IPL ಮೊದಲ ಕ್ವಾಲಿಫೈಯರ್‌ನಲ್ಲಿ ಗುರು-ಶಿಷ್ಯರ ಕಾದಾಟ.. ಸೋತ ತಂಡಕ್ಕೆ ಮತ್ತೊಂದು ಚಾನ್ಸ್

ಐಪಿಎಲ್​ ಸೀಸನ್-14 ಲೀಗ್​​​ಗಳು ಮುಕ್ತಾಯಗೊಂಡು, ಉಪಾಂತ್ಯದ ಘಟ್ಟ ತಲುಪಿದೆ. ಬ್ಯಾಟಿಂಗ್​-ಬೌಲಿಂಗ್​, ಫೀಲ್ಡಿಂಗ್​​​.. ಹೀಗೆ ಪ್ರತಿ ಹಂತದಲ್ಲೂ ಅಭಿಮಾನಿಗಳಿಗೆ ರಸದೌತಣ ಉಣಬಡಿಸಿದ್ದ ರಂಗುರಂಗಿನ IPL ಟೂರ್ನಿಯ ಲೀಗ್​​​​ ಪಂದ್ಯಗಳಿಗೆ, ಸದ್ಯ ತೆರೆ ಬಿದ್ದಿದೆ. ಇದೀಗ ಬಲಿಷ್ಠ ತಂಡಗಳ ಕ್ವಾಲಿಫೈಯರ್​​​​​​ ಪಂದ್ಯಗಳ ರೋಚಕ ಕಾದಾಟದತ್ತ ಅಭಿಮಾನಿಗಳ ಚಿತ್ತ ನೆಟ್ಟಿದೆ. ಅದರಲ್ಲೂ ಮೊದಲ​​​​​​​ ಕ್ವಾಲಿಫೈಯರ್ ಬಿಗ್​​​ಫೈಟ್​​ನಲ್ಲಿ, ಗುರು ಧೋನಿ – ಶಿಷ್ಯ ಪಂತ್​ ನಡುವೆ ಕಾದಾಟ ಹೇಗಿರಲಿದೆ ಅನ್ನೋ ಕುತೂಹಲ, ಮತ್ತಷ್ಟು ಇಮ್ಮಡಿಗೊಳಿಸಿದೆ.

ರಿಷಭ್​ ಪಂತ್​ – MS ಧೋನಿ ಬಿಗ್​ಫೈಟ್​ಗೆ ದುಬೈ ಸ್ಟೇಡಿಯಂ ವೇದಿಕೆ
ಲೀಗ್​ ಹಂತದಲ್ಲಿ ಉಭಯ ತಂಡಗಳು ಅಲ್ಲಲ್ಲಿ ಎಡವಿದ್ದು ಬಿಟ್ಟರೆ, ವರ್ಣಿಸಲಾಗದಷ್ಟು ಅತ್ಯದ್ಭುತ ಪ್ರದರ್ಶನ ನೀಡಿವೆ. ಲೀಗ್​ ಹಂತದಲ್ಲಿ ಒಂದು ಪಂದ್ಯದಲ್ಲಿ ಎಡವಿದ್ರೂ, ಮತ್ತೊಂದು ಪಂದ್ಯಕ್ಕೆ ತಿದ್ದಿಕೊಳ್ಳುವ ಅವಕಾಶ ಇತ್ತು. ಆದರೀಗ ಪ್ರಮುಖ ಘಟ್ಟದ ಹಣಾಹಣಿಯಲ್ಲಿ ಸಣ್ಣ ತಪ್ಪುಗಳೂ, ತಂಡದ ಮೇಲೆ ಪರಿಣಾಮ ಬೀರುತ್ತೆ. ಹಾಗಾಗಿ ತಪ್ಪುಗಳ ಮೇಲೆಯೇ ಸಾಕಷ್ಟು ಅಧ್ಯಯನ ನಡೆಸ್ತಿವೆ.

ಚೆನ್ನೈ ತಂಡದ ಸ್ಟ್ರೆಂಥ್​ ಆ್ಯಂಡ್​​ ವೀಕ್ನೆಸ್ ಏನು?
ಚೆನ್ನೈ ಸೂಪರ್​ ಕಿಂಗ್ಸ್​ ಮೇನ್​ ಸ್ಟ್ರೆಂಥ್​ ಅಂದ್ರೆ, ಫಾಫ್​ ಡು ಪ್ಲೆಸಿಸ್​ – ಋತುರಾಜ್​ ಗಾಯಕ್ವಾಡ್ ಜೋಡಿ​. 14ನೇ ಆವೃತ್ತಿಯಲ್ಲಿ ಅದ್ಭುತ ಓಪನಿಂಗ್​ ನೀಡ್ತಿರುವ ಈ ಜೋಡಿ, ತಂಡದ ಗೆಲುವಿಗೆ ಪ್ರಮುಖ ಕಾರಣರಾಗಿದ್ದಾರೆ. ರವೀಂದ್ರ ಜಡೇಜಾ ಅಂತಿಮ ಓವರ್​​ಗಳಲ್ಲಿ ಗೇಮ್​ ಚೇಂಜಿಂಗ್​ ಪ್ರದರ್ಶನ ನೀಡ್ತಿದ್ರೆ, ಚಾಣಾಕ್ಷ ಧೋನಿ ನಾಯಕತ್ವ ತಂಡದ ಆತ್ಮವಿಶ್ವಾಸವನ್ನ ಮತ್ತಷ್ಟು ಹೆಚ್ಚಿಸಿದೆ. ಚೆನ್ನೈ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳು ರನ್​ಗಳಿಸಲು ಪರದಾಡ್ತಿದ್ದಾರೆ.ಜೊತೆಗೆ ಅಟ್ಯಾಕಿಂಗ್​ ಬೌಲಿಂಗ್​ ಇಲ್ಲದಿರೋದು, ತಂಡಕ್ಕೆ ಹಿನ್ನಡೆಯಾಗ್ತಿದೆ.

ಮತ್ತೊಂದೆಡೆ ಲೀಗ್​ ಹಂತದಲ್ಲಿ ಟಾಪ್ ಟೀಮ್ ಆಗಿ ಗುರುತಿಸಿಕೊಂಡಿರುವ ಕ್ಯಾಪಿಟಲ್ಸ್​, ಕ್ವಾಲಿಫಯರ್​​ ವನ್​​ಗೂ ಮುನ್ನ, ವೀಕ್ನೆಸ್​ ಮೇಲೆ ವರ್ಕ್​ಔಟ್ ಮಾಡಬೇಕಿದೆ.

ಡೆಲ್ಲಿ ತಂಡದ ಸ್ಟ್ರೆಂಥ್​ ಆ್ಯಂಡ್​​ ವೀಕ್ನೆಸ್.!
ಡೆಲ್ಲಿಗೆ ಆರಂಭದಲ್ಲಿ ಶಿಖರ್​ ಧವನ್ ಅದ್ಭುತ ಸ್ಟಾಂಡಿಂಗ್​ ನೀಡಿ ಭರವಸೆ ಮೂಡಿಸಿದ್ರೆ, ಬೌಲರ್​​​ಗಳು ಅದ್ಭುತ ಫಾರ್ಮ್​​ನಲ್ಲಿ ದಾಳಿ ನಡೆಸ್ತಿದ್ದಾರೆ. ಲೀಗ್​​ನ ಎರಡು ಪಂದ್ಯಗಳಲ್ಲೂ ಚೆನ್ನೈ ತಂಡವನ್ನ ಸೋಲಿಸಿರುವ ಕ್ಯಾಪಿಟಲ್ಸ್​ಗೆ, ಮತ್ತಷ್ಟು ಪುಷ್ಟಿ ನೀಡಿದೆ. ಆದರೆ ಪಂತ್​ ಪಡೆಯ ಮಿಡಲ್ ಆರ್ಡರ್​ ಬ್ಯಾಟ್ಸ್​ಮನ್​ಗಳಿಗೂ, ಇನ್​ಕನ್ಸಿಸ್ಟೆನ್ಸಿ ಕಾಡ್ತಿದೆ. ಒತ್ತಡದಲ್ಲಿ ನಾಯಕ ಪಂತ್​ ಪ್ಯಾನಿಕ್​​​​​ ಆಗ್ತಾರೆ.

ಸೋತ ತಂಡಕ್ಕೆ ಸಿಗಲಿದೆ ಮತ್ತೊಂದು ಅವಕಾಶ
ಇವತ್ತು ಗೆದ್ದ ತಂಡ ನೇರವಾಗಿ ಫೈನಲ್​ ಪ್ರವೇಶಿಸಿದ್ರೆ, ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದೆ. ಒಟ್ಟಿನಲ್ಲಿ ಐಪಿಎಲ್ ಸೀಸನ್ 14ರಲ್ಲಿ ಗುರು ಧೋನಿಯನ್ನ ಎರಡು ಬಾರಿ ಸೋಲಿಸಿರುವ ಶಿಷ್ಯ ಪಂತ್, ಹ್ಯಾಟ್ರಿಕ್ ಸಾಧನೆ ಮಾಡ್ತಾರಾ ಅನ್ನೋದನ್ನ ಕಾದುನೋಡಬೇಕು.

News First Live Kannada

Leave a comment

Your email address will not be published. Required fields are marked *