
ಉಮ್ರಾನ್ ಮಲಿಕ್
IPL 2022: ಉದಯೋನ್ಮುಖ ಆಟಗಾರ ಪ್ರಶಸ್ತಿಗಳ ವರ್ಗಕ್ಕೆ ಸೇರಲು ಕೆಲವು ನಿಯಮಗಳು ಮತ್ತು ಷರತ್ತುಗಳಿವೆ. ಆಟಗಾರನು ಏಪ್ರಿಲ್ 1, 1996 ರ ನಂತರ ಜನಿಸಿರಬೇಕು. ಅವನು 5 ಅಥವಾ ಕಡಿಮೆ ಟೆಸ್ಟ್ ಮತ್ತು 20 ಅಥವಾ ಕಡಿಮೆ ODIಗಳನ್ನು ಆಡಿರಬೇಕು.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ನ 15 ನೇ ಸೀಸನ್ ಈಗ ಅಂತಿಮ ಹಂತವನ್ನು ತಲುಪಿದೆ. ಐಪಿಎಲ್ ಫೈನಲ್ ಮೇ 29 ರಂದು ನಡೆಯಲಿದೆ. ಇದರೊಂದಿಗೆ 2 ತಿಂಗಳಿನಿಂದ ನಡೆಯುತ್ತಿದ್ದ ಐಪಿಎಲ್ 2022 ಮುಕ್ತಾಯವಾಗಲಿದೆ. ಭಾನುವಾರ (IPL Champion) ನಡೆಯುವ ಫೈನಲ್ ಪಂದ್ಯದಲ್ಲಿ ಹೊಸ ಚಾಂಪಿಯನ್ ತಂಡ ಕೂಡ ಫಿಕ್ಸ್ ಆಗಲಿದೆ. ಈ ಟಿ20 ಪಂದ್ಯಾವಳಿಯಲ್ಲಿ ಆರೆಂಜ್ ಮತ್ತು ಪರ್ಪಲ್ ಕ್ಯಾಪ್ಗಳ ಜೊತೆಗೆ, ಪ್ರತಿ ವರ್ಷ ಯುವ ಆಟಗಾರನಿಗೆ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪ್ರಶಸ್ತಿ ಗೆಲ್ಲುವವರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಭವಿಷ್ಯದ ತಾರೆಯಾಗುವ ಸಾಮರ್ಥ್ಯವೂ ಕಂಡುಬರುತ್ತದೆ. ಉದಯೋನ್ಮುಖ ಆಟಗಾರ ಪ್ರಶಸ್ತಿಗಳ ವರ್ಗಕ್ಕೆ ಸೇರಲು ಕೆಲವು ನಿಯಮಗಳು ಮತ್ತು ಷರತ್ತುಗಳಿವೆ. ಆಟಗಾರನು ಏಪ್ರಿಲ್ 1, 1996 ರ ನಂತರ ಜನಿಸಿರಬೇಕು. ಅವನು 5 ಅಥವಾ ಕಡಿಮೆ ಟೆಸ್ಟ್ ಮತ್ತು 20 ಅಥವಾ ಕಡಿಮೆ ODIಗಳನ್ನು ಆಡಿರಬೇಕು. ಐಪಿಎಲ್ನಲ್ಲಿ 25 ಅಥವಾ ಅದಕ್ಕಿಂತ ಕಡಿಮೆ ಪಂದ್ಯಗಳನ್ನು ಆಡಿರಬೇಕು. ಈ ಪ್ರಶಸ್ತಿಗೆ ಆಯ್ಕೆಯಾಗುವವರು ಇದಕ್ಕೂ ಮುಂಚೆ ಐಪಿಎಲ್ನಲ್ಲಿ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಗೆದ್ದಿರಬಾರದು.
ಈ ಪ್ರಶಸ್ತಿ ರೇಸ್ನಲ್ಲಿರುವ ಆಟಗಾರರಿವರು