IPL​​ 2022: ಆವೇಶ್​ ಖಾನ್​​​ಗೆ ಡೆಲ್ಲಿ ಕ್ಯಾಪ್ಟನ್​ ರಿಷಭ್​​ ಪಂತ್​​ ಕ್ಷಮೆ ಕೇಳಿದ್ಯಾಕೆ..?


ಡೆಲ್ಲಿ ಕ್ಯಾಪಿಟಲ್ಸ್​ ಕ್ಯಾಪ್ಟನ್ ತಮ್ಮ ತಂಡದ ಮಾಜಿ ಆಟಗಾರ ಆವೇಶ್ ಖಾನ್​ಗೆ SORRY ಕೇಳಿದ್ದಾರೆ. ನಿನ್ನನ್ನ ಡೆಲ್ಲಿ ತಂಡದಲ್ಲಿ ಉಳಿಸಿಕೊಳ್ಳಲಾಗಲಿಲ್ಲ ದಯವಿಟ್ಟು ಕ್ಷಮಿಸು ಎಂದು ಹೇಳುವ ಮೂಲಕ ಆವೇಶ್ ಖಾನ್​ ಮುಂದೆ ತಮ್ಮ ಬೇಸರ ವಕ್ತಪಡಿಸಿದ್ದಾರೆ. ನಾನು ಕೋಲ್ಕತ್ತಾದಲ್ಲಿ ರಿಷಭ್​​ ಪಂತ್​ರನ್ನ ಭೇಟಿಯಾದ ವೇಳೆ ಪಂತ್​, ನನ್ನನ್ನು ತಬ್ಬಿಕೊಂಡರು. ಬಳಿಕ SORRY ನಾವು ನಿನ್ನನ್ನು ಖರೀದಿಸಲು ಸಾಧ್ಯವಾಗಲಿಲ್ಲ ಅಂದ್ರು ಎಂದು ಆವೇಶ್ ಖಾನ್​ ಹೇಳಿದ್ದಾರೆ.

ನಾನು ಮತ್ತು ರಿಷಭ್​​ ಪಂತ್​ ಅಂಡರ್-19 ತಂಡದಲ್ಲಿ ಒಟ್ಟಿಗೆ ಆಡಿದ್ದೆವು. ಪ್ರತಿ ಪಂದ್ಯದ ನಂತರ ನಾವಿಬ್ರು ಕೂತು ಮಾತಾಡುತ್ತಿದ್ವಿ. ನಮ್ಮಿಬ್ಬರ ಭಾಂದವ್ಯ ತುಂಬಾ ಗಟ್ಟಿಯಾಗಿದೆ ಎಂದು ಆವೇಶ್​ ತಮ್ಮ ಹಾಗೂ ರಿಷಬ್ ಪಂತ್ ಸ್ನೇಹ ಸಂಬಂಧದ ಕುರಿತು ಮಾತನಾಡಿದ್ದಾರೆ.

2017ರಲ್ಲಿ ಐಪಿಎಲ್​ಗೆ ಪಾದಾರ್ಪಣೆ ಮಾಡಿದ ಆವೇಶ್, ತಮ್ಮ ಮೊದಲ ಸೀಸನ್​ನಲ್ಲಿ ಆರ್​ಸಿಬಿ ಪರ ಆಡಿದ್ರು. ನಂತರ 2018 ರಿಂದ ಕಳೆದ ಸೀಸನ್​ವರೆಗೂ ಡೆಲ್ಲಿ ತಂಡದ ಪರ ಕಣಕ್ಕಿಳಿದಿದ್ರು. ಈ ಬಾರಿ ಆವೇಶ್ ಖಾನ್, ಲಕ್ನೋ ಸೂಪರ್ ಜೈಂಟ್ಸ್​ ತಂಡದ ಪರ ಆಡಲಿದ್ದಾರೆ. ಇನ್ನು ವೆಸ್ಟ್ ಇಂಡೀಸ್​ ವಿರುದ್ಧದ ಟಿ-20 ಸರಣಿಗೆ ಆವೇಶ್ ಖಾನ್ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದಾರೆ.

The post IPL​​ 2022: ಆವೇಶ್​ ಖಾನ್​​​ಗೆ ಡೆಲ್ಲಿ ಕ್ಯಾಪ್ಟನ್​ ರಿಷಭ್​​ ಪಂತ್​​ ಕ್ಷಮೆ ಕೇಳಿದ್ಯಾಕೆ..? appeared first on News First Kannada.

News First Live Kannada


Leave a Reply

Your email address will not be published. Required fields are marked *