ಮೂವರು ಆಸ್ಟ್ರೇಲಿಯನ್ ಕ್ರಿಕೆಟಿಗರು ಐಪಿಎಲ್​ನ ಅರ್ಧಕ್ಕೆ ಬಿಟ್ಟು ತಮ್ಮ ತವರಿಗೆ ವಾಪಸ್ಸಾಗಿದ್ದಾರೆ. ರಾಜಸ್ಥಾನ್ ರಾಯಲ್ಸ್​ ತಂಡದ ಆ್ಯಂಡ್ರೋ ಟೈ ವೈಯಕ್ತಿಕ ಕಾರಣದಿಂದ ಆಸ್ಟ್ರೇಲಿಯಾಗೆ ವಾಪಸ್ಸಾಗ್ತಿದ್ದಾರೆ ಎಂದು ನಿನ್ನೆ ತಂಡ ತಿಳಿಸಿತ್ತು. ಅದರ ಬೆನ್ನಲ್ಲೇ ಇಂದು ಮತ್ತಿಬ್ಬರು ಆಟಗಾರರು ಕೂಡ ವೈಯಕ್ತಿಕ ಕಾರಣ ನೀಡಿ ಆಸ್ಟ್ರೇಲಿಯಾಗೆ ವಾಪಸ್ಸಾಗ್ತಿದ್ದಾರೆ.

ಆರ್​​ಸಿಬಿ ತಂಡದ ಆ್ಯಡಂ ಝಾಂಪಾ ಹಾಗೂ ಕೇನ್ ರಿಚರ್ಡ್​​ಸನ್ ವೈಯಕ್ತಿಕ ಕಾರಣದಿಂದ​​​ ಆಸ್ಟ್ರೇಲಿಯಾಗೆ ಹಿಂದಿರುಗುತ್ತಿದ್ದಾರೆ. ಐಪಿಎಲ್-2021ರ ಉಳಿದ ​ಪಂದ್ಯಗಳಿಗೆ ಅವರು ಲಭ್ಯವಿರೋದಿಲ್ಲ ಅಂತ ಆರ್​ಸಿಬಿ ಟ್ವೀಟ್ ಮಾಡಿದೆ. ಬೆಂಗಳೂರು ತಂಡದ ಮ್ಯಾನೇಜ್​ಮೆಂಟ್ ಆಟಗಾರರ ನಿರ್ಧಾರವನ್ನ ಗೌರವಿಸುತ್ತದೆ ಹಾಗೂ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಆರ್​ಸಿಬಿ ಹೇಳಿದೆ.

ರಾಜಸ್ಥಾನ್ ರಾಯಲ್ಸ್​ನ ಆಂಡ್ರೋ ಟೈ ತಾವು ವಾಪಸ್ಸಾಗ್ತಿರುವುದಕ್ಕೆ ಕಾರಣವನ್ನ ವಿವರಿಸಿದ್ದಾರೆ. ರೇಡಿಯೋವೊಂದಕ್ಕೆ ಪ್ರತಿಕ್ರಿಯಿಸಿರೋ ಅವರು, ನಾನು ವಾಪಸ್​ ತೆರಳುತ್ತಿರುವುದಕ್ಕೆ ಹಲವು ಕಾರಣಗಳಿಗೆ. ಆದ್ರಲ್ಲಿ ಪ್ರಮುಖವಾದುದೆಂದರೆ ನನ್ನ ತವರು ಪಶ್ಚಿಮ ಆಸ್ಟ್ರೇಲಿಯಾದ ಪರ್ತ್​​ನಲ್ಲಿ ಭಾರತದಿಂದ ಬರುವವರ ಹೋಟೆಲ್ ಕ್ವಾರಂಟೀನ್ ಮಾಡಲಾಗ್ತಿದೆ. ಈಗ ಪರ್ತ್‌ನಲ್ಲಿ ಸಮುದಾಯ ಕೊರೊನಾ ಪ್ರಕರಣ ಹೆಚ್ಚುತ್ತಿದೆ. ಹೀಗಾಗಿ ಸರ್ಕಾರದಿಂದ ನಿರ್ಬಂಧಗಳನ್ನ ಹೇರಲಾಗ್ತಿದೆ, ಅದರಲ್ಲೂ ವಿಶೇಷವಾಗಿ ಪಶ್ಚಿಮ ಆಸ್ಟ್ರೇಲಿಯಾವನ್ನು ನಿರ್ಬಂಧಿಸಲು ಪ್ರಯತ್ನಿಸುತ್ತಿದೆ. ಹೀಗಾಗಿ ನಾನು ಆಸ್ಟ್ರೇಲಿಯಾದಿಂದ ಹೊರಗೆ ಲಾಕ್ ಆಗಿಬಿಡ್ತೀನೆಂಬ ಕಳವಳವಿದೆ. ಆದ್ದರಿಂದ ಅರ್ಧಕ್ಕೆ ಐಪಿಎಲ್​ನಿಂದ ಹೊರಹೋಗುತ್ತಿದ್ದೇನೆ ಎಂದಿದ್ದಾರೆ.

ಮತ್ತೊಂದೆಡೆ ಆಸ್ಟ್ರೇಲಿಯಾದ ಹಲವಾರು ಆಟಗಾರರು ತಮ್ಮ ದೇಶಕ್ಕೆ ಮರಳಲು ಸಾಧ್ಯವೇ ಎಂಬ ಬಗ್ಗೆ ಆತಂಕದಲ್ಲಿದ್ದಾರೆ ಅಂತ ಕೊಲ್ಕತ್ತಾ ನೈಟ್ ರೈಡರ್ಸ್ ಮಾರ್ಗದರ್ಶಕ ಮತ್ತು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ಹಸ್ಸಿ ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಕೊರೊನಾ ವಿರುದ್ಧ ಹೋರಾಡುತ್ತಿರುವ ತಮ್ಮ ಕುಟುಂಬದ ಜೊತೆಗಿರಲು ನಿರ್ಧರಿಸಿದ್ದು, ಐಪಿಎಲ್​ನಿಂದ ವಿರಾಮ ತೆಗೆದುಕೊಳ್ಳುತ್ತಿರೋದಾಗಿ ನಿನ್ನೆ ಘೋಷಿಸಿದ್ದಾರೆ. ಎಲ್ಲಾ ಸರಿಯಾದ್ರೆ ಆಟವಾಡಲು ವಾಪಸ್​ ಬರೋದಾಗಿ ಅವರು ಹೇಳಿದ್ದಾರೆ.

The post IPL ಅರ್ಧಕ್ಕೇ RCBಯ ಇಬ್ಬರು ಆಟಗಾರರು ಔಟ್; ತವರಿಗೆ ಮರಳುತ್ತಿರೋ ಆಸ್ಟ್ರೇಲಿಯನ್ ಕ್ರಿಕಟರ್ಸ್​ appeared first on News First Kannada.

Source: News First Kannada
Read More