IPL 2022: ಐಪಿಎಲ್ ಹರಾಜಿಗೂ ಮುನ್ನ ಪಂಜಾಬ್ ತಂಡಕ್ಕೆ ಆಘಾತ; ಬ್ಯಾಟಿಂಗ್ ಕೋಚ್ ವಾಸಿಂ ಜಾಫರ್ ರಾಜೀನಾಮೆ! | IPL 2022 Auction Punjab Kings IPL Auction batting coach Wasim Jaffer resigns Anil Kumble


IPL 2022: ಐಪಿಎಲ್ ಹರಾಜಿಗೂ ಮುನ್ನ ಪಂಜಾಬ್ ತಂಡಕ್ಕೆ ಆಘಾತ; ಬ್ಯಾಟಿಂಗ್ ಕೋಚ್ ವಾಸಿಂ ಜಾಫರ್ ರಾಜೀನಾಮೆ!

ವಾಸಿಂ ಜಾಫರ್

ಐಪಿಎಲ್ 2022 ಹರಾಜಿ (IPL 2022 auction)ಗೂ ಮುನ್ನ ಪಂಜಾಬ್ ಕಿಂಗ್ಸ್ (Punjab Kings ) ಭಾರೀ ಹಿನ್ನಡೆ ಅನುಭವಿಸಿದೆ. ತಂಡದ ಬ್ಯಾಟಿಂಗ್ ಕೋಚ್ ವಾಸಿಂ ಜಾಫರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಾಸಿಂ ಜಾಫರ್ ತಮ್ಮ ರಾಜೀನಾಮೆ ಕುರಿತು ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ. ವಾಸಿಂ ಜಾಫರ್ ಅವರು 2019 ರಲ್ಲಿ ಪಂಜಾಬ್ ಕಿಂಗ್ಸ್‌ಗೆ ಬ್ಯಾಟಿಂಗ್ ಕೋಚ್ ಆಗಿದ್ದರು. ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ನೇತೃತ್ವದಲ್ಲಿ ಕೆಲಸ ಮಾಡುತ್ತಿದ್ದ ಅವರು ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್‌ಗಳಿಗೆ ಸಹಾಯ ಮಾಡುತ್ತಿದ್ದರು. ಆದರೆ ಇದೀಗ ಅವರ ರಾಜೀನಾಮೆ ಸುದ್ದಿ ಸಂಚಲನ ಮೂಡಿಸಿದೆ.

ವಾಸಿಂ ಜಾಫರ್ ರಾಜೀನಾಮೆ ನಂತರ ಪಂಜಾಬ್ ಕಿಂಗ್ಸ್ ಆಟಗಾರರಷ್ಟೇ ಅಲ್ಲದೆ ಬ್ಯಾಟಿಂಗ್ ಕೋಚ್‌ಗಾಗಿಯೂ ಹುಡುಕಾಟ ನಡೆಸುತ್ತಿದೆ. ಬೌಲಿಂಗ್ ಕೋಚ್ ಆಗಿ ಆಸ್ಟ್ರೇಲಿಯಾದ ಡೇಮಿಯನ್ ರೈಟ್ ಮತ್ತು ಫೀಲ್ಡಿಂಗ್ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್ ತಂಡದೊಂದಿಗೆ ಇದ್ದಾರೆ.

ರಾಜೀನಾಮೆ ಬಗ್ಗೆ ತಮಾಷೆಯ ಟ್ವೀಟ್
ಪಂಜಾಬ್ ಕಿಂಗ್ಸ್‌ನ ಬ್ಯಾಟಿಂಗ್ ಕೋಚ್‌ ಹುದ್ದೆಗೆ ರಾಜೀನಾಮೆ ನೀಡಿದ ಬಗ್ಗೆ ವಾಸಿಂ ಜಾಫರ್ ತಮಾಷೆಯ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ರಣಬೀರ್ ಕಪೂರ್ ಅಭಿನಯದ ‘ಏ ದಿಲ್ ಹೈ ಮುಷ್ಕಿಲ್’ ಚಿತ್ರದ ‘ಅಚ್ಚಾ ಚಲಾ ಹೂಂ, ದುವಾಂ ಮೇ ಯಾದ್ ರಖಾನಾ’ ಹಾಡಿನ ಚಿತ್ರವನ್ನು ಪೋಸ್ಟ್ ಮಾಡಿ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಐಪಿಎಲ್ 2022 ಕ್ಕೆ ಅನಿಲ್ ಕುಂಬ್ಳೆ ಮತ್ತು ಇಡೀ ತಂಡಕ್ಕೆ ಶುಭವಾಗಲಿ ಎಂದು ಹೇಳಿದ್ದಾರೆ.

ಪಂಜಾಬ್ ಕಿಂಗ್ಸ್ ಪರ್ಸ್‌ನಲ್ಲಿ ರೂ 72 ಕೋಟಿ ಇದೆ

ಸ್ವತಃ ವಾಸಿಂ ಜಾಫರ್ ಕೂಡ ಐಪಿಎಲ್ ಆಡಿದ್ದಾರೆ. ಐಪಿಎಲ್‌ನ ಮೊದಲ ಸೀಸನ್‌ನಲ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು. ನಂತರ ಅವರು 6 ಪಂದ್ಯಗಳಲ್ಲಿ 19.16 ಸರಾಸರಿಯಲ್ಲಿ 115 ರನ್ ಗಳಿಸಿದರು. ಪಂಜಾಬ್ ಕಿಂಗ್ಸ್ ಕೇವಲ 12 ಕೋಟಿ ರೂ.ಗೆ ಮಯಾಂಕ್ ಅಗರ್ವಾಲ್ ಮತ್ತು 4 ಕೋಟಿ ರೂ.ಗೆ ಅನ್ ಕ್ಯಾಪ್ಡ್ ಬೌಲರ್ ಅರ್ಶ್ದೀಪ್ ಸಿಂಗ್ ಅವರನ್ನು ಉಳಿಸಿಕೊಂಡಿದೆ. ಫ್ರಾಂಚೈಸಿಯು ಐಪಿಎಲ್ 2022 ರ ಹರಾಜಿಗೆ ಗರಿಷ್ಠ 72 ಕೋಟಿ ರೂ. ಇಟ್ಟುಕೊಂಡಿದೆ. ಪಂಜಾಬ್ ಕಿಂಗ್ಸ್ ಐಪಿಎಲ್ 2022 ಗೆ ಕೆಎಲ್ ರಾಹುಲ್ ಅವರನ್ನು ನಾಯಕನಾಗಿ ಉಳಿಸಿಕೊಳ್ಳಲು ಬಯಸಿದೆ ಎಂದು ಹೇಳಲಾಗುತ್ತಿತ್ತು. ಆದರೆ ಬಲಗೈ ಬ್ಯಾಟ್ಸ್‌ಮನ್ ತಂಡವನ್ನು ತೊರೆಯಲು ನಿರ್ಧರಿಸಿದರು.

TV9 Kannada


Leave a Reply

Your email address will not be published.