IPL 2022: ಟಿ20 ಕ್ರಿಕೆಟ್​ನಲ್ಲಿ ಈ ದಾಖಲೆ ಬರೆದ ಭಾರತದ ಮೊದಲ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ..! | IPL 2022 Jasprit Bumrah becomes first Indian fast bowler to pick 250 wickets in T20 cricket

Jasprit Bumrah: ಬುಮ್ರಾ ಮುಂಬೈ ತಂಡದ ಅತ್ಯಂತ ಯಶಸ್ವಿ ಬೌಲರ್ ಕೂಡ ಆಗಿದ್ದು, 13 ಪಂದ್ಯಗಳಲ್ಲಿ 29 ಸರಾಸರಿಯೊಂದಿಗೆ 12 ವಿಕೆಟ್ ಪಡೆದಿದ್ದಾರೆ.

May 18, 2022 | 6:03 PM

pruthvi Shankar

|

May 18, 2022 | 6:03 PM
ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಐಪಿಎಲ್ 2022 ರ ಕೊನೆಯ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಬುಮ್ರಾ ಈ ಋತುವಿನಲ್ಲಿ ಉತ್ತಮ ಆರಂಭ ಪಡೆಯಲಿಲ್ಲ. ಇಡೀ ಮುಂಬೈ ಇಂಡಿಯನ್ಸ್ ತಂಡದಂತೆ, ಅವರು ಕೂಡ ಕಷ್ಟಪಡುತ್ತಿರುವುದು ಕಂಡುಬಂದಿತ್ತು. ಆದಾಗ್ಯೂ, ಈಗ ಅವರು ತಮ್ಮ ಹಳೆಯ ಫಾರ್ಮ್​ ತೋರಿಸಲು ಪ್ರಾರಂಭಿಸಿದ್ದಾರೆ. ಅವರ ಈ ಪ್ರದರ್ಶನದ ಫಲಿತಾಂಶವೆಂದರೆ ಅವರು T20 ಸ್ವರೂಪದಲ್ಲಿ ಭಾರತದ ಅತ್ಯಂತ ಯಶಸ್ವಿ ವೇಗದ ಬೌಲರ್ ಆಗಿದ್ದಾರೆ.

ಮೇ 17, ಮಂಗಳವಾರ ವಾಂಖೆಡೆ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ವಿಶೇಷ ಸಾಧನೆ ಮಾಡಿದರು. ಬುಮ್ರಾ ಟಿ20 ಕ್ರಿಕೆಟ್‌ನಲ್ಲಿ 250 ವಿಕೆಟ್ ಪಡೆದ ಭಾರತದ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

IPL 2022: ಟಿ20 ಕ್ರಿಕೆಟ್​ನಲ್ಲಿ ಈ ದಾಖಲೆ ಬರೆದ ಭಾರತದ ಮೊದಲ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ..!

ಇನಿಂಗ್ಸ್ ನ 20ನೇ ಓವರ್​ನ ಕೊನೆಯ ಎಸೆತದಲ್ಲಿ ವಾಷಿಂಗ್ಟನ್ ಸುಂದರ್ ಅವರನ್ನು ಬೌಲ್ಡ್ ಮಾಡುವ ಮೂಲಕ ಬುಮ್ರಾ 250 ವಿಕೆಟ್ ಪೂರೈಸಿದರು. ಅವರು 205 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರು. ಅವರ ನಂತರದ ಸ್ಥಾನದಲ್ಲಿ ಭುವನೇಶ್ವರ್ ಕುಮಾರ್ 223 ವಿಕೆಟ್ ಪಡೆದಿದ್ದಾರೆ.

IPL 2022: ಟಿ20 ಕ್ರಿಕೆಟ್​ನಲ್ಲಿ ಈ ದಾಖಲೆ ಬರೆದ ಭಾರತದ ಮೊದಲ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ..!

ಅಂದಹಾಗೆ, ಈ ಮಾದರಿಯಲ್ಲಿ ಭಾರತದ ಅತ್ಯಂತ ಯಶಸ್ವಿ ಬೌಲರ್ ಎಂದರೆ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್. ಅಶ್ವಿನ್ 275 ಇನ್ನಿಂಗ್ಸ್‌ಗಳಲ್ಲಿ 274 ವಿಕೆಟ್ ಪಡೆದಿದ್ದಾರೆ. 271 ವಿಕೆಟ್‌ಗಳನ್ನು ಹೊಂದಿರುವ ಯುಜ್ವೇಂದ್ರ ಚಹಾಲ್ ಅವರಿಗೆ ಹತ್ತಿರವಾಗಿದ್ದಾರೆ.

IPL 2022: ಟಿ20 ಕ್ರಿಕೆಟ್​ನಲ್ಲಿ ಈ ದಾಖಲೆ ಬರೆದ ಭಾರತದ ಮೊದಲ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ..!

ಈ ಋತುವಿಗೆ ಸಂಬಂಧಿಸಿದಂತೆ, ಬುಮ್ರಾ ಅವರ ತಂಡದ ಅತ್ಯಂತ ಯಶಸ್ವಿ ಬೌಲರ್ ಕೂಡ ಆಗಿದ್ದಾರೆ. ಬುಮ್ರಾ 13 ಪಂದ್ಯಗಳಲ್ಲಿ 29 ಸರಾಸರಿಯೊಂದಿಗೆ 12 ವಿಕೆಟ್ ಪಡೆದಿದ್ದಾರೆ. ಅವರು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕೇವಲ 10 ರನ್‌ಗಳಿಗೆ 5 ವಿಕೆಟ್ ಪಡೆದರು.

Most Read Stories

TV9 Kannada

Leave a Reply

Your email address will not be published. Required fields are marked *