IPL​ ರಿಟೈನ್ಶನಲ್ಲಿ ಯುವ ಕ್ರಿಕೆಟಿಗರಿಗೆ ಬಂಪರ್ ಲಾಟರಿ; ಯಾವ ಪ್ರತಿಭೆಗೆ ಎಷ್ಟು ಕೋಟಿ..?


ಐಪಿಎಲ್​ 2022ರ ರಿಟೈನ್ಶನಲ್ಲಿ ಯುವ ಆಟಗಾರರಿಗೆ ಬಂಪರ್ ಗಿಫ್ಟ್​ ಸಿಕ್ಕಿದೆ. ಸಂಭಾವನೆಯಲ್ಲಿ ಭಾರೀ ಏರಿಕೆ ಕಂಡಿದೆ.

ಅದರಲ್ಲೂ ಕಳೆದ ಆವೃತ್ತಿಯಲ್ಲಿ ಕೆಕೆಆರ್​ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದ ವೆಂಕಟೇಶ್​​, ಮೂಲ ಬೆಲೆ 20 ಲಕ್ಷದಿಂದ 4 ಕೋಟಿಗೆ 8 ಕೋಟಿಗೆ ರಿಟೈನ್ ಆಗಿದ್ದಾರೆ. ಇದರಂತೆ ಜಮ್ಮು ಕಾಶ್ಮೀರದ ಉಮ್ರಾನ್ ಮಲಿಕ್ 10 ಲಕ್ಷದಿಂದ 4 ಕೋಟಿಗೆ ಏರಿಕೆ ಕಂಡಿದ್ದರೆ, ಅಬ್ದುಲ್ ಸಮದ್ 20 ಲಕ್ಷದಿಂದ 4 ಕೋಟಿ, ಅರ್ಷ್​ದೀಪ್ ಸಿಂಗ್ ಮೂಲ ಬೆಲೆ 20 ಲಕ್ಷದಿಂದ 4 ಕೋಟಿಗೆ ಏರಿಕೆ ಕಂಡಿದೆ.

ಅಷ್ಟೇ ಅಲ್ಲ, ಮೂಲ ಬೆಲೆ 40 ಲಕ್ಷ ಹೊಂದಿದ್ದ ಋತುರಾಜ್ ಗಾಯಕ್ವಾಡ್​ರನ್ನ​ ಚೆನ್ನೈ ಸೂಪರ್ ಕಿಂಗ್ಸ್​ ರಿಟೈನ್ ಮಾಡಿಕೊಂಡಿದ್ದು, ಈಗ 6 ಕೋಟಿ ಜೇಬಿಗಿಳಿಸಿದ್ದಾರೆ. ಇವರಲ್ಲದೆ, 1.2 ಕೋಟಿಯ ಪೃಥ್ವಿ ಶಾ 7.5 ಕೋಟಿ, ಮಹಮ್ಮದ್ ಸಿರಾಜ್ 2.6 ಕೋಟಿಯಿಂದ 7 ಕೋಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲೇ ಉಳಿದುಕೊಂಡಿದ್ದಾರೆ. ಕಳೆದ ವರ್ಷ 8.5 ಕೋಟಿ ಸಂಭಾವನೆ ಪಡೆದಿದ್ದ ರಾಜಸ್ಥಾನ್ ರಾಯಲ್ಸ್​ ತಂಡದ ನಾಯಕ ಸಂಜು ಸ್ಯಾಮ್ಸನ್​ ರಿಟೈನ್​ ಆಗಿದ್ದು ಬರೋಬ್ಬರಿ 14 ಕೋಟಿ ಪಡೆಯಲಿದ್ದಾರೆ.

News First Live Kannada


Leave a Reply

Your email address will not be published. Required fields are marked *