ಕ್ರಿಸ್ ಗೇಲ್, ಐಪಿಎಲ್ಗೆ ಗುಡ್ಬೈ ಹೇಳಿದ್ರಾ..? ಗೇಲ್ ಐಪಿಎಲ್ ಹರಾಜು ಪ್ರಕ್ರಿಯೆಯಿಂದ, ಹಿಂದೆ ಸರಿದಿರೋದ್ಯಾಕೆ..? ಬಿಗ್ ಎಂಟರ್ಟೈನರ್ ಗೇಲ್, ಕಠಿಣ ನಿರ್ಧಾರ ತೆಗೆದುಕೊಳ್ಳೋಕೆ ಕಾರಣವೇನು..? ನೋಡೋನ ಈ ರಿಪೋರ್ಟ್ನಲ್ಲಿ.
T20 ಕಿಂಗ್, ಸಿಕ್ಸರ್ಗಳ ಸರದಾರ, ಯ್ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್, ಕ್ರಿಕೆಟ್ ಫ್ಯಾನ್ಸ್ಗೆ ಶಾಕ್ ನೀಡಿದ್ದಾರೆ. ಯೆಸ್..! 2022ರ ಐಪಿಎಲ್ ಹರಾಜು ಪ್ರಕ್ರಿಯೆಯಿಂದ ಹಿಂದೆ ಸರಿದಿರುವ ಗೇಲ್, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಅಷ್ಟಕ್ಕೂ ಈ ಜಮೈಕನ್ ದೊರೆ, ಐಪಿಎಲ್ಗೆ ಗುಡ್ಬೈ ಹೇಳಿದ್ರಾ..? ಆದ್ರೆ ಕ್ರಿಸ್ ಗೇಲ್ ಐಪಿಎಲ್ ಮೆಗಾ ಆಕ್ಷನ್ನಿಂದ ಹಿಂದೆ ಸರಿಯಲು ಕೆಲವು ಕಾರಣಗಳಿವೆ.
ಮುಜುಗರದಿಂದ ತಪ್ಪಿಸಿಕೊಳ್ಳಲು ಗೇಲ್ ನಿರ್ಧಾರ..?
ಮೆಗಾ ಹರಾಜಿನಲ್ಲಿ ಗೇಲ್, ಮುಜುಗರಕ್ಕೆ ಒಳಗಾಗಬಾರದು ಅಂತ, ತಮ್ಮ ಹೆಸರನ್ನ ನೋಂದಣಿ ಮಾಡಿಕೊಳ್ಳಲಿಲ್ಲ. ಯಾಕಂದ್ರೆ ಗೇಲ್ಗೆ ಈಗ 43 ವರ್ಷ. ಟಿ-ಟ್ವೆಂಟಿ ಕ್ರಿಕೆಟ್ಗೆ ಯುವಕರನ್ನ ಖರೀದಿಸಲು ಮುಂದಾಗಿರುವ ಫ್ರಾಂಚೈಸಿಗಳು, ಗೇಲ್ಗೆ ಬಿಡ್ ಮಾಡೋದು ಅನುಮಾನವಾಗಿದೆ. ಹೀಗಾಗಿ ಗೇಲ್ ಅವಮಾನದಿಂದ ಪಾರಾಗಲು, ಐಪಿಎಲ್ ಹರಾಜು ಪ್ರಕ್ರಿಯೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.
ಕಳೆದೆರೆಡು ವರ್ಷಗಳಿಂದ ರನ್ ಬರ ಎದುರಿಸಿದ ಗೇಲ್
ಸದ್ಯ ಗೇಲ್ ಉತ್ತಮ ಫಾರ್ಮ್ನಲ್ಲಿ ಇಲ್ಲ..! ಗೇಲ್ ಬ್ಯಾಟಿಂಗ್ನಲ್ಲಿ ಧಮ್ಮೂ ಇಲ್ಲ, ಖದರ್ರೂ ಇಲ್ಲ.! ಕಳೆದೆರೆಡು ವರ್ಷಗಳಲ್ಲಿ ಗೇಲ್, ರನ್ಗಳಿಸೋಕೆ ಪರದಾಡ್ತಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ 2020 ಮತ್ತು 2021 ಐಪಿಎಲ್ ಸೀಸನ್ಸ್. ರನ್ ಬರ ಎದುರಿಸುತ್ತಿರೋ ಗೇಲ್, ಮಿಲಿಯನ್ ಡಾಲರ್ ಟೂರ್ನಿಗೆ ಗುಡ್ಬೈ ಹೇಳಿದ್ದಾರೆ.
ಗೇಲ್ಗೆ ಅಪಮಾನ ಮಾಡಿತ್ತಾ ಪಂಜಾಬ್ ಕಿಂಗ್ಸ್..?
2020ರ ಐಪಿಎಲ್ ಟೂರ್ನಿಯಲ್ಲಿ ಗೇಲ್, ಪಂಜಾಬ್ ಕಿಂಗ್ಸ್ ಪರ ಆಡಿದ್ದು ಕೇವಲ 5 ಪಂದ್ಯಗಳನ್ನ ಮಾತ್ರ. ಹಾಗೇ 2021ರಲ್ಲಿ ಗೇಲ್ 10 ಪಂದ್ಯಗಳನ್ನ ಆಡಿ, ನಂತರ ಟೂರ್ನಿ ಮಧ್ಯದಲ್ಲೇ ಐಪಿಎಲ್ನಿಂದ ಹೊರ ನಡೆದ್ರು. ವೈಯಕ್ತಿಕ ಕಾರಣ ಮತ್ತು ವಿಶ್ರಾಂತಿ ನೆಪ ಹೇಳಿ ಟೂರ್ನಿ ತೊರೆದಿದ್ದ ಗೇಲ್ಗೆ, ಪಂಬಾಜ್ ಕಿಂಗ್ಸ್ ಅಪಮಾನ ಮಾಡಿತ್ತು ಅಂತ ಹೇಳಲಾಗ್ತಿದೆ.
ಯುವ ಕ್ರಿಕೆಟಿಗರ ಆರ್ಭಟ.. ಹಿಂದೆ ಸರಿಯಲು ಗೇಲ್ ನಿರ್ಧಾರ..!
T-20 ಕ್ರಿಕೆಟ್ನಲ್ಲಿ ಯುವಕರ ಅಬ್ಬರ ಜೋರಾಗಿದೆ. ಈಗಾಗಲೇ ಯುವ ಕ್ರಿಕೆಟಿಗರು, ತಾವೆಷ್ಟು ಡೇಂಜರಸ್ ಅನ್ನೋದನ್ನ ತೋರಿಸಿದ್ದಾರೆ. ಹೀಗಿರುವಾಗ ಗೇಲ್, ಯುವಕರ ಜೊತೆ ಪೈಪೋಟಿ ನಡೆಸೋದು ಕಷ್ಟವಾಗಿದೆ. ಹಾಗಾಗಿ ಕ್ರಿಸ್ಟಫರ್ ಹೆನ್ರಿ ಗೇಲ್, ಐಪಿಎಲ್ನಿಂದ ಹಿಂದೆ ಸರಿಯೋ ನಿರ್ಧಾರ ಕೈಗೊಂಡಿದ್ದಾರೆ.
ಕ್ರಿಕೆಟ್ನಿಂದಲೇ ದೂರ ಉಳಿಯೋ ಪ್ಲಾನ್..?
ಕಳೆದೆರೆಡು ವರ್ಷಗಳಿಂದ ಗೇಲ್, ಬಯೋ ಬಬಲ್ನಿಂದ ಬೇಸತ್ತಿದ್ದಾರೆ. ವೆಸ್ಟ್ ಇಂಡೀಸ್, ಐಪಿಎಲ್, ದುಬೈ ಟಿ-ಟೆನ್ ಲೀಗ್ ಟೂರ್ನಿಗಳ ವೇಳೆ ಗೇಲ್, ಬಯೋಬಲ್ನಲ್ಲಿ ಕಾಲಕಳೆದಿದ್ದಾರೆ. ಮುಂದೆಯೂ ಬಯೋಬಬಲ್ ಸಂಕಷ್ಟ ಎದುರಾಗಬಾರದು ಅಂತ ಗೇಲ್, ಕ್ರಿಕೆಟ್ನಿಂದಲೇ ದೂರ ಉಳಿಯೋ ಪ್ಲಾನ್ ಕೈಗೊಂಡಿರಬಹುದು..! ಒಟ್ನಲ್ಲಿ.. ಒಬ್ಬ ಬಿಗ್ ಎಂಟರ್ಟೈನರ್ ಅನ್ನ ಐಪಿಎಲ್, ಈ ಬಾರಿ ಮಿಸ್ ಮಾಡಿಕೊಳ್ಳುತ್ತಿದೆ. ಹಾಗೇ ಫ್ಯಾನ್ಸ್ ಸಹ, ಯ್ಯೂನಿರ್ವಸ್ ಬಾಸ್ ಆಟವನ್ನ, ಮಿಸ್ ಮಾಡಿಕೊಳ್ಳಲಿದ್ದಾರೆ.