ಇಂಡಿಯನ್ ಪ್ರೀಮಿಯರ್ ಸೀಸನ್ 15 2022 ಸದ್ಯದಲ್ಲೇ ನಡೆಯಲಿದೆ. ಈ ಟ್ರೋಫಿ ಗೆಲ್ಲೋಕೆ ಎಲ್ಲಾ ಟೀಂಗಳು ಭಾರೀ ಸಿದ್ಧತೆ ನಡೆಸಿಕೊಳ್ಳುತ್ತಿವೆ. ಇದರ ಭಾಗವಾಗಿ ಮುಂದಿನ ಸೀಸನ್ ಮೆಗಾ ಹರಾಜು ನಡೆಯಲಿದೆ. ಹೀಗಾಗಿ ಅದಕ್ಕೂ ಮುನ್ನ ಪ್ರತಿಯೊಂದು ತಂಡಗಳಿಗೆ ನಾಲ್ಕು ಆಟಗಾರರನ್ನು ರಿಟೈನ್ ಮಾಡಿಕೊಳ್ಳುವ ಅವಕಾಶ ನೀಡಲಾಗುತ್ತಿದೆ. ಹಾಗೆಯೇ ಹೊಸ ಎರಡು ತಂಡಗಳಿಗೆ ಮೂವರು ಆಟಗಾರರನ್ನು ನೇರವಾಗಿ ಆರಿಸಿಕೊಳ್ಳುವ ಆಯ್ಕೆ ಇರಲಿದೆ.
ಇನ್ನು, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಲಿದೆ. ಆರ್ಸಿಬಿಯಲ್ಲಿರುವ ಆಟಗಾರರ ಖರೀದಿಗೆ ಹೆಚ್ಚಿನ ಪೈಪೋಟಿ ಇದೆ. ಹಾಗಾಗಿ ಅಳೆದು ತೂಗಿ ನಾಲ್ವರು ಸ್ಟಾರ್ ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಲು ಆರ್ಸಿಬಿ ಮುಂದಾಗಿದೆ.
ರಿಟೈನ್ ರೂಲ್ ಹೀಗಿದೆ. ಒಂದು 3 ಭಾರತೀಯ ಆಟಗಾರರು+ 1 ವಿದೇಶಿ ಆಟಗಾರನನ್ನು ಉಳಿಸಿಕೊಳ್ಳಬಹುದು. 2 ಭಾರತೀಯ ಆಟಗಾರರು + 2 ವಿದೇಶಿ ಆಟಗಾರರನ್ನು ರಿಟೈನ್ ಮಾಡಿಕೊಳ್ಳಬಹುದು. ಈಗ ಆರ್ಸಿಬಿ 2+2 ಆಯ್ಕೆಗೆ ಮುಂದಾಗಿದೆ. ಹಾಗಾಗಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ಎಬಿ ಡಿವಿಲಿಯರ್ಸ್, ಯುಜುವೇಂದ್ರ ಚಹಲ್ ಅವರನ್ನು ಆರ್ಸಿಬಿ ಉಳಿಸಿಕೊಳ್ಳೋದು ಪಕ್ಕಾ ಆಗಿದೆ.
ಇದನ್ನೂ ಓದಿ: ಎಬಿಡಿನ ವಿನಾಕಾರಣ ಟಾರ್ಗೆಟ್ ಮಾಡಲಾಯ್ತಾ? ನಿಜಕ್ಕೂ ಆಗಿದ್ದೇನು? ಅವರೇ ಹೇಳ್ತಾರೆ ಕೇಳಿ.!
The post IPL 2022: ಈ ನಾಲ್ವರು ಸ್ಟಾರ್ ಆಟಗಾರರನ್ನು ಉಳಿಸಿಕೊಳ್ಳಲಿದೆ RCB; ಯಾರವರು? appeared first on News First Kannada.