IPL 2022: ನಾಯಕನಾಗಿ ಹಾರ್ದಿಕ್ ಪಾಂಡ್ಯ ಅದ್ಭುತ ಸೃಷ್ಟಿಸಲಿದ್ದಾರೆ ಎಂದ ಗ್ಯಾರಿ ಕರ್ಸ್ಟನ್ | IPL 2022: Gary Kirsten on what Ahmedabad expects from Hardik Pandya, Rashid Khan and Shubman Gill


IPL 2022: ನಾಯಕನಾಗಿ ಹಾರ್ದಿಕ್ ಪಾಂಡ್ಯ ಅದ್ಭುತ ಸೃಷ್ಟಿಸಲಿದ್ದಾರೆ ಎಂದ ಗ್ಯಾರಿ ಕರ್ಸ್ಟನ್

IPL 2022

IPL 2022 ರ ಮೆಗಾ ಹರಾಜಿಗೂ ಅಹಮದಾಬಾದ್ ಫ್ರಾಂಚೈಸಿ 3 ಆಟಗಾರರನ್ನು ಆಯ್ಕೆ ಮಾಡಿಕೊಂಡಿದೆ. ಅದರಂತೆ ಹಾರ್ದಿಕ್ ಪಾಂಡ್ಯ, ರಶೀದ್ ಖಾನ್ ಹಾಗೂ ಶುಭ್​​ಮನ್ ಗಿಲ್ ಅಹಮದಾಬಾದ್ ತಂಡದ ಪಾಲಾಗಿದ್ದಾರೆ. ಇನ್ನು ನಾಯಕನಾಗಿ ಹಾರ್ದಿಕ್ ಪಾಂಡ್ಯ ಅವರು ಆಯ್ಕೆಯಾಗಿದ್ದು, ಇದಕ್ಕೂ ಮೊದಲು ತಂಡದ ಮೆಂಟರ್ ಆಗಿ ಮಾಜಿ ಟೀಮ್ ಇಂಡಿಯಾ ಕೋಚ್ ಗ್ಯಾರಿ ಕರ್ಸ್ಟನ್ ಅವರು ನೇಮಕವಾಗಿದ್ದರು. ಇದೀಗ ತಂಡದ ಆಯ್ಕೆ ಬಗ್ಗೆ ಖುದ್ದು ಗ್ಯಾರಿ ಕರ್ಸ್ಟನ್ ಮಾತನಾಡಿದ್ದಾರೆ. “ಹಾರ್ದಿಕ್ ಯುವಕ, ನಾಯಕತ್ವಕ್ಕೆ ಹೊಸಬ. ಅವರೊಂದಿಗೆ ಕೆಲಸ ಮಾಡುವುದು ಖುಷಿಯಾಗುತ್ತದೆ. ಅವರು ತಂಡವನ್ನು ಪ್ರೇರೇಪಿಸಲು ಕೆಲಸ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದರು.

ಹಾರ್ದಿಕ್ ಪಾಂಡ್ಯ ನಾಯಕನಾಗಿ ಕೆಲವು ಪ್ಲ್ಯಾನ್​ಗಳನ್ನು ಹೊಂದಿರಲಿದ್ದಾರೆ. ಅಂತಹ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅದು ಅವರಿಗೆ ತಂಡದ ನಾಯಕನಾಗಿ ಹೊಸ ಗುರುತನ್ನು ನೀಡಲಿದೆ ಎಂದು ಕರ್ಸ್ಟನ್ ತಿಳಿಸಿದರು. ಇದೀಗ ಪಾಂಡ್ಯ ದೊಡ್ಡ ಆಟಗಾರ ಮತ್ತು ನಾನು ಕೇಳಿದಷ್ಟು ವಿಷಯಗಳಲ್ಲಿ ತೊಡಗಿಸಿಕೊಳ್ಳಲು ಇಷ್ಟಪಡುತ್ತಾರೆ. ಅವರು ಈ ಪಂದ್ಯಾವಳಿಯ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ನಾಯಕತ್ವದಲ್ಲಿ ಅದ್ಭುತಗಳನ್ನು ಮಾಡಲು ಅವರು ಉತ್ಸುಕರಾಗಿದ್ದಾರೆ ಎಂದು ನಾನು ಕೇಳಿದ್ದೇನೆ. ಇದು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಹಾಯ ಮಾಡುತ್ತದೆ. ಹಾಗೆಯೇ ಇದರಿಂದ ತಂಡಕ್ಕೂ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಗ್ಯಾರಿ ಕರ್ಸ್ಟನ್ ತಿಳಿಸಿದರು.

ಇನ್ನು ರಶೀದ್ ಖಾನ್ ಮತ್ತು ಶುಭಮನ್ ಗಿಲ್ ಬಗ್ಗೆಯೂ ಮಾತನಾಡಿದ ಕರ್ಸ್ಟನ್, ಈ ಇಬ್ಬರ ಆಟವನ್ನು ನೋಡಲು ಕಾತರದಿಂದ ಕಾಯುತ್ತಿದ್ದೇನೆ ಎಂದರು. ಇಬ್ಬರೂ ಅದ್ಭುತ ಸಾಧಕರು. ರಶೀದ್ ಪ್ರಪಂಚದಾದ್ಯಂತ ಆಡಿದ ಅನುಭವ ಹೊಂದಿದ್ದಾರೆ. ಈ ಇಬ್ಬರೊಂದಿಗೆ ಕೆಲಸ ಮಾಡುವುದು ಖುಷಿಯಾಗುತ್ತದೆ. ನಾನು ಆ ಕ್ಷಣಕ್ಕಾಗಿ ಕಾಯುತ್ತಿದ್ದೇನೆ ಎಂದು ತಿಳಿಸಿದರು.

ನಾವು ವಿಶ್ವದ ಅತ್ಯುತ್ತಮ ಲೀಗ್‌ನಲ್ಲಿ ಆಡುತ್ತಿದ್ದೇವೆ. ಅಂತಹ ಪರಿಸ್ಥಿತಿಯಲ್ಲಿ, ಈ ಆಟಗಾರರು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತಾರೆ. ಇದರಿಂದ ತಂಡಕ್ಕೆ ಗೆಲುವು ತಂದುಕೊಡಬಹುದು. ಪ್ರಸ್ತುತ ಸೀಸನ್ ಅಹಮದಾಬಾದ್ ಫ್ರಾಂಚೈಸಿಗೆ ಮಹತ್ವದ್ದಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಆಟಗಾರರ ಪಾತ್ರವೂ ಹೆಚ್ಚಾಗುತ್ತದೆ ಎಂದು ಗ್ಯಾರಿ ಕರ್ಸ್ಟನ್ ಹೇಳಿದರು.

TV9 Kannada


Leave a Reply

Your email address will not be published. Required fields are marked *