ಕೊರೊನಾತಂಕದಿಂದ ಭಾರತದ ರಾಜ್ಯಗಳು ಕ್ಲೋಸ್​ಡೌನ್ ಮೂಡ್​ನಲ್ಲಿವೆ. ಇನ್ನೊಂದೆಡೆ ಕೊರೊನಾಗೆ ಸೆಡ್ಡು ಹೊಡೆದು ನಿಂತಿರುವ ವಿಶ್ವದ ಶೀಮಂತ ಲೀಗ್​​ ಐಪಿಎಲ್​ ಯಶಸ್ವಿಯಾಗಿ ಅಂತ್ಯಗೊಳಿಸುವ ಪಣತೊಟ್ಟಿದೆ. ಹೀಗಾಗಿ ಬಿಗ್​ಬಾಸ್​​ಗಳು ಬಯೋ ಬಬಲ್​​ನಲ್ಲಿ ಸ್ಟ್ರಿಕ್ಟ್​​ ರೂಲ್ಸ್​ ಜಾರಿ ಮಾಡಿದ್ದಾರೆ.

ಐಪಿಎಲ್​​ನಲ್ಲಿ ಈ ಮೊದಲು 5 ದಿನಗಳಿಗೊಮ್ಮೆ ನಡೆಯುತ್ತಿದ್ದ ಕೋವಿಡ್​ ಟೆಸ್ಟ್​ ಅನ್ನ 2 ದಿನಕ್ಕೊಮ್ಮೆ ನಡೆಸಲು ಐಪಿಎಲ್​ ಆಡಳಿತ ಮಂಡಳಿ ನಿರ್ಧರಿಸಿದೆ. ಇಷ್ಟೇ ಅಲ್ಲ, ಆಟಗಾರರು ಹಾಗೂ ಸಿಬ್ಬಂದಿ ವರ್ಗ ಹೋಟೆಲ್​​ಗಳಿಂದ ತರಿಸಿಕೊಳ್ಳುತ್ತಿದ್ದ ಆಹಾರಕ್ಕೂ ಆಡಳಿತ ಮಂಡಳಿ ಬ್ರೇಕ್​ ಹಾಕಿದೆ. ಈ ಮೂಲಕ ಆಟಗಾರರು ಹಾಗೂ ಹೊರ ಜಗತ್ತಿನ ನಡುವಿನ ಸಂಪರ್ಕವನ್ನ ಬಿಸಿಸಿಐ ಸಂಪೂರ್ಣ ಕಡಿತಗೊಳಿಸಿದೆ. ಜೊತೆಗೆ ಮೇ.1ರಿಂದ ಭಾರತೀಯ ಆಟಗಾರರಿಗೆ ಕೋವಿಡ್ ಲಸಿಕೆ ನೀಡಲು ರೂಪುರೇಷೆಯನ್ನ ಸಿದ್ಧಪಡಿಸಿದೆ.

The post IPL​​ ಬಯೋ ಬಬಲ್​​ನಲ್ಲಿ ಹೊಸ ರೂಲ್ಸ್​​​; ಔಟ್​ಸೈಡ್ ಫುಡ್​ಗೆ ಬ್ರೇಕ್​, 2 ದಿನಕ್ಕೊಮ್ಮೆ ಟೆಸ್ಟ್ appeared first on News First Kannada.

Source: newsfirstlive.com

Source link