ ಯಾರು ಬೆಸ್ಟ್​ ಫಿನಿಷರ್ಸ್ ..? ಇಬ್ಬರೂ ಡೆಡ್ಲಿ ಅಂಡ್ ಡೇಂಜರಸ್ ಬ್ಯಾಟ್ಸ್​ಮನ್. ತಂಡದ ಗೇಮ್ ಚೇಂಜರ್ಸ್ ಆಗಿರುವ ಇಬ್ಬರೂ, ಅದೆಷ್ಟೋ ಮ್ಯಾಚ್​ಗಳನ್ನ ಸಿಂಗಲ್ ಆಗಿ ಗೆಲ್ಲಿಸಿಕೊಟ್ಟಿದ್ದಾರೆ. ಆದ್ರೆ ಐಪಿಎಲ್​ ಸೀಸನ್-14ರಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿರುವ ಉಭಯ ಆಟಗಾರರು, ಇದೀಗ ಕ್ರಿಕೆಟ್ ಅಭಿಮಾನಿಗಳ ಚರ್ಚೆಗೆ ಕಾರಣರಾಗಿದ್ದಾರೆ.

ಕಿಲ್ಲರ್ ಕೊರೊನಾಗೆ 14ನೇ ಆವೃತ್ತಿಯ ಐಪಿಎಲ್ ಬಲಿಯಾಗಿದೆ. ನಡೆದ ಅರ್ಧದಷ್ಟು ಪಂದ್ಯಗಳೇ ಕ್ರಿಕೆಟ್​ ಫ್ಯಾನ್ಸ್​ಗೆ ಭರಪೂರ ಮನರಂಜನೆ ನೀಡಿದೆ. ಅದ್ರಲ್ಲೂ ಈ ಬಾರಿಯ ಐಪಿಎಲ್​​ನಲ್ಲಿ ವಿಂಡೀಸ್ ದೈತ್ಯ ಕೀರನ್ ಪೊಲ್ಲಾರ್ಡ್​, ಸೌತ್​ ಆಫ್ರಿಕಾದ ಸೂಪರ್ ಸ್ಟಾರ್​ ಎಬಿ ಡಿವಿಲಿಯರ್ಸ್ ಅಬ್ಬರ, ಕ್ರಿಕೆಟ್​ ಅಭಿಮಾನಿಗಳಿಗೆ ಮತ್ತಷ್ಟು ಎಂಟರ್​ಟೈನ್ಮೆಂಟ್ ನೀಡಿರೋದ್ರಲ್ಲಿ ಎರಡು ಮಾತಿಲ್ಲ.. ಚೆನ್ನೈ ಸೂಪರ್​ ಕಿಂಗ್ಸ್ ವಿರುದ್ಧದ ಕೀರನ್ ಪೊಲ್ಲಾರ್ಡ್​ ಸಿಡಿಲಬ್ಬರದ ಬ್ಯಾಟಿಂಗ್​, ಈ ಟೂರ್ನಿಯ ಪ್ರಮುಖ ಹೈಲೈಟ್ಸ್​..

ಹೌದು…! ​ಅಸಾಧ್ಯದ ಗುರಿ ಬೆನ್ನಟ್ಟಿದ್ದ ಮುಂಬೈ, ಸಂಕಷ್ಟಕ್ಕೆ ಸಿಲುಕಿದ್ದಾಗ ಅಪದ್ಬಾಂಧವನಾಗಿದ್ದೇ ಈ ಪೋಲಾರ್ಡ್​, ಇದೇ ರೀತಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಅಪದ್ಬಾಂಧವನಾಗಿ ಕಾಣಿಸಿಕೊಂಡಿದ್ದು ಎಬಿ ಡಿವಿಲಿಯರ್ಸ್. ಬೇರೆ ಬೇರೆ ತಂಡಗಳ ಪರ ಬ್ಯಾಟ್ ಬೀಸೋ ಈ ಇಬ್ಬರು, ಟೂರ್ನಿಯಲ್ಲೇ ತಮ್ಮದೇ ಆದ ಟ್ರೇಡ್ ಮಾರ್ಕ್ ಒಂದನ್ನ ಸೃಷ್ಟಿಸಿದ್ದಾರೆ. ಆದ್ರೆ ಈ ಇಬ್ಬರ ನಡುವಿನ ಒಂದು ವಿಚಾರ ಯಾರು ಬೆಸ್ಟ್​ ಅನ್ನೋ ಚರ್ಚೆಗೆ ನಾಂದಿ ಹಾಡಿದೆ.

ಇಬ್ಬರಲ್ಲಿ ಯಾರು ಐಪಿಎಲ್​​ನ ಬೆಸ್ಟ್ ಫಿನಿಷರ್​..?
ಎಬಿ ಡಿವಿಲಿಯರ್ಸ್ & ಕೀರನ್ ಪೊಲ್ಲಾರ್ಡ್… ಈ ಇಬ್ಬರು ಐಪಿಎಲ್​​ನಲ್ಲಿ ಮೋಸ್ಟ್​ ಡೇಂಜರಸ್​ ಬ್ಯಾಟ್ಸ್​ಮನ್​ಗಳು. ತಮ್ಮ ವಿಧ್ವಂಸಕ ಬ್ಯಾಟಿಂಗ್​​ಗೆ ಎದುರಾಳಿ ಖಲ್ಲಾಸ್ ಆಗೋದು ಪಕ್ಕ. ಹಾಗಾಗಿಯೇ ಐಪಿಎಲ್​​ನಲ್ಲಿ ಈ ಇಬ್ಬರು ಬ್ಯಾಟ್ಸ್​ಮನ್​ಗಳಿಗೆ ಪ್ರತ್ಯೇಕ ಸ್ಥಾನಮಾನವಿದೆ. ಮ್ಯಾಚ್ ಫಿನಿಷರ್​ಗಳ ಪಟ್ಟಿಯಲ್ಲಿ ತಮ್ಮದೇ ಆದ ಸ್ಥಾನವಿದೆ. ಓವರ್​ ಆಲ್ ಅಂಕಿ ಅಂಶಗಳ ವಿಚಾರದಲ್ಲಿ ಹಿಂದೆ ಮುಂದೆ ಇದ್ದರೂ, ಮ್ಯಾಚ್​ ಫಿನಿಷರ್​ ವಿಚಾರದಲ್ಲಿ ಈ ಇಬ್ಬರ ಸ್ಥಾನಮಾನ ಅಳೆಯೋದು ಅಷ್ಟು ಸುಲಭದ ಮಾತಲ್ಲ.

ಚೇಸಿಂಗ್, ಡೆತ್​ ಓವರ್ ಬ್ಯಾಟಿಂಗ್​ನಲ್ಲಿ ಇವರಿಗಿಲ್ಲ ಸಾಟಿ
ಯೆಸ್..! ಟಿ20 ಫಾರ್ಮೆಟ್​ಗೆ ಹೇಳಿ ಮಾಡಿಸಿರುವ ಈ ಆಟಗಾರರು, ಕ್ರಿಸ್​​ನಲ್ಲಿ ನೆಲೆ ನಿಂತಷ್ಟು ಎದುರಾಳಿಗೆ ಅಪಾಯ ಗ್ಯಾರಂಟಿ. ಅದ್ರಲ್ಲೂ ಸ್ಲಾಗ್ ಓವರ್​​ಗಳಲ್ಲಿ ಕ್ರೀಸ್​​ನಲ್ಲಿದ್ದರೇ, ಹೇಳೋದೇ ಬೇಡ. ಯಾಕಂದ್ರೆ ರನ್ ಸುನಾಮಿಯೇ ಅಲ್ಲಿ ಸೃಷ್ಟಿಯಾಗಿ ಬಿಡುತ್ತೆ. ಸ್ಲಾಗ್ ಓವರ್​​​​ಗಳಲ್ಲಿ ಆಟಗಾರನ ಪ್ರದರ್ಶನವೂ ಒಬ್ಬ ಆಟಗಾರನ ರೆಸ್ಪಾನ್ಸಿಬಿಲಿಟಿ ತಿಳಿಸುತ್ತೆ. ಇನ್ನೂ ಚೇಸಿಂಗ್​ ವೇಳೆ ಈ ಇಬ್ಬರು ಕ್ರೀಸ್​ನಲ್ಲಿದ್ದರೆ, ಎರಡು ಬಾಹುಗಳೊಂದಿಗೆ ಗೆಲುವಿನ ದಡ ಸೇರಿಸೋದ್ರಲ್ಲಿ ಎರಡು ಮಾತಿಲ್ಲ. ಇದು ಜಸ್ಟ್ ನಾವ್ ಹೇಳ್ತಿರೋ ಮಾತಲ್ಲ. ಅಂಕಿಅಂಶಗಳೂ ಸಹ ಇವರಿಗೆ ಇವರೇ ಸಾಟಿ ಅಂತಾ ಹೇಳ್ತಿವೆ.

76 ಇನ್ನಿಂಗ್ಸ್​ಗಳಲ್ಲಿ ಎಬಿ ಡಿವಿಲಿಯರ್ಸ್,​ ಡೆತ್​ ಓವರ್​​ಗಳಲ್ಲಿ ಬ್ಯಾಟಿಂಗ್ ನಡೆಸಿದ್ದು, 46.36 ಸರಾಸರಿಯಲ್ಲಿ 1808 ರನ್ ಕಲೆಹಾಕಿದ್ರೆ, 224 ಸ್ಟ್ರೈಕ್​ರೇಟ್​ ಹೊಂದಿದ್ದಾರೆ. ಇನ್ನ 116ರ ಪಂದ್ಯಗಳಲ್ಲಿ ಬ್ಯಾಟಿಂಗ್ ನಡೆಸಿರೋ ಪೊಲ್ಲಾರ್ಡ್​, 27.03ರ ಸರಾಸರಿಯಲ್ಲಿ1892 ರನ್ ಗಳಿಸಿದ್ದು, 173 ಸ್ಟ್ರೈಕ್​​ರೇಟ್​ ಹೊಂದಿದ್ದಾರೆ.

ಇಷ್ಟೇ ಅಲ್ಲ..! ತಂಡದ ಗೆಲುವಿನ ಸರಾಸರಿ ಕೊಡುಗೆಯಲ್ಲೂ ಇವರಿಬ್ಬರ ಪಾತ್ರ ಬಹುಮುಖ್ಯವಾಗಿದೆ. ರಾಯಲ್ ಚಾಲೆಂಜರ್ಸ್ ಪರ ಎಬಿ ಡಿವಿಲಿಯರ್ಸ್, ತಂಡದ ಗೆಲುವಿನಲ್ಲಿ ಇಂಪಾರ್ಟ್​ಟೆಂಟ್ ರೋಲ್ ಪ್ಲೇ ಮಾಡಿದ್ದಾರೆ. ಮುಂಬೈ ಪರ ಕೀರನ್ ಪೊಲ್ಲಾರ್ಡ್​ ಕೂಡ ಅಷ್ಟೆ ಇಂಪ್ಯಾಕ್ಟ್​ ಕ್ರಿಯೇಟ್​ ಮಾಡಿದ್ದಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ಆಯಾ ತಂಡಗಳ ಗೆಲುವಿನಲ್ಲಿ ಉಭಯ ಆಟಗಾರರ ಗೆಲುವಿನ ಸರಾಸರಿ ಕೊಡುಗೆಯಲ್ಲಿ ಎಬಿಡಿ ಮುಂದಿದ್ದಾರೆ. 70 ಇನ್ನಿಂಗ್ಸ್​​ಗಳಿಂದ 84.49 ಸರಾಸರಿಯಲ್ಲಿ 2957 ರನ್ ಕಲೆಹಾಕಿದ್ರೆ. 168 ಸ್ಟ್ರೈಕ್​ರೇಟ್​ ಹೊಂದಿದ್ದಾರೆ. ಇನ್ನೂ 85 ಇನ್ನಿಂಗ್ಸ್​ಗಳಲ್ಲಿ 40.28ರ ಸರಾಸರಿಯಲ್ಲಿ 2014 ರನ್ ಗಳಿಸಿರುವ ಪೊಲ್ಲಾರ್ಡ್, ತಂಡದ ಗೆಲುವಿಗೆ ಕಾರಣ ಕರ್ತರಾಗಿದ್ದಾರೆ.

ಇಷ್ಟೇ ಅಲ್ಲ..! ಕ್ರೀಸ್​​ನಲ್ಲಿದ್ದಾಗ ಬಹುತೇಕ ಪಂದ್ಯಗಳನ್ನ ಗೆಲ್ಲಿಸಿಕೊಟ್ಟ ಹೆಗ್ಗಳಿಕೆ, ಉಭಯ ಆಟಗಾರರದ್ದಾಗಿದೆ. ಎಬಿಡಿ 79 ಪಂದ್ಯಗಳಲ್ಲಿ 37ರಲ್ಲಿ ಗೆಲುವಿನ ದಡ ಸೇರಿಸಿದ್ರೆ, ಇವುಗಳಲ್ಲಿ 18 ಪಂದ್ಯಗಳಲ್ಲಿ ಅಜೇಯರಾಗಿ ಉಳಿದಿದ್ದಾರೆ. ಪೊಲ್ಲಾರ್ಡ್​, 63 ಇನ್ನಿಂಗ್ಸ್​ಗಳಲ್ಲಿ 33 ಗೆದ್ದು ಕೊಟ್ಟಿದ್ರೆ, 15 ಪಂದ್ಯಗಳಲ್ಲಿ ಅಜೇಯರಾಗಿ ಉಳಿದು ತಂಡಕ್ಕೆ ಗೆಲುವಿನ ದಡ ಸೇರಿಸಿದ್ರು… ಒಟ್ನಲ್ಲಿ.. ಮ್ಯಾಚ್ ಫಿನಿಷರ್ ವಿಚಾರದಲ್ಲಿ ಉಭಯ ಆಟಗಾರರ ಟ್ರ್ಯಾಕ್ ರೆಕಾರ್ಡ್ ಹೆಚ್ಚು ಕಡಿಮೆ ಒಂದೇ ಆಗಿದ್ದು, ಐಪಿಎಲ್​​ನ ಮ್ಯಾಚ್​ ಫಿನಿಷರ್​​​ ಆಗಿಯೂ ಇವರಿಗೆ ಇವರೇ ಸಾಟಿ ಅನ್ನೋದ್ರಲ್ಲಿ ಸಂದೇಹವಿಲ್ಲ.

The post IPLನ ಬೆಸ್ಟ್ ಮ್ಯಾಚ್ ಫಿನಿಷರ್ಸ್​!- ಚೇಸಿಂಗ್, ಡೆತ್​ ಓವರ್ ಬ್ಯಾಟಿಂಗ್​ನಲ್ಲಿ ಇವರಿಗಿಲ್ಲ ಸಾಟಿ appeared first on News First Kannada.

Source: newsfirstlive.com

Source link