ಐಪಿಎಲ್​ ಮೊಟುಕುಗೊಳ್ತಿದ್ದಂತೆ ಧೋನಿ ತಿರುಗಾಡಿದ್ದೇ ಹೆಚ್ಚು. ಸೋಷಿಯಲ್​ ಮೀಡಿಯಾದಲ್ಲೂ ಧೋನಿಯದ್ದೇ ಹವಾ​. ಹಾಗಾದರೆ ಈ ಸುತ್ತಾಟದ ನಡುವೆ, 2ನೇ ಹಂತದ ಐಪಿಎಲ್​​ಗೆ ಸಜ್ಜಾಗ್ತಿದ್ದಾರಾ ಇಲ್ವಾ..? ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ಮಿಲಿಯನ್​​ ಡಾಲರ್ ಟೂರ್ನಿ ಐಪಿಎಲ್​ಗೆ ಬ್ರೇಕ್​ ಬಿದಿದ್ದೇ ತಡ, ಎಂ.ಎಸ್.ಧೋನಿ ಸುತ್ತಾಟ ಜೋರಾಗಿದೆ. ಐಪಿಎಲ್​​​ ಸ್ಥಗಿತದ ಬಳಿಕ ನೇರವಾಗಿ ಮನೆಗೆ ತೆರಳಿದ ಮಾಹಿ, ಲಾಕ್​ಡೌನ್​​ನಲ್ಲಿ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆದ್ರು. ಆದ್ರೆ ಅನ್​ಲಾಕ್​​ ನಂತರ ಜಾಲಿಯಾಗಿ ರೌಂಡ್ಸ್​ ಹಾಕ್ತಿರುವ ಮಾಹಿ, 2ನೇ ಹಂತದ IPL​ಗೆ ಸದ್ದಿಲ್ಲದೆ ಸಿದ್ಧರಾಗ್ತಿದ್ದಾರೆ.

ಸಮಯ ಸಿಕ್ಕಾಗಲೆಲ್ಲಾ ಫಾರ್ಮ್​ಹೌಸ್​​​ಗೆ ವಿಸಿಟ್​, ಸ್ನೇಹಿತರ ಭೇಟಿ, ಕುಟುಂಬದ ಜೊತೆ ಶಿಮ್ಲಾಗೆ ಪ್ರವಾಸ, ಮುಂಬೈನಲ್ಲಿ ಸಿಂಗರ್​​ ರಾಹುಲ್​ ವೈದ್ಯ ಮದುವೆಗೆ ಹಾಜರ್​​.. ಇವು ಅನ್​ಲಾಕ್​ ಬಳಿಕ ಧೋನಿಯ ಪ್ರಯಾಣ​​. ಇದೆಲ್ಲದರ ನಡುವೆ ಧೋನಿ ಫಿಟ್​ನೆಸ್​​ ಲೆವೆಲ್​ ಅಭಿಮಾನಿಗಳನ್ನ ದಂಗಾಗಿಸಿದೆ.

ಧೋನಿಯ ಫಿಟ್​ ಆ್ಯಂಡ್​ ಸ್ಲಿಮ್​​ಗೆ ಕಾರಣ ಏನಿರಬಹುದು.?
ಧೋನಿ ಫಿಟ್​ನೆಸ್​ ಹೇಗಿದೆ ಅನ್ನೋದು, ಸದ್ಯ ವೈರಲ್ಲಾದ ಚಿತ್ರಗಳೇ ಸಾಕ್ಷಿ.! ಸಿಂಗರ್​ ರಾಹುಲ್​ ವೈದ್ಯ ವಿವಾಹಕ್ಕಾಗಿ ಮುಂಬೈಗೆ ಬಂದಿಳಿದಾಗ, ಧೋನಿ ಡ್ಯಾಶಿಂಗ್​ ಲುಕ್​ನಲ್ಲಿ ಕಾಣಿಸಿಕೊಂಡ್ರು. ಜೊತೆಗೆ ದೇಹದ ತೂಕವನ್ನ ಇಳಿಸಿದ್ದು, ಫುಲ್​ ಫಿಟ್​, ಸ್ಲಿಮ್,​ ಯಂಗ್ ಌಂಡ್​ ಎನರ್ಜಿಟಿಕ್​ ಆಗಿದ್ದಾರೆ. ಇದೆಲ್ಲಾ ನೋಡಿದ್ರೆ ಧೋನಿ, IPLಗೆ ಸೀಕ್ರೆಟ್ ಆಗಿಯೇ ಫಿಟ್​​ನೆಸ್​​ ಮೇಲೆ ಫೋಕಸ್​​ ಮಾಡಿರೋದು ಗೊತ್ತಾಗ್ತಿದೆ.

IPL​ ಮೆಗಾ ಆಕ್ಷನ್​ನಲ್ಲಿ​ ಧೋನಿಯನ್ನ ಸಿಎಸ್​ಕೆ ಉಳಿಸಿಕೊಳ್ಲೋ ಪ್ಲಾನ್​​ನಲ್ಲಿದೆ. ಒಂದು ವೇಳೆ ಧೋನಿ ರಿಟೈರ್​ ಆದ್ರೂ, 3 ವರ್ಷ ತಂಡದ ಪರ ಆಡಬೇಕು.! ಇತ್ತ ಮಾಹಿ ಫಿಟ್​ನೆಸ್​ ನೋಡಿದ್ರೆ, 3 ವರ್ಷ ಐಪಿಎಲ್ ಆಡೋದಕ್ಕೂ ಸೈ ಅನ್ನೋತರ ಇದೆ. ಏನೇ ಆಗಲಿ.. 40ರ ವಯಸ್ಸಿನಲ್ಲೂ ಫಿಟ್ನೆಸ್ ಕಾಯ್ದುಕೊಂಡಿರುವ ಎಂ.ಎಸ್.ಡಿ, ಯುವ ಕ್ರಿಕೆಟಿಗರಿಗೆ ಸ್ಫೂರ್ತಿ ಅನ್ನೋದ್ರಲ್ಲಿ ಎರಡು ಮಾತಿಲ್ಲ.

The post IPL ಬಳಿಕ ರಿಲ್ಯಾಕ್ಸ್​ಗೆ ಜಾರಿದ ಧೋನಿ.. ಆದ್ರೆ ಅಭಿಮಾನಿಗಳ ತಲೆಗೆ ಹುಳ ಬಿಟ್ಟ ತಲೈವಾ! appeared first on News First Kannada.

Source: newsfirstlive.com

Source link