ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 2022 ಮೆಗಾ ಆಕ್ಷನ್ನಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟರ್ಸ್, ಭಾರಿ ಮೊತ್ತಕ್ಕೆ ವಿವಿಧ ತಂಡಗಳಿಗೆ ಸೇಲ್ ಆಗಿದ್ದಾರೆ. ಅದರಲ್ಲೂ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ನಿಕೊಲಸ್ ಪೂರನ್ಗೆ ಭಾರೀ ಅದೃಷ್ಟ ಖುಲಾಯಿಸಿದೆ.
10.75 ಕೋಟಿ ನೀಡಿ ಸನ್ರೈಸರ್ಸ್ ಹೈದ್ರಬಾದ್ ಫ್ರಾಂಚೈಸಿ ಪೂರನ್ರನ್ನ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ಇದರಿಂದ ಫುಲ್ ಖುಷಿಯಲ್ಲಿರೋ ಪೂರನ್, ತಂಡದ ಆಟಗಾರರಿಗೆ ಭರ್ಜರಿ ಪಾರ್ಟಿ ನೀಡಿದ್ದಾರೆ.
15 ಸಾವಿರ ರೂಪಾಯಿ ಖರ್ಚು ಮಾಡಿ ಸಹ ಆಟಗಾರರ ಜತೆಗೂಡಿ ಪಿಜಾ ಮಾರ್ಟಿ ಮಾಡಿದ್ದಾರೆ. ಕಳೆದ ಬಾರಿ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದ ಪೂರನ್ ಕಳಪೆ ಫಾರ್ಮ್ನಿಂದ ಟೀಕೆಗೆ ಗುರಿಯಾಗಿದ್ರು. ಹೀಗಿದ್ರೂ.. ಮೆಗಾ ಹರಾಜಿನಲ್ಲಿ ಪೂರನ್ಗೆ ಇಷ್ಟು ದೊಡ್ಡ ಮೊತ್ತ ನೀಡಿರುವುದು ಕ್ರಿಕೆಟ್ ಫ್ಯಾನ್ಸ್ ಅಚ್ಚರಿಗೆ ಕಾರಣವಾಗಿದೆ.