ಪಂಜಾಬ್ ಕಿಂಗ್ಸ್ ತಂಡ ಕೆ.ಎಲ್ ರಾಹುಲ್ರನ್ನ ಮೆಗಾ ಹರಾಜಿಗೆ ಬಿಟ್ಟರೆ ಅತ್ಯಂತ ದುಬಾರಿ ಬೆಲೆಗೆ ಬೇರೊಂದು ಫ್ರಾಂಚೈಸಿಗೆ ಸೇರ್ಪಡೆಯಾಗಲಿದ್ದಾರೆಂದು ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ಮಾತನಾಡಿರುವ ಟೀಮ್ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ, ರೋಹಿತ್ ಶರ್ಮಾ ಹಾಗೂ ಕೆ.ಎಲ್ ರಾಹುಲ್ ಅದ್ಭುತ ಲಯದ್ದಾರೆ. ಎಲ್ ರಾಹುಲ್ ಮತ್ತೊಮ್ಮೆ ಇದನ್ನು ಸಾಬೀತುಪಡಿಸಿದ್ದಾರೆ ಎಂದರು.
ಈತ ಭಾರತದ ಅತ್ಯುತ್ತಮ ಟಿ20 ಬ್ಯಾಟ್ಸ್ಮನ್. ಭಾರತದಲ್ಲಿ ಇವರಿಗಿಂತ ಅತ್ಯುತ್ತಮ ಬ್ಯಾಟ್ಸ್ಮನ್ ಇಲ್ಲವೇ ಇಲ್ಲ. ಒಂದು ವೇಳೆ ಅವರು 2022ರ ಐಪಿಎಲ್ ಮೆಗಾ ಹರಾಜಿಗೆ ಹೋದರೆ ಅತ್ಯಂತ ದುಬಾರಿ ಆಟಗಾರರಾಗಿ ಹೊರಹೊಮ್ಮಲಿದ್ದಾರೆ ಎಂದು ಹೇಳಿದರು.
ಕಳೆದ ಐದು ಪಂದ್ಯಗಳಲ್ಲಿ 3 ರಿಂದ 4 ಅರ್ಧಶತಕಗಳನ್ನ ಸಿಡಿಸಿದ್ದಾರೆ. ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧ ರನ್ ಗಳಿಸಿರಲಿಲ್ಲ. ಆದರೆ, ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿಭಿನ್ನ ಆಟಗಾರರಾಗಿ ಕಾಣುತ್ತಿದ್ದಾರೆ. ವೇಗದ ಬೌಲರ್ಗಳಿಗೆ ಕವರ್ಸ್ ಮೇಲೆ ಸಿಕ್ಸರ್ ಸಿಡಿಸುವ ಸಾಮರ್ಥ್ಯವನ್ನ ಹೊಂದಿದ್ದಾರೆ. ನೀವು ಎಷ್ಟೇ ವೇಗದಲ್ಲಿ ಬೌಲ್ ಮಾಡಿದರೂ ಲೀಲಾ ಜಾಲದಲ್ಲಿ ಬ್ಯಾಟ್ ಬೀಸುತ್ತಾರೆ. ಕೆ.ಎಲ್.ರಾಹುಲ್ ಕೌಶಲವನ್ನ ನಂಬಲು ಅಸಾಧ್ಯವಾದದ್ದು ಎಂದು ಶ್ಲಾಘಿಸಿದ್ದಾರೆ.