ಬಹುನಿರೀಕ್ಷಿತ 14ನೇ ಆವೃತ್ತಿಯ 2ನೇ ಹಂತದ ಐಪಿಎಲ್​​ ಮರು ಆಯೋಜನೆಗೆ​​ ಬಿಸಿಸಿಐ ಗ್ರೀನ್​​ ಸಿಗ್ನಲ್​ ನೀಡಿದೆ. ಮೇ 29ರಂದು ನಡೆಸಿದ ಸಭೆಯಲ್ಲಿ ಸೆಪ್ಟೆಂಬರ್​​ 19ರಿಂದ ಅಕ್ಟೋಬರ್​ 15ರವರೆಗೂ ನಡೆಸುವ ಪ್ಲಾನ್​ ಹಾಕಿಕೊಂಡಿತ್ತು. ಆದರೀಗ ಬಂದಿರುವ ಮೂಲಗಳ ಮಾಹಿತಿ ಪ್ರಕಾರ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ, ಬಿಸಿಸಿಐ ಈ ಷರತ್ತಿಗೆ ಒಪ್ಪಿಗೆ ನೀಡುತ್ತಿಲ್ಲ ಎಂದು ತಿಳಿದು ಬಂದಿದೆ.
ಬಾಕಿ 31 ಪಂದ್ಯಗಳ ಆಯೋಜನೆಗೆ 25 ದಿನಗಳನ್ನು ನೀಡುವಂತೆ ಐಸಿಸಿಗೆ ಮನವಿ ಮಾಡಿರುವ ಬಿಸಿಸಿಐ, ಫೈನಲ್​ ಪಂದ್ಯವನ್ನು ಅಕ್ಟೋಬರ್​ 15ಕ್ಕೆ ನಡೆಸಲು ಯೋಜನೆ ಹಾಕಿಕೊಂಡಿದೆ. ಆದರೆ ಶ್ರೀಮಂತ ಕ್ರಿಕೆಟ್​ ಮಂಡಳಿಗೆ ಕಿಮ್ಮತ್ತು ನೀಡದ ಐಸಿಸಿ, ಐಪಿಎಲ್​​ಗೆ ಅಕ್ಟೋಬರ್ 15ರವರೆಗೂ ಅಸಂಭವ. ಅ.10ರೊಳಗೆ ಮುಗಿಸೋಕೆ ಅನುಮತಿ ನೀಡಲು ಮುಂದಾಗಿದೆ ಎಂದು ವರದಿಯಾಗಿದೆ.

ಅಕ್ಟೋಬರ್​ 18ರಿಂದ ಟಿ20 ವಿಶ್ವಕಪ್​​​​ ​​ ಟೂರ್ನಿ ಆರಂಭವಾಗುವ ಸಾಧ್ಯತೆ ಇದೆ. ಹಾಗಾಗಿ ಐಪಿಎಲ್ ಅಕ್ಟೋಬರ್ 15ರವರೆಗೆ ಮುಂದುವರಿಯಲು ಹೇಗೆ ಸಾಧ್ಯ. ಇದರಿಂದ ಎರಡೂ ಟೂರ್ನಿಗಳ ನಡುವೆ ಘರ್ಷಣೆ ಉಂಟಾಗಲಿದ್ದು, ಅಂತಹ ಘರ್ಷಣೆಯನ್ನ ಐಸಿಸಿ ಎಂದಿಗೂ ಅನುಮತಿಸುವುದಿಲ್ಲ. ಅಕ್ಟೋಬರ್ 10ರ ನಂತರ ಬಿಸಿಸಿಐ ಐಪಿಎಲ್ ವಿಸ್ತರಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.
ಆದರೆ ಬಿಸಿಸಿಐ, ಐಪಿಎಲ್​ ಅನ್ನು 15ರವರೆಗೆ ಅನುಮತಿ ನೀಡಿ, ವಿಶ್ವಕಪ್​ ಅನ್ನು ತಿಂಗಳ ಕಾಲ ಮುಂದೂಡಿ ಎಂದು ಕೇಳಿಕೊಂಡಿದೆ. ಆ ಮೂಲಕ ಐಪಿಎಲ್​ ಅನ್ನು ಯುಎಇನಲ್ಲಿ ಆಡಿಸಲು ಮತ್ತು ವಿಶ್ವಕಪ್​​ ಅನ್ನು ಶ್ರೀಲಂಕಾದಲ್ಲಿ ಆಯೋಜಿಸೋಕೆ ಮುಂದಾಗಿದೆ. ಇದರಿಂದ ಸಮಯ ವ್ಯರ್ಥ ಮತ್ತು ಹೆಚ್ಚು ತೊಂದರೆಗಳಿಗೆ ಇದು ಅವಕಾಶ ನೀಡಿದಂತಾಗುತ್ತೆ.

The post IPL ಫ್ಯಾನ್ಸ್​ಗೆ ಐಸಿಸಿ ಶಾಕ; ಅಗಸ್ಟ್​ 15 ರ ತನಕ ಕಾಯಲೇಬೇಕಾ?! appeared first on News First Kannada.

Source: newsfirstlive.com

Source link