IPL: ಸನ್​ರೈಸರ್ಸ್ ವಿರುದ್ಧ ಮುಂಬೈಗೆ 42 ರನ್​​ಗಳ ಗೆಲುವು

ಅಬುಧಾಬಿಯ ಶೇಖ್ ಝಾಯೇದ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 55 ನೇ ಮ್ಯಾಚ್​ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ಟೀಂ ಮುಖಾಮುಖಿಯಾಗಿದ್ದವು. ಮೊದಲಿಗೆ ಟಾಸ್​ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ಇಂಡಿಯನ್ಸ್ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 235 ರನ್​ಗಳನ್ನ ಕಲೆಹಾಕಿತು.

ಮುಂಬೈ ಪರ ರೋಹಿತ್ ಶರ್ಮಾ 18, ಇಶಾನ್ ಕಿಶಾನ 84, ಹಾರ್ದಿಕ್ ಪಾಂಡ್ಯ 10, ಪೊಲ್ಲಾರ್ಡ್ 13, ಸೂರ್ಯಕುಮಾರ್ ಯಾದವ್ 82, ಕ್ರುನಾಲ್ ಪಾಂಡ್ಯ 9, ಕೌಲ್ಟರ್ ನೈಲ್ 3, ಬೂಮ್ರಾ 5 ರನ್ ಗಳಿಸಿದ್ರು.

236 ರನ್​ಗಳ ಬೆನ್ನು ಹತ್ತಿದ ಸನ್​ರೈಸರ್ಸ್ ಹೈದರಾಬಾದ್ ..20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 193 ರನ್​ ಗಳಿಸಲಷ್ಟೇ ಶಕ್ತವಾಯ್ತು.

ಸನ್​ರೈಸರ್ಸ್ ಪರ ಜೇಸನ್ ರಾಯ್ 34, ಅಭಿಶೇಕ್ ಶರ್ಮಾ 33, ಮೊಹಮ್ಮದ್ ನವಿ 3, ಅಬ್ದುಲ್ ಸಮದ್ 2, ಪ್ರಿಯಮ್ ಗರ್ಗ್ 29, ಜೇಸನ್ ಹೋಲ್ಡರ್ 1, ರಶೀದ್ ಖಾನ್ 9, ವೃದ್ಧಿಮಾನ್ ಸಾಹ 2 ರನ್ ಗಳಿಸಿದ್ರು.

The post IPL: ಸನ್​ರೈಸರ್ಸ್ ವಿರುದ್ಧ ಮುಂಬೈಗೆ 42 ರನ್​​ಗಳ ಗೆಲುವು appeared first on News First Kannada.

News First Live Kannada

Leave a comment

Your email address will not be published. Required fields are marked *