ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಟೂರ್ನಿಯಲ್ಲಿ ಕೋಟಿಗಟ್ಟಲೇ ಹಣ ತೆಗೆದುಕೊಂಡರೂ ಅದಕ್ಕೆ ತಕ್ಕಂತೆ ಪ್ರದರ್ಶನ ತೋರಲಿಲ್ಲ ಸ್ಟಾರ್ ಆಟಗಾರರು. ಹೀಗಾಗಿ ಕೆಲವು ಆಟಗಾರರನ್ನು ತಂಡಗಳು 2022ರ ಆವೃತ್ತಿಯಲ್ಲಿ ತಂಡದಿಂದ ಕೈಬಿಟ್ಟಿವೆ.
ಕೇವಲ 4 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಮಾತ್ರ ಅವಕಾಶ ಇರುವುದರಿಂದ ಹಣ ಉಳಿಸಲು ದುಬಾರಿ ಆಟಗಾರರಿಗೆ ಗೇಟ್ ಪಾಸ್ ನೀಡಿವೆ. ಕಳೆದ ಹರಾಜಿನಲ್ಲಿ ಬರೋಬ್ಬರಿ 16.25 ಕೋಟಿಗೆ ಸೇಲ್ ಆಗಿದ್ದ ದಕ್ಷಿಣ ಆಫ್ರಿಕಾದ ಕ್ರಿಸ್ ಮೋರಿಸ್, 15.5 ಕೋಟಿ ರೂ. ಪಡೆದಿದ್ದ ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮಿನ್ಸ್ಗೆ ಗೇಟ್ ಪಾಸ್ ನೀಡಲಾಗಿದೆ.
15 ಕೋಟಿ ರೂ. ಪಡೆದಿದ್ದ ನ್ಯೂಜಿಲೆಂಡ್ನ ಕೈಲ್ ಜೇಮಿಸನ್, 14 ಕೋಟಿ ಪಡೆದಿದ್ದ ಜೇ ರಿಚರ್ಡ್ಸನ್, 12.5 ಕೋಟಿ ಬೆನ್ ಸ್ಟೋಕ್ಸ್ ಜೊತೆಗೆ ಕರ್ನಾಟಕದ ಆಲ್ರೌಂಡರ್ ಕೃಷ್ಣಪ್ಪ ಗೌತಮ್ ಆಯಾ ತಂಡಗಳಿಂದ ಔಟ್ ಆಗಿದ್ದಾರೆ.