IPL 2022: ಕೊರೋನಾತಂಕ: ಡೆಲ್ಲಿ ಕ್ಯಾಪಿಟಲ್ಸ್​ vs ಪಂಜಾಬ್ ಕಿಂಗ್ಸ್​ ಪಂದ್ಯ ಸ್ಥಳಾಂತರ | Delhi Capitals vs Punjab Kings match likely to be moved to Mumbai ipl 2022


IPL 2022: ಕೊರೋನಾತಂಕ: ಡೆಲ್ಲಿ ಕ್ಯಾಪಿಟಲ್ಸ್​ vs ಪಂಜಾಬ್ ಕಿಂಗ್ಸ್​ ಪಂದ್ಯ ಸ್ಥಳಾಂತರ

Delhi Capitals vs Punjab Kings

IPL 2022:  ಐಪಿಎಲ್ ಸೀಸನ್ 15 ಗೆ ಕೊರೋನಾತಂಕ ಎದುರಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಆಟಗಾರ ಮಿಚೆಲ್ ಮಾರ್ಷ್​ ಅವರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇದೀಗ ಡೆಲ್ಲಿ ತಂಡದ ಮುಂದಿನ ಪಂದ್ಯವನ್ನು ಸ್ಥಳಾಂತರ ಮಾಡಲಾಗಿದೆ. ಈ ಹಿಂದೆ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವು ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಿಗದಿ ಮಾಡಲಾಗಿತ್ತು. ಇದೀಗ ಪುಣೆಯಿಂದ ಮುಂಬೈನ ಬ್ರಬೋರ್ನ್ ಸ್ಟೇಡಿಯಂಗೆ ಸ್ಥಳಾಂತರಿಸಲಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಒಟ್ಟು ಐದು ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್, ಮಸಾಜ್ ಥೆರಪಿಸ್ಟ್ ಚೇತನ್ ಕುಮಾರ್, ಆಲ್-ರೌಂಡರ್ ಮಿಚೆಲ್ ಮಾರ್ಷ್, ತಂಡದ ವೈದ್ಯ ಅಭಿಜಿತ್ ಸಾಲ್ವಿ ಮತ್ತು ಸಾಮಾಜಿಕ ಮಾಧ್ಯಮ ಸದಸ್ಯ ಆಕಾಶ್ ಮಾನೆ ಅವರಲ್ಲಿ ಕೊರೋನಾ ಪಾಸಿಟಿವ್ ಕಂಡು ಬಂದಿದೆ. ಹೀಗಾಗಿ ಇವರನ್ನು ಕ್ವಾರಂಟೈನ್ ಮಾಡಲಾಗಿದೆ.

ಇದರ ಹೊರತಾಗಿ ಬಯೋ ಬಬಲ್‌ನಲ್ಲಿ ಭಾಗಿಯಾಗಿರುವ ಇತರೆ ಆಟಗಾರರಲ್ಲಿ ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲ. ಹೀಗಾಗಿ ಏಪ್ರಿಲ್ 20 ರಂದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಣ ಪಂದ್ಯ ನಿಗದಿಯಂತೆ ನಡೆಯಲಿದೆ. ಆದರೆ ಇದೀಗ ಪುಣೆಯಿಂದ ಮುಂಬೈಗೆ ಪಂದ್ಯವನ್ನು ಸ್ಥಳಾಂತರಿಸುವ ಮೂಲಕ ಬಿಸಿಸಿಐ ಅಚ್ಚರಿ ಮೂಡಿಸಿದೆ.

ಪ್ರಸ್ತುತ ಸೀಸನ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 5 ಪಂದ್ಯಗಳಲ್ಲಿ 2 ರಲ್ಲಿ ಮಾತ್ರ ಗೆದ್ದಿದೆ ಮತ್ತು ಮೂರರಲ್ಲಿ ಸೋಲನ್ನು ಎದುರಿಸಿದೆ. ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ಉತ್ತಮ ಪ್ರದರ್ಶನ ನೀಡಿದೆ. ಇದುವರೆಗೆ ಆಡಿದ 6 ಪಂದ್ಯಗಳಲ್ಲಿ 3 ರಲ್ಲಿ ಗೆದ್ದಿದ್ದು, ಮೂರಲ್ಲಿ ಸೋತಿದೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಪಂಜಾಬ್ ಕಿಂಗ್ಸ್​ ವಿರುದ್ದ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

ಕೊರೋನಾ ಕಾಣಿಸಿಕೊಂಡರೂ ಪಂದ್ಯ ನಡೆಯಲಿದೆ:
ಪ್ಲೇಯಿಂಗ್​ನಲ್ಲಿ 11 ಆಟಗಾರರು (ಅದರಲ್ಲಿ ಏಳು ಮಂದಿ ಭಾರತೀಯ ಆಟಗಾರರು ಇರಬೇಕು) ಮತ್ತು ಒಬ್ಬ ಬದಲಿ ಆಟಗಾರ ಸೇರಿದಂತೆ ಒಟ್ಟು ಒಂದು ತಂಡದಲ್ಲಿ 12 ಆಟಗಾರರು ಇರಬೇಕು. ಒಂದು ವೇಳೆ ಕೊರೋನಾ ಸೋಂಕಿಗೆ ಒಳಗಾಗಿ ಬಹುತೇಕ ಆಟಗಾರರು ಕ್ವಾರಂಟೈನ್​ ಒಳಗಾದರೆ, ಆ ತಂಡದಲ್ಲಿ 12 ಆಟಗಾರರು ಇಲ್ಲದಿದ್ದರೆ ಅಂದಿನ ಪಂದ್ಯವನ್ನು ಕೈಬಿಡಲಾಗುತ್ತದೆ. ಅಂದರೆ ಒಂದು ತಂಡದಲ್ಲಿ 12 ಆಟಗಾರರು ಇಲ್ಲದಿದ್ದರೆ ಮಾತ್ರ ಕೊರೋನಾ ಕಾರಣದಿಂದ ಪಂದ್ಯವನ್ನು ಮುಂದೂಡಲಾಗುತ್ತದೆ.

ಅಷ್ಟೇ ಅಲ್ಲದೆ ಆ ತಂಡದ ಪಂದ್ಯವನ್ನು ಮುಂದೂಡಿ ಬೇರೊಂದು ದಿನ ಆಡಿಸಲು ಬಿಸಿಸಿಐ ನಿಯಮ ರೂಪಿಸಿದೆ. ಅದರಂತೆ ಕೋವಿಡ್ ಸೋಂಕು ಕಾಣಿಸಿಕೊಂಡು ಸಮಸ್ಯೆ ಎದುರಾದರೆ, ಒಂದು ತಂಡದಲ್ಲಿ ಬದಲಿ ಆಟಗಾರ ಸೇರಿ ಒಟ್ಟು 12 ಆಟಗಾರರು ಇದ್ದರೆ ಪಂದ್ಯ ನಡೆಯುವುದು ಖಚಿತ. 12 ಆಟಗಾರರು ಲಭ್ಯವಿಲ್ಲದಿದ್ದರೆ ಆ ಪಂದ್ಯವನ್ನು ಮರುವೇಳಾಪಟ್ಟಿಯಲ್ಲಿ ಆಯೋಜಿಸಲು ಐಪಿಎಲ್ ಟೆಕ್ನಿಕಲ್ ಸಮಿತಿ ಕ್ರಮ ಕೈಗೊಳ್ಳಲಿದೆ. ಹೀಗಾಗಿ ಕೊರೋನಾತಂಕ ಎದುರಾದರೂ ತಂಡದಲ್ಲಿ 12 ಆಟಗಾರರಿದ್ದರೆ ಪಂದ್ಯ ನಡೆಯುವುದು ಖಚಿತ ಎಂದೇ ಹೇಳಬಹುದು.

ಡೆಲ್ಲಿ ಕ್ಯಾಪಿಟಲ್ಸ್ (DC)​:
ರಿಷಭ್ ಪಂತ್ (ನಾಯಕ), ಡೇವಿಡ್ ವಾರ್ನರ್, ಪೃಥ್ವಿ ಶಾ, ಮಿಚೆಲ್ ಮಾರ್ಷ್, ಸರ್ಫರಾಜ್ ಖಾನ್, ಕೆಎಸ್ ಭರತ್, ಮನದೀಪ್ ಸಿಂಗ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅನ್ರಿಕ್ ನೋಕಿಯಾ, ಕಮಲೇಶ್ ನಾಗರಕೋಟಿ, ಮುಸ್ತಾಫಿಜುರ್ ರೆಹಮಾನ್, ಚೇತನ್ ಸಕರಿಯಾ, ಖಲೀಲ್ ಅಹ್ಮದ್, ಅಶ್ವಿನ್ ಹೆಬ್ಬಾರ್, ಅಶ್ವಿನ್ ಹೆಬ್ಬಾರ್ , ಯಶ್ ಧುಲ್, ವಿಕ್ಕಿ ಓಸ್ಟ್ವಾಲ್, ಲುಂಗಿ ಎನ್‌ಗಿಡಿ, ಟಿಮ್ ಸೀಫರ್ಟ್, ಪ್ರವೀಣ್ ದುಬೆ, ರೋವ್‌ಮನ್ ಪೊವೆಲ್, ಲಲಿತ್ ಯಾದವ್.

ಪಂಜಾಬ್ ಕಿಂಗ್ಸ್ (PBKS):
ಮಯಾಂಕ್ ಅಗರ್ವಾಲ್ (ನಾಯಕ), ಶಿಖರ್ ಧವನ್, ಜಾನಿ ಬೈರ್‌ಸ್ಟೋವ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಪ್ರಭಾಸಿಮ್ರಾನ್ ಸಿಂಗ್, ಒಡಿಯನ್ ಸ್ಮಿತ್, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ಕಗಿಸೊ ರಬಾಡ, ರಾಹುಲ್ ಚಹರ್, ಅರ್ಷ್‌ದೀಪ್ ಸಿಂಗ್, ಇಶಾನ್ ಪೊರೆಲ್, ಸಂದೀಪ್ ಶರ್ಮಾ, ಅಥರ್ವ ಪತ್ರಾ, ವೈಭವ್‌, ರಾಜ್ ಅಂಗದ್ ಬಾವಾ, ಬೆನ್ನಿ ಹೋವೆಲ್, ರಿಷಿ ಧವನ್, ಭಾನುಕಾ ರಾಜಪಕ್ಸೆ, ಬಲ್ತೇಜ್ ಸಿಂಗ್, ರಿತಿಕ್ ಚಟರ್ಜಿ, ನಾಥನ್ ಎಲ್ಲಿಸ್, ಪ್ರೇರಕ್ ಮಂಕಡ್.

TV9 Kannada


Leave a Reply

Your email address will not be published. Required fields are marked *