ಕೊರೊನಾ ಕಾರಣದಿದಿಂದ ಅರ್ಧಕ್ಕೆ ನಿಂತ ಐಪಿಎಲ್​ ಪಂದ್ಯಗಳನ್ನ UAEನಲ್ಲಿ ಆಯೋಜಿಸುವುದಾಗಿ ಬಿಸಿಸಿಐ ಘೋಷಿಸಿದೆ. ಬಿಸಿಸಿಐ ಈ ಮಾತನ್ನ ಹೇಳಿ 48 ದಿನಗಳೇ ಉರುಳಿವೆ. ಆದ್ರೂ ಫ್ರಾಂಚೈಸಿಗಳು ಮಾತ್ರ ಸಿದ್ಧತೆಯನ್ನೇ ಆರಂಭಿಸಿಲ್ಲ.

ಇದನ್ನೂ ಓದು: ಗಂಗೂಲಿ ಮಾತಿಗೆ ಡೋಂಟ್​ ಕೇರ್​​; ಹುಡುಗಾಟ ಮಾಡಿ ತಂಡವನ್ನೇ ಸಂಕಷ್ಟಕ್ಕೆ ಸಿಲುಕಿಸಿದ ಪಂತ್..!

ಒಂದೆಡೆ ಇಂಗ್ಲೆಂಡ್​​​ ವಿರುದ್ಧ ಟೆಸ್ಟ್​​ ಸರಣಿ, ಇನ್ನೊಂದೆಡೆ ಶ್ರೀಲಂಕಾ ಪ್ರವಾಸ ಈ ಎರಡರಲ್ಲೇ ಬಿಸಿಸಿಐ ಮ್ಯಾನೆಜ್​ಮೆಂಟ್​​ ಬ್ಯುಸಿಯಾಗಿದೆ. ಈ ಎರಡು ಸರಣಿಗಳ ಆಯೋಜನೆಯ ನಡುವೆಯೇ 2ND PHASE ಐಪಿಎಲ್​ಗೂ ಬಿಸಿಸಿಐ ಬ್ಲೂ ಪ್ರಿಂಟ್​ ಸಿದ್ಧಪಡಿಸಿದೆ. ಆದ್ರೆ, ಯುಇಎನಲ್ಲಿ ಟೂರ್ನಿ ನಡೆಸೋಕೆ ಮುಂದಾಗಿರೋ ಬಿಸಿಸಿಐ ಫ್ರಾಂಚೈಸಿಗಳಿಗೆ ಯಾವುದೇ ಅಧಿಕೃತ ಮಾಹಿತಿಯನ್ನ ನೀಡದೆ ಇರೋದು ಇದೀಗ ಗೊಂದಲಕ್ಕೆ ಕಾರಣವಾಗಿದೆ.

‘ಈಗಲೇ ಪ್ರಕಟಿಸಲ್ಲ’
‘ನಾವು ಈಗಲೇ ದಿನಾಂಕ ಪ್ರಕಟಿಸಲ್ಲ. ಅದಕ್ಕೆ ಇನ್ನೂ ಕೆಲ ದಿನಗಳ ಸಮಯಾವಕಾಶ ಬೇಕು’
ಅರುಣ್​ ಧುಮುಲ್​, ಖಾಜಾಂಜಿ ಬಿಸಿಸಿಐ

ಹೌದು, ಫ್ರಾಂಚೈಸಿಗಳೊಂದಿಗೆ ಬಿಸಿಸಿಐ ಈವರೆಗೂ ದಿನಾಂಕಗಳ ಬಗ್ಗೆ ಚರ್ಚಿಸಿಯೇ ಇಲ್ವಂತೆ. ಇದರಿಂದಾಗಿ ಕೊರೊನಾ ನಿಯಮಾವಳಿಗಳ ನಡುವೆ ದುಬೈ ನಡೆಯುವ ಟೂರ್ನಿಗೆ ಪ್ರಯಾಣ ಹೇಗೆ, ಅಲ್ಲಿ ವಾಸ್ತವ್ಯಕ್ಕೆ ಮಾಡಿಕೊಳ್ಳಬೇಕಾದ ಸಿದ್ಧತೆಗಳಿಗೆ ಹಿನ್ನಡೆಯಾಗ್ತಿದೆ. ಸೆಪ್ಟೆಂಬರ್​​ ಅಂತ್ಯದಿಂದ ದುಬೈ ಎಕ್ಸ್​​ಪೋ ನಡೆಯೋದ್ರಿಂದ ಹೋಟೆಲ್​ಗಳು ಸಿಗೋದು ಕಷ್ಟ ಸಾಧ್ಯ. ಅದಲ್ಲದೇ ಬಬಲ್​ ನಿಯಮಗಳನ್ನ ಕೂಡ ಪಾಲಿಸಬೇಕಿದೆ. ದಿನಾಂಕ ನಿಗದಿಯಾಗದೇ ಇದಕ್ಕೆ ಸಿದ್ಧರಾಗೋದು, ಹೇಗೆ ಅನ್ನೋದು ಫ್ರಾಂಚೈಸಿಗಳ ಅಳಲಾಗಿದೆ.

‘ದಿನಾಂಕಕ್ಕಾಗಿ ಕಾಯುತ್ತಿದ್ದೇವೆ’
‘ನಾವು ಈಗಲೇ ದುಬೈಗೆ ಹೊರಡುತ್ತಿಲ್ಲ. ನಾವು ಅಧಿಕೃತ ದಿನಾಂಕಗಳಿಗೆ ಕಾಯುತ್ತಿದ್ದೇವೆ. ಅಲ್ಲಿಯವರೆಗೂ ಎಲ್ಲ ವರ್ಚುವಲ್​ ಆಗಿಯೇ ನಡೆಯಲಿವೆ’
ಕಾಸಿ ವಿಶ್ವನಾಥನ್​, CSK CEO

ಇಷ್ಟು ದಿನ ವಿಶ್ವಕಪ್​ ಟೂರ್ನಿಯ ದಿನಾಂಕ ಘೋಷಣೆಯ ಬಳಿಕ ಶೆಡ್ಯೂಲ್​ ಅನೌನ್ಸ್​ ಮಾಡುತ್ತೇ ಅಂದಿದ್ದ ಬಿಸಿಸಿಐ, ಮತ್ತೇ ವಿಳಂಬ ನೀತಿ ಅನುಸರಿಸ್ತಾ ಇದೆ. ಈಗಾಗಲೇ ಉಳಿದ 31 ಪಂದ್ಯಗಳ ಆಯೋಜನೆಯನ್ನ ಯುಎಇನಲ್ಲಿ ಮಾಡಿರೋದು ಫ್ರಾಂಚೈಸಿಗಳ ಜೇಬಿಗೆ ಹೊರೆಯಾಗಿದೆ. ಇದೀಗ ದಿನಾಂಕ ನಿಗದಿಯೂ ವಿಳಂಬವಾಗಿ ತತ್​ಕ್ಷಣಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಂದ್ರೆ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಲಿದೆ ಅನ್ನೋದು ಫ್ರಾಂಚೈಸಿಗಳಿಗೆ ತಲೆನೋವಾಗಿದೆ.

‘ಹೋಟೆಲ್​ ಬುಕ್​ ಮಾಡಲು ಸಾಧ್ಯವಿಲ್ಲ’
‘ದಿನಾಂಕಗಳನ್ನ ಊಹಿಸಿ ಹೋಟೆಲ್​ ಬುಕ್​ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಾವು ಯುಇಎಗೆ ತೆರಳುವುದಿಲ್ಲ. ಬಿಸಿಸಿಐನಿಂದ ಅಧಿಕೃತ ಘೋಷಣೆಯಾಗಲಿ’
ಫ್ರಾಂಚೈಸಿಯ ಮೂಲಗಳು

ಇಷ್ಟೇ ಅಲ್ಲ.. ಬಿಸಿಸಿಐ ದಿನಾಂಕ ನಿಗದಿ ಮಾಡದೇ ಇರೋದ್ರಿಂದ ವಿದೇಶಿ ಆಟಗಾರರ ಲಭ್ಯತೆ ಬಗ್ಗೆಯೂ ಮಾಹಿತಿ ಸಿಗ್ತಿಲ್ಲ. ಈಗಾಗಲೇ ಬಾಂಗ್ಲಾ, ಇಂಗ್ಲೆಂಡ್​ ಮಂಡಳಿಗಳು ಆಟಗಾರರನ್ನ ಕಳಿಸಲ್ಲ ಎಂದು ಹೇಳಿದ್ರೆ, ಕ್ರಿಕೆಟ್​ ಆಸ್ಟ್ರೇಲಿಯಾ ಸೇರಿದಂತೆ ಉಳಿದೆಲ್ಲಾ ಬೋರ್ಡ್​​ಗಳು ಮೌನಕ್ಕೆ ಶರಣಾಗಿವೆ. ಈ ವಿಚಾರವೂ ಕೂಡ ಫ್ರಾಂಚೈಸಿಗಳ ಗೊಂದಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಟಿ-20 ವಿಶ್ವಕಪ್​​ ಟಿಕೆಟ್​ ರೇಸ್​ನಲ್ಲಿ ಅಶ್ವಿನ್.. 7 ಸ್ಪಿನ್ನರ್​ಗಳ ಸ್ಪರ್ಧೆಯಲ್ಲಿ BCCI ಮಣೆ ಯಾರಿಗೆ?

The post IPL​ ಆಯೋಜನೆಯಲ್ಲಿ ಮತ್ತೆ ಗೊಂದಲ; ಸಿದ್ಧತೆಯನ್ನೇ ಆರಂಭಿಸದ ಫ್ರಾಂಚೈಸಿಗಳು..! appeared first on News First Kannada.

Source: newsfirstlive.com

Source link