
sara tendulkar emotional post
IPL 2022: ಈ ಬಾರಿಯ ಐಪಿಎಲ್ನಲ್ಲಿ ಅರ್ಜುನ್ ತೆಂಡೂಲ್ಕರ್ ಆಡಲಿದ್ದಾರೆ ಎಂದು ಹಲವು ಕ್ರೀಡಾ ವಿಮರ್ಶಕರು ವಿಶ್ವಾಸ ವ್ಯಕ್ತಪಡಿಸಿದ್ದರು. ಮಾಸ್ಟರ್ ಬ್ಲಾಸ್ಟರ್ ತೆಂಡೂಲ್ಕರ್ ಪುತ್ರನನ್ನು ಮೈದಾನದಲ್ಲಿ ನೋಡಲು ಅಭಿಮಾನಿಗಳು ಕೂಡ ಕಾತರರಾಗಿದ್ದರು.
ಐಪಿಎಲ್ 2022 (IPL 2022)ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಅವಕಾಶ ಪಡೆದ ಅರ್ಜುನ್ ತೆಂಡೂಲ್ಕರ್ (Arjun Tendulkar), ಇಡೀ ಸರಣಿಯಲ್ಲಿ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆಯಲಿಲ್ಲ. ಇದರ ಜೊತೆಗೆ ಈಗ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ 2022 ರಿಂದ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಗುಳಿದಿದೆ. ಇಡೀ ಸೀಸನ್ನಲ್ಲಿ ಒಂದೇ ಒಂದು ಅವಕಾಶ ಪಡೆಯದ ಅರ್ಜುನ್ ತೆಂಡೂಲ್ಕರ್ ಅವರನ್ನು ಹುರಿದುಂಬಿಸಲು ಅಕ್ಕ ಸಾರಾ (Sara Tendulkar) ಭಾವನಾತ್ಮಕ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಸಾರಾ ಮುಂಬೈ ಮ್ಯಾಚ್ ಅನ್ನು ವೀಕ್ಷಿಸಲು ಬಂದಾಗ ಅರ್ಜುನ್ನ ವಿಡಿಯೋವನ್ನು ಶೂಟ್ ಮಾಡಿದ್ದರು. ಅವರು ಈ ಪೋಸ್ಟ್ನಲ್ಲಿ ಆ ವೀಡಿಯೊವನ್ನು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಅರ್ಜುನ್ ಬಾಲ್ ಬಾಯ್ ಆಗಿ ಕೆಲಸ ಮಾಡುತ್ತಿರುವುದನ್ನು ಕಾಣಬಹುದಾಗಿದೆ.ಆ ವಿಡಿಯೋದ ಹಿನ್ನೆಲೆಯಲ್ಲಿ ಅಪ್ನಾ ಟೈಮ್ ಆಯೇಗಾ ಹಾಡು ಕೇಳಿ ಬರುತ್ತಿದೆ. ಅರ್ಜುನ್ಗೆ ನಿರಾಸೆಯಾಗುವುದನ್ನು ತಡೆಯಲೂ ಸಾರಾ ಈ ವಿಡಿಯೋ ಮೂಲಕ ತಮ್ಮನಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಈಗ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ತ್ ವೈರಲ್ ಆಗುತ್ತಿದೆ.
ಎರಡು ಬಾರಿಯೂ ಅವಕಾಶ ಸಿಗಲಿಲ್ಲ
ಈ ಬಾರಿಯ ಐಪಿಎಲ್ನಲ್ಲಿ ಅರ್ಜುನ್ ತೆಂಡೂಲ್ಕರ್ ಆಡಲಿದ್ದಾರೆ ಎಂದು ಹಲವು ಕ್ರೀಡಾ ವಿಮರ್ಶಕರು ವಿಶ್ವಾಸ ವ್ಯಕ್ತಪಡಿಸಿದ್ದರು. ಮಾಸ್ಟರ್ ಬ್ಲಾಸ್ಟರ್ ತೆಂಡೂಲ್ಕರ್ ಪುತ್ರನನ್ನು ಮೈದಾನದಲ್ಲಿ ನೋಡಲು ಅಭಿಮಾನಿಗಳು ಕೂಡ ಕಾತರರಾಗಿದ್ದರು. ಆದರೆ ಅರ್ಜುನ್ಗೆ ಆ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ನಡೆದ ಹರಾಜಿನಲ್ಲಿ ಅರ್ಜುನ್ ಅವರನ್ನು ಮುಂಬೈ ಇಂಡಿಯನ್ಸ್ 30 ಲಕ್ಷ ರೂ.ಗೆ ಅವರನ್ನು ಖರೀದಿಸಿತ್ತು. ಆದರೆ ಯಾವುದೇ ಪಂದ್ಯದಲ್ಲೂ ಅವಕಾಶ ಸಿಗಲಿಲ್ಲ. ಕಳೆದ ವರ್ಷ ಐಪಿಎಲ್ 2021 ರಲ್ಲಿ ಅವರನ್ನು ಮುಂಬೈ ಇಂಡಿಯನ್ಸ್ 20 ಲಕ್ಷ ರೂ.ಗೆ ಖರೀದಿಸಿತು. ಆದರೆ ಆ ಸಮಯದಲ್ಲೂ ಅವರಿಗೆ ಅವಕಾಶ ಸಿಗಲಿಲ್ಲ.