
ಬೌಲ್ಟ್ ನೀಡಿದ ರಾಜಸ್ಥಾನ ಜರ್ಸಿ ತೊಟ್ಟ ಆರ್ಸಿಬಿ ಅಭಿಮಾನಿ
IPL 2022: ಬೌಲ್ಟ್ನಿಂದ ಜರ್ಸಿಯನ್ನು ಉಡುಗೂರೆಯಾಗಿ ಪಡೆದ ಈ ಪುಟ್ಟ ಅಭಿಮಾನಿ ತಾನು ಧರಿಸಿದ್ದ ಆರ್ಸಿಬಿ ಜರ್ಸಿಯನ್ನು ಕಳಚಿ, ಬೌಲ್ಟ್ ನೀಡಿದ ರಾಜಸ್ಥಾನದ ಜರ್ಸಿಯನ್ನು ತೊಟ್ಟುಕೊಂಡಿದ್ದಾನೆ.
2022 ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನ ಫೈನಲ್ನಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸಲು ಕೇವಲ ಎರಡು ದಿನಗಳ ಅಂತರದಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ಅದ್ಭುತ ಪುನರಾಗಮನವನ್ನು ಮಾಡಿತು. ಲೀಗ್ ಹಂತದಲ್ಲಿ ಎರಡನೇ ಸ್ಥಾನ ಪಡೆದ ನಂತರ, ರಾಜಸ್ಥಾನವು ಈ ವಾರದ ಆರಂಭದಲ್ಲಿ ಕೋಲ್ಕತ್ತಾದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ಸೋತಿತು, ಎರಡನೇ ಕ್ವಾಲಿಫೈಯರ್ನಲ್ಲಿ ಶುಕ್ರವಾರ ಅಹಮದಾಬಾದ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸುವ ಮೂಲಕ ಫೈನಲ್ಗೆ ಎಂಟ್ರಿಕೊಟ್ಟಿದೆ. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡದ 14 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯಗೊಂಡಿದೆ. ಐಪಿಎಲ್ ಇತಿಹಾಸದಲ್ಲಿ ಮೊದಲ ಚಾಂಪಿಯನ್ ತಂಡವು ತನ್ನ ಪ್ರಶಸ್ತಿ ಯಶಸ್ಸಿನ ನಂತರ ಮತ್ತೊಮ್ಮೆ ಪ್ರಶಸ್ತಿಯ ಸಮೀಪಕ್ಕೆ ಬಂದಿದೆ. ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಐಪಿಎಲ್ 2022 ರ ಫೈನಲ್ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಅಹಮದಾಬಾದ್ನಲ್ಲಿ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಏಕಪಕ್ಷೀಯ ರೀತಿಯಲ್ಲಿ 7 ವಿಕೆಟ್ಗಳ ಅಂತರದಿಂದ ಸೋಲಿಸಿತು.
ಆದರೆ ಪಂದ್ಯವೆಲ್ಲ ಮುಗಿದ ನಂತರ ವಿಶೇಷ ಘಟನೆಯೊಂದು ನಡೆದಿದ್ದು, ಈ ಘಟನೆಯನ್ನು ವಿಡಿಯೋ ಮಾಡಿದ್ದ ರಾಜಸ್ಥಾನ ತಂಡ ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿದೆ. ಆ ವಿಡಿಯೋದಲ್ಲಿರುವುದೆನೇಂದರೆ, ಪಂದ್ಯದ ನಂತರ, ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಟ್ರೆಂಟ್ ಬೌಲ್ಟ್ ಅವರು RCB ಜರ್ಸಿ ಧರಿಸಿದ್ದ ಯುವ ಅಭಿಮಾನಿಗೆ ತಮ್ಮ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಬೌಲ್ಟ್ನಿಂದ ಜರ್ಸಿಯನ್ನು ಉಡುಗೂರೆಯಾಗಿ ಪಡೆದ ಈ ಪುಟ್ಟ ಅಭಿಮಾನಿ ತಾನು ಧರಿಸಿದ್ದ ಆರ್ಸಿಬಿ ಜರ್ಸಿಯನ್ನು ಕಳಚಿ, ಬೌಲ್ಟ್ ನೀಡಿದ ರಾಜಸ್ಥಾನದ ಜರ್ಸಿಯನ್ನು ತೊಟ್ಟುಕೊಂಡಿದ್ದಾನೆ. ಈ ಪೋರ ಮಾಡುವುದೆಲ್ಲವನ್ನು ವಿಡಿಯೋ ಮೂಲಕ ಸೆರೆ ಹಿಡಿದಿದ್ದ ರಾಜಸ್ಥಾನ ತಂಡ ಇಂದು ಈ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಈಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
How can you not love Trent Boult? 😍
Watch him make a young fan’s day after #RRvRCB. 💗 pic.twitter.com/YrWgRsAgsN
— Rajasthan Royals (@rajasthanroyals) May 28, 2022