IPL 2021: ಫಾರ್ಮ್‌ಗೆ ಮರಳಲು ಧೋನಿಗೆ ಸಾಧ್ಯವಾಗುವುದಿಲ್ಲ! ಕಳಪೆ ಫಾರ್ಮ್​ನಲ್ಲಿರುವ ಧೋನಿಗೆ ಗೌತಮ್ ಗಂಭೀರ್ ಸಲಹೆ | IPL 2021 Gautam Gambhir Said MS Dhoni needs to bat enough balls to be a threat to the opposition psr

IPL 2021: ಫಾರ್ಮ್‌ಗೆ ಮರಳಲು ಧೋನಿಗೆ ಸಾಧ್ಯವಾಗುವುದಿಲ್ಲ! ಕಳಪೆ ಫಾರ್ಮ್​ನಲ್ಲಿರುವ ಧೋನಿಗೆ ಗೌತಮ್ ಗಂಭೀರ್ ಸಲಹೆ

ಮಹೇಂದ್ರ ಸಿಂಗ್ ಧೋನಿ

ಚೆನ್ನೈ ಸೂಪರ್ ಕಿಂಗ್ಸ್ (CSK) ಇದುವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2021) ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಈ ಋತುವಿನಲ್ಲಿ ಪ್ಲೇಆಫ್ ತಲುಪಿದ ಮೊದಲ ತಂಡವಾಗಿದೆ. ಆದರೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ (ಎಂಎಸ್ ಧೋನಿ) ಈ ಋತುವಿನಲ್ಲಿ ಇದುವರೆಗೂ ಫಾರ್ಮ್‌ನಲ್ಲಿ ಕಾಣಿಸಿಕೊಂಡಿಲ್ಲ. ಧೋನಿಯ ಬ್ಯಾಟ್‌ನಿಂದ ರನ್‌ಗಳು ಹೊರಬರುತ್ತಿಲ್ಲ. ಇದು ಸಿಎಸ್‌ಕೆಗೆ ದೊಡ್ಡ ಕಾಳಜಿಯಾಗಿದೆ. ಧೋನಿ ಬ್ಯಾಟ್​ನಿಂದ ರನ್ ಗಳಿಸದಿರುವುದರ ಹಿಂದೆ ಭಾರತದ ಮಾಜಿ ಓಪನರ್ ಗೌತಮ್ ಗಂಭೀರ್ ದೊಡ್ಡ ಕಾರಣ ನೀಡಿದ್ದಾರೆ. ಎದುರಾಳಿ ತಂಡಗಳಿಗೆ ಧೋನಿ ಡೇಂಜರಸ್ ಆಗಬೇಕಾದರೆ ಅವರು ಬ್ಯಾಟಿಂಗ್ ಕ್ರಮಾಂಕವನ್ನು ಬದಲಾಯಿಸಬೇಕಾಗಿದೆ ಎಂದು ಗಂಭೀರ್ ಹೇಳಿದರು.

ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ಜೊತೆಗಿನ ಸಂಭಾಷಣೆಯಲ್ಲಿ, ಗಂಭೀರ್ ಕೂಡ ಧೋನಿಗೆ ಪಂದ್ಯದಲ್ಲಿ ಆಡಲು ಸಾಕಷ್ಟು ಚೆಂಡುಗಳು ಸಿಗುವುದಿಲ್ಲ ಎಂದು ಹೇಳಿದರು. ಧೋನಿ ತನ್ನ ಬ್ಯಾಟ್‌ನಿಂದ ರನ್ ಬಂದಾಗ ಮಾತ್ರ ಎದುರಾಳಿ ತಂಡಗಳಿಗೆ ಭಯ ಸೃಷ್ಟಿಯಾಗುತ್ತದೆ. ಹಾಗಾಗಿ ಧೋನಿ ಹೆಚ್ಚು ಹೆಚ್ಚು ಚೆಂಡುಗಳನ್ನು ಆಡುವ ಅವಶ್ಯಕತೆ ಇದೆ. ಗಂಭೀರ್ ಈ ಹಿಂದೆ ಹಲವು ಬಾರಿ ಧೋನಿಗೆ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕೇಳುತ್ತಿದ್ದರು. ಮಹೇಂದ್ರ ಸಿಂಗ್ ಧೋನಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಹೊರಡಬೇಕು ಎಂದು ಗೌತಮ್ ಗಂಭೀರ್ ಈ ಹಿಂದೆ ಹೇಳಿದ್ದರು.

ಧೋನಿಗೆ ಫಾರ್ಮ್‌ಗೆ ಮರಳಲು ಸಾಧ್ಯವಾಗುವುದಿಲ್ಲ
ಮಾಜಿ ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕಥೆ ಇಯಾನ್ ಬಿಷಪ್ ಧೋನಿಗೆ ರನ್ ಗಳಿಸಲು ಸಾಧ್ಯವಾಗುತ್ತಿಲ್ಲ ಎಂದು ಭಾವಿಸಿದ್ದಾರೆ. ಆದ್ದರಿಂದ ಅವರು ರವೀಂದ್ರ ಜಡೇಜಾರಿಗೆ ಬ್ಯಾಟಿಂಗ್ ಮಾಡಲು ಮುಂಬಡ್ತಿ ನೀಡಿದ್ದಾರೆ. ಧೋನಿ ಇಲ್ಲಿಂದ ಕಳೆದುಕೊಂಡ ಫಾರ್ಮ್ ಅನ್ನು ಮರಳಿ ಪಡೆಯುವುದಿಲ್ಲ ಎಂದು ಬಿಷಪ್ ಹೇಳಿದರು. ಧೋನಿಯ ಬ್ಯಾಟ್‌ನಿಂದ ರನ್ ಬರುತ್ತಿಲ್ಲ. ಹಾಗಾಗಿ ಸಹಜವಾಗಿ ನಾನು ಜಡೇಜಾ ಹೆಚ್ಚು ಬ್ಯಾಟ್ ಮಾಡುವುದನ್ನು ನೋಡಲು ಬಯಸುತ್ತೇನೆ. ಈ ಋತುವಿನಲ್ಲಿ ಧೋನಿಗೆ ತನ್ನ ಫಾರ್ಮ್ ಅನ್ನು ಮರಳಿ ಪಡೆಯಲು ಸಾಧ್ಯವಾಗುತ್ತದೆ ಎಂದು ಅನಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಈ ಋತುವಿನಲ್ಲಿ ಧೋನಿಯ ಕಳಪೆ ಪ್ರದರ್ಶನ
ಐಪಿಎಲ್ 2021 ರ ಋತುವಿನಲ್ಲಿ ಈವರೆಗೆ ಆಡಿರುವ 13 ಪಂದ್ಯಗಳಲ್ಲಿ ಧೋನಿಯ ಬ್ಯಾಟ್​ನಿಂದ ಕೇವಲ 83 ರನ್ ಗಳು ಮಾತ್ರ ಹೊರಬಂದಿವೆ. ಅವರ ಅತ್ಯುತ್ತಮ ಸ್ಕೋರ್ 18 ರನ್. ಧೋನಿ 98.80 ಸ್ಟ್ರೈಕ್ ರೇಟ್​ನಲ್ಲಿ ರನ್ ಗಳಿಸಿದ್ದಾರೆ. ಈ ಸ್ಟ್ರೈಕ್ ರೇಟ್ ಈಗ 14 ಐಪಿಎಲ್ ಸೀಸನ್​ಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ. ಚೆನ್ನೈ ಸೂಪರ್ ಕಿಂಗ್ಸ್ ಇಂದು ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧ ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೆಣಸಲಿದೆ. ಇದು ಚೆನ್ನೈನ ಕೊನೆಯ ಲೀಗ್ ಪಂದ್ಯವಾಗಿದೆ. ಇದರ ನಂತರ, ಕ್ವಾಲಿಫೈಯರ್‌ ಪಂದ್ಯದಲ್ಲಿ ಸಿಎಸ್‌ಕೆ ದೆಹಲಿ ಕ್ಯಾಪಿಟಲ್ಸ್ ಅನ್ನು ಎದುರಿಸಲಿದೆ.

TV9 Kannada

Leave a comment

Your email address will not be published. Required fields are marked *