IPL ಲೀಗ್ ಪಂದ್ಯಗಳಿಗೆ ಇಂದು ತೆರೆ; ಮುಂಬೈ ಪಾಲಿಗೆ ಮಹತ್ವದ ದಿನ ಯಾಕೆ..?

14ನೇ ಆವೃತ್ತಿಯ ಮಿಲಿಯನ್​ ಡಾಲರ್​​ ಟೂರ್ನಿ ಲೀಗ್​ ಪಂದ್ಯಗಳಿಗೆ ಇಂದು ತೆರೆ ಬೀಳಲಿದ್ದು, ಇನ್ನು ಮುಂದೆ ಕ್ವಾಲಿಫೈಯರ್​ ಹಣಾಹಣಿ ರಂಗೇರಲಿದೆ. ಎರಡು ಪಂದ್ಯಗಳು ಇಂದು ನಡೆಯಲಿದ್ದು, ಒಂದು ಪಂದ್ಯದಲ್ಲಿ ಮುಂಬೈ-ಸನ್​ರೈಸರ್ಸ್​ ನಡುವೆ ಕಾದಾಟ ನಡೆಸಲಿವೆ. ಇನ್ನೊಂದು ಪಂದ್ಯದಲ್ಲಿ ಆರ್​ಸಿಬಿ-ಡೆಲ್ಲಿ ನಡುವೆ ಸೆಣಸಾಟ ನಡೆಯಲಿದೆ. ಆದರೆ ಇಲ್ಲಿ ಮುಂಬೈ ಪಾಲಿಗೆ ಇಂದಿನ ಪಂದ್ಯ ಮಹತ್ವದ್ದಾಗಿದೆ.

ಮುಂಬೈ ಪ್ಲೇ ಆಫ್​​​​ಗೇರಲು ಬೇಕಿದೆ ಭಾರಿ ಅಂತರದ ಗೆಲುವು..!
ಪ್ಲೇ ಆಫ್​​ ಕನಸಿನಲ್ಲಿರುವ ಮುಂಬೈಗೆ ಕಠಿಣ ಸವಾಲು ಎದುರಾಗಿದೆ. ಟೂರ್ನಿಯಲ್ಲಿ ಆಡಿದ 13 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 12 ಅಂಕ ಸಂಪಾದಿಸಿ ನಾಲ್ಕರ ಘಟ್ಟಕ್ಕೇರಲು ಚಿತ್ತ ನೆಟ್ಟಿದೆ. ಆದ್ರೆ ನಿನ್ನೆ ನಡೆದ ರಾಜಸ್ಥಾನ್​ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಕೊಲ್ಕತ್ತಾ ನೆಟ್​​ ರನ್​ ರೇಟ್​ ಹೆಚ್ಚಿಸಿಕೊಂಡಿದೆ. ಅಲ್ಲದೆ, 14 ಅಂಕಗಳನ್ನ ತನ್ನ ಖಾತೆಯಲ್ಲಿ ಹೊಂದಿದೆ. ಇದೀಗ 12 ಅಂಕ ಹೊಂದಿರುವ ಮುಂಬೈ, ಪ್ಲೇ ಆಫ್​​ಗೇರಬೇಕಂದ್ರೆ ಇಂದು ಭಾರಿ ಅಂತರದ ಗೆಲುವು ಸಾಧಿಸಬೇಕಿದೆ. ಇನ್​​ಫ್ಯಾಕ್ಟ್​​ ಮಿರಾಕಲ್​ ನಡೀಬೇಕು ಅಂದ್ರು ತಪ್ಪಾಗಲ್ಲ.

ಇದನ್ನೂ ಓದಿ: IPL 2021: ರಾಜಸ್ಥಾನ ರಾಯಲ್ಸ್​ ವಿರುದ್ಧ ಕೆಕೆಆರ್​​ಗೆ 86 ರನ್​​ಗಳ ಭರ್ಜರಿ ಜಯ

ಗೆದ್ದು ಗುಡ್​​ ಬೈ ಹೇಳಲು ಸಜ್ಜಾದ ​ಕೇನ್​ ವಿಲಿಯಮ್ಸನ್​​ ಪಡೆ​..!
ಮುಂಬೈಗೆ ಪ್ಲೇ ಆಫ್​ಗೇರೋ ಕನಸಿನಲ್ಲಿದ್ರೆ, ಸನ್​ರೈಸರ್ಸ್​ ಹೈದ್ರಾಬಾದ್​​ ಕೊನೇ ಪಂದ್ಯವನ್ನ ಗೆದ್ದು ಅಭಿಯಾನ ಮುಗಿಸಲು ಪಣತೊಟ್ಟಿದೆ. ಆಡಿರುವ 13 ಪಂದ್ಯಗಳಲ್ಲಿ 10ರಲ್ಲಿ ಸೋಲು ಕಂಡಿರುವ ಹೈದ್ರಾಬಾದ್​ ಟೂರ್ನಿಯಲ್ಲಿ ಹೀನಾಯ ಪ್ರದರ್ಶನ ನೀಡಿದೆ. ಹಾಗಾಗಿ ಕೊನೇ ಪಂದ್ಯವನ್ನಾದರೂ ಗೆದ್ದು ಟೂರ್ನಿಗೆ ಗುಡ್​​ ಬೈ ಹೇಳಲು ಸಿದ್ಧತೆ ಮಾಡಿಕೊಂಡಿದೆ. ಬಲಿಷ್ಠ ಮುಂಬೈ ಇಂಡಿಯನ್ಸ್​ಗೆ ಚಮಕ್​ ನೀಡಲು ಹೈದರಾಬಾದ್​​ ವಿಭಿನ್ನ ಕಾರ್ಯತಂತ್ರಗಳ ಮೊರೆ ಹೋಗಿದೆ.

ಲೀಗ್​​​​ನ ಕೊನೇ ಪಂದ್ಯದಲ್ಲಿ ಗೆಲ್ಲೋದು ಡೆಲ್ಲಿನಾ-ಬೆಂಗಳೂರಾ..?
ಇಂದಿನ ಮತ್ತೊಂದು ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​-ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಸೆಣಸಾಟ ನಡೆಸಲಿವೆ. ಉಭಯ ತಂಡಗಳು ಪ್ಲೇ ಆಫ್​ಗೆ ಕ್ವಾಲಿಫೈ​ ಆಗಿದ್ದು, ಮತ್ತೊಂದು ಗೆಲುವುಗಾಗಿ ಕಾದಾಟ ನಡೆಸಲು ತೀವ್ರ ಕಸರತ್ತು ನಡೆಸ್ತಿವೆ. ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಡೆಲ್ಲಿ, ಬೆಂಗಳೂರು ಎದುರಿನ ಪಂದ್ಯದಲ್ಲಿ ಸೋತರೂ, ಗೆದ್ದರೂ ತನ್ನ ಸ್ಥಾನದಲ್ಲೇ ಉಳಿದುಕೊಳ್ಳಲಿದೆ. ಆದರೆ ವೈಫಲ್ಯಕ್ಕೆ ಸಿಲುಕಿದ ಆಟಗಾರರನ್ನ ಹಳಿಗೆ ತರಲು ಇದೊಳ್ಳೆ ಅವಕಾಶವಾಗಿದೆ.

ಇದನ್ನೂ ಓದಿ: ಫಸ್ಟ್​​ ಕ್ಲಾಸ್​​​​ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಕನ್ನಡಿಗ ಅಭಿಮನ್ಯು ಮಿಥುನ್​..!

ಆರ್​​ಸಿಬಿ ಹಿಂದಿನ ಪಂದ್ಯದ ತಪ್ಪಗಳನ್ನ ತಿದ್ದಿಕೊಂಡು ಕಣಕ್ಕಿಳಿಯಲು ಸಿದ್ಧತೆ ಮಾಡಿಕೊಂಡಿದೆ. ಜೊತೆಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಆರ್​ಸಿಬಿ, ಎರಡನೇ ಸ್ಥಾನಕ್ಕೆ ಲಗ್ಗೆ ಇಡಲು ಕೂಡ ಪ್ರಯತ್ನ ನಡೆಸ್ತಿದೆ. ಎರಡನೇ ಸ್ಥಾನದಲ್ಲಿರುವ ಚೆನ್ನೈ, ಪ್ಲಸ್​ ನೆಟ್​ರನ್​ರೇಟ್​ ಹೊಂದಿದ್ರೆ, ಬೆಂಗಳೂರು ಮೈನಸ್​​ ನೆಟ್​ ರನ್​ರೇಟ್​ ಹೊಂದಿದೆ. ಇಂದು ಡೆಲ್ಲಿ ವಿರುದ್ಧ ಭಾರಿ ಅಂತರದ ಗೆಲುವು ದಾಖಲಿಸಿದ್ರೆ 2ನೇ ಸ್ಥಾನಕ್ಕೇರೋ ಅವಕಾಶವೂ ಇದೆ. ಜೊತೆಗೆ ಕ್ವಾಲಿ ಫೈಯರ್​ ಪಂದ್ಯಕ್ಕೂ ತಪ್ಪನ್ನ ತಿದ್ದಿಕೊಳ್ಳಲೂ ಇರೋ ಉತ್ತಮ ಅವಕಾಶವೂ ಇದಾಗಿದೆ.

News First Live Kannada

Leave a comment

Your email address will not be published. Required fields are marked *