ಪಂಜಾಬ್​ ಕಿಂಗ್ಸ್​ ತಂಡದ ನಾಯಕ ಕೆ.ಎಲ್​ ರಾಹುಲ್ ತೀವ್ರ ಅಪೇಂಡಿಕ್ಸ್ ನೋವಿನ ಪರಿಣಾಮ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಈ ಕುರಿತು ಪಂಜಾಬ್​ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದೆ.

ಕಳೆದ ರಾತ್ರಿ ಕೆ.ಎಲ್​ ರಾಹುಲ್ ತೀವ್ರ ಹೊಟ್ಟೆನೋವಿನಿಂದ ಬಳಲಿದ್ದರು. ನೋವಿಗೆ ಔಷಧಿ ನೀಡಿದರು ಪರಿಣಾಮಕಾರಿಯಾಗಲಿಲ್ಲ. ಆದ್ದರಿಂದ ಅವರನ್ನು ಕೂಡಲೇ ತುರ್ತು ಕೊಠಡಿಗೆ ದಾಖಲಿಸಿ ಅಗತ್ಯ ಪರೀಕ್ಷೆಗಳನ್ನು ನಡೆಸಲಾಯಿತು. ಆ ವೇಳೆ ಅವರಿಗೆ ತೀವ್ರ ಅಪೇಂಡಿಕ್ಸ್ ಇರುವುದು ದೃಢವಾಗಿತ್ತು. ಆದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಫ್ರಾಂಚೈಸಿ ತಿಳಿಸಿದೆ.

2021ರ ಐಪಿಎಲ್​ ಟೂರ್ನಿಯಲ್ಲಿ ಸದ್ಯ ಕೆ.ಎಲ್​ ರಾಹುಲ್ ಟಾಪ್​​ ರನ್​​ ಸ್ಕೋರರ್​ ಆಗಿದ್ದು, 7 ಇನ್ನಿಂಗ್ಸ್​ಗಳಿಂದ ಶತಕ ಸಮೇತ 331 ರನ್​ಗಳನ್ನು ಗಳಿಸಿದ್ದಾರೆ. ಸೋಮವಾರ ಆರ್​ಸಿಬಿ ವಿರುದ್ಧ ರಾಹುಲ್​ ಸಿಡಿಸಿದ ಅಜೇಯ 93 ರನ್​​ಗಳು ತಂಡದ ಗೆಲುವಿಗೆ ಪ್ರಮುಖ ಕಾರಣವಾಗಿತ್ತು. ಟೂರ್ನಿಯಲ್ಲಿ ಇದುವರೆಗೂ 3 ಗೆಲುವುಗಳನ್ನು ಪಡೆದಿರುವ ಪಂಜಾಬ್​ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಸದ್ಯ ರಾಹುಲ್ ಶಸ್ತ್ರ ಚಿಕಿತ್ಸೆ ಒಳಗಾಗುವ ಕಾರಣದಿಂದ ಮುಂದಿನ ಪಂದ್ಯಗಳಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.

The post IPL 2021: ಪಂಜಾಬ್​ಗೆ ಶಾಕ್.. ಕನ್ನಡಿಗ ಕೆ.ಎಲ್ ರಾಹುಲ್​ಗೆ ಆಪರೇಷನ್ appeared first on News First Kannada.

Source: newsfirstlive.com

Source link