ಅಹ್ಮದಾಬಾದ್‌: ಸತತ 4 ಗೆಲುವಿನ ಬಳಿಕ ಸೋಲಿನ ಖಾತೆ ತೆರೆದ ಆರ್‌ಸಿಬಿ ಮತ್ತು ಸೂಪರ್‌ ಓವರ್‌ ಲಕ್‌ ಸಂಪಾದಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ಮಂಗಳವಾರದ ಐಪಿಎಲ್‌ ಪಂದ್ಯದಲ್ಲಿ ಮುಖಾಮುಖೀಯಾಗಲಿವೆ.

ಎರಡೂ ತಂಡಗಳು 5 ಪಂದ್ಯಗಳನ್ನಾಡಿದ್ದು, ನಾಲ್ಕರಲ್ಲಿ ಗೆದ್ದು ಒಂದನ್ನು ಸೋತಿವೆ. 8 ಅಂಕಗಳನ್ನು ಹೊಂದಿವೆ. ಆದರೆ ರನ್‌ರೇಟ್‌ನಲ್ಲಿ ಮುಂದಿರುವ ಡೆಲ್ಲಿ ದ್ವಿತೀಯ ಸ್ಥಾನಿಯಾಗಿದೆ.

ಮಂಗಳವಾರ ಯಾರೇ ಗೆದ್ದರೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುವುದು ವಿಶೇಷ. ಹೀಗಾಗಿ ಪಂದ್ಯ ತೀವ್ರ ಕುತೂಹಲ ಮೂಡಿಸಿದೆ.

 

ಕ್ರೀಡೆ – Udayavani – ಉದಯವಾಣಿ
Read More

By

Leave a Reply