ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15ಗೆ ಭಾರೀ ಸಿದ್ಧತೆ ನಡೆಯುತ್ತಿದೆ. ಈಗಾಗಲೇ 8 ತಂಡಗಳು ತಮಗೆ ಬೇಕಾದ ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದಾರೆ. ಮುಂದೆ ಹೊಸ ಫ್ರಾಂಚೈಸಿಗಳಾದ ಲಖನೌ ಹಾಗೂ ಅಹ್ಮದಾಬಾದ್ ತಂಡಗಳು ಕೂಡ ಮೂವರು ಆಟಗಾರರನ್ನು ಆಯ್ಕೆ ಮಾಡ್ಕೋ ಬೇಕಿದೆ. ಈ ನಡುವೆ ಐಪಿಎಲ್ ಹರಾಜಿಗೆ ದಿನಾಂಕ ನಿಗದಿಯಾಗಿದೆ.
ಹೌದು, ಈ ಮೊದಲು ನಿಗದಿ ಮಾಡಿದಂತೆಯೇ ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲೇ ಮೆಗಾ ಹರಾಜು ನಡೆಯಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ದೃಢಪಡಿಸಿದೆ. ಹೀಗಾಗಿ ಈ 1 ಸಾವಿರಕ್ಕೂ ಹೆಚ್ಚು ಆಟಗಾರರು ಮೆಗಾ ಹರಾಜಿಗಾಗಿ ತಮ್ಮ ಹೆಸರು ರಿಜಿಸ್ಟರ್ ಮಾಡಿಸಲಿದ್ದಾರೆ ಎನ್ನಲಾಗಿದೆ.
ಎಲ್ಲಾ ಕ್ರಿಕೆಟ್ ಮಂಡಳಿಗೆ ಐಪಿಎಲ್ಗಾಗಿ ಹೆಸರು ನೀಡಿರುವ ಆಟಗಾರರ ಪಟ್ಟಿ ಸಲ್ಲಿಸೋಕೆ ಬಿಸಿಸಿಐ ಸೂಚನೆ ನೀಡಿದೆ. ಅದರಂತೆ ಸಾವಿರಕ್ಕೂ ಅಧಿಕ ಆಟಗಾರರ ಹೆಸರು ಪಟ್ಟಿಯಲ್ಲಿದೆ. ಆದರೆ, ಕೇವಲ 223 ಮಂದಿ ಆಟಗಾರರಿಗೆ ಮಾತ್ರ ಬಿಡ್ಡಿಂಗ್ ನಡೆಯಲಿದೆ.
The post IPL ಹರಾಜಿಗೆ ಮುಹೂರ್ತ ಫಿಕ್ಸ್: ಈ ಬಾರಿ ಬೆಂಗಳೂರಲ್ಲೇ ನಡೆಯುತ್ತಾ ಬಿಡ್ಡಿಂಗ್..? appeared first on News First Kannada.