IPL 2022: ಐಪಿಎಲ್​ ಫೈನಲ್​ ವೇದಿಕೆಯಲ್ಲೂ ‘ಕೆಜಿಎಫ್’ ಹವಾ; ರಾಕಿ ಭಾಯ್ ಅವತಾರ ತಾಳಿದ ರಣವೀರ್ ಸಿಂಗ್- ವಿಡಿಯೋ ಇಲ್ಲಿದೆ | Ranveer Singh dance to kgf chapter 2 song and tells violence violence dialogue in IPL 2022 final at Narendra Modi Stadium


IPL 2022: ಐಪಿಎಲ್​ ಫೈನಲ್​ ವೇದಿಕೆಯಲ್ಲೂ ‘ಕೆಜಿಎಫ್’ ಹವಾ; ರಾಕಿ ಭಾಯ್ ಅವತಾರ ತಾಳಿದ ರಣವೀರ್ ಸಿಂಗ್- ವಿಡಿಯೋ ಇಲ್ಲಿದೆ

ರಣವೀರ್ ಸಿಂಗ್ (ಎಡ), ನರೇಂದ್ರ ಮೋದಿ ಸ್ಟೇಡಿಯಂ (ಬಲ)

Ranveer Singh | KGF Chapter 2: ಐಪಿಎಲ್ 2022ರ ಸಮಾರೋಪ ಸಮಾರಂಭದಲ್ಲೂ ‘ಕೆಜಿಎಫ್ ಚಾಪ್ಟರ್ 2’ ಹವಾ ಜೋರಾಗಿದೆ. ಬಾಲಿವುಡ್ ನಟ ರಣವೀರ್ ಸಿಂಗ್ ‘ಕೆಜಿಎಫ್ ಚಾಪ್ಟರ್ 2’ ಡೈಲಾಗ್ ಹೊಡೆದು, ‘ಧೀರ ಧೀರ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್ 2022ರ (IPL 2022) ಫೈನಲ್ ಪಂದ್ಯ ನಡೆಯುತ್ತಿದೆ. ಪಂದ್ಯ ಆರಂಭಕ್ಕೂ ಮುನ್ನ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಹಾಗೂ ಬಾಲಿವುಡ್ ನಟ ರಣವೀರ್ ಸಿಂಗ್ ಕಾರ್ಯಕ್ರಮ ನೀಡಿದರು. ಅದರಲ್ಲಿ ರಣವೀರ್ ಸಿಂಗ್ ದೇಶದ ಹಲವು ಪ್ರಸಿದ್ಧ ಗೀತೆಗಳಿಗೆ ಹೆಜ್ಜೆ ಹಾಕಿದ್ದು ಎಲ್ಲರ ಮನಗೆದ್ದಿದೆ. ವಿಶೇಷವೆಂದರೆ ‘ಕೆಜಿಎಫ್ ಚಾಪ್ಟರ್ 2’ (KGF Chapter 2) ಚಿತ್ರದ ‘ವೈಲೆನ್ಸ್ ವೈಲೆನ್ಸ್’ ಡೈಲಾಗ್​ಗೆ ಅಭಿನಯಿಸುತ್ತಾ ಅಬ್ಬರಿಸಿದ ರಣವೀರ್ ಸಿಂಗ್ ನಂತರ ‘ಧೀರ ಧೀರ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಜನ ನೆರೆದಿದ್ದ ಮೈದಾನದಿಂದ ರಣವೀರ್ ಸಿಂಗ್​ ನೃತ್ಯಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ಸಂದರ್ಭದ ವಿಡಿಯೋ ವೈರಲ್ ಆಗಿದ್ದು, ‘ಕೆಜಿಎಫ್ ಚಾಪ್ಟರ್ 2’ ಟ್ವಿಟರ್ ಖಾತೆಯಿಂದ ಹಂಚಿಕೊಳ್ಳಲಾಗಿದೆ.

ವಿಡಿಯೋ ಇಲ್ಲಿದೆ:

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *