IPL 2022: ನೋ ಬಾಲ್ ಎಂದ ಅಂಪೈರ್, ವಾದಕ್ಕಿಳಿದ ಧೋನಿ: ಅಷ್ಟಕ್ಕೂ ಆಗಿದ್ದೇನು? | IPL 2022: MS Dhoni and Ravindra Jadeja argue no ball call


IPL 2022: ನೋ ಬಾಲ್ ಎಂದ ಅಂಪೈರ್, ವಾದಕ್ಕಿಳಿದ ಧೋನಿ: ಅಷ್ಟಕ್ಕೂ ಆಗಿದ್ದೇನು?

MS Dhoni

IPL 2022: ಐಪಿಎಲ್​ನ 22ನೇ ಪಂದ್ಯದಲ್ಲೂ ಅಂಪೈರ್ ತೀರ್ಪು ಹೊಸ ಚರ್ಚೆಗೆ ಕಾರಣವಾಗಿದೆ. ಈ ಬಾರಿ ಅಂಪೈರ್ ತೀರ್ಪಿನ ವಿರುದ್ದ ಮೈದಾನದಲ್ಲೇ ಚರ್ಚೆಗಳು ನಡೆದಿದ್ದು ವಿಶೇಷ. ಅಂದರೆ ಆರ್​ಸಿಬಿ-ಸಿಎಸ್​ಕೆ ನಡುವಣ ಪಂದ್ಯದಲ್ಲಿ ಅಂಪೈರ್ ನೋ ಬಾಲ್ ಕರೆ ನೀಡಿದ್ದರು. ಪಂದ್ಯದ 14ನೇ ಓವರ್​ನಲ್ಲಿ ಡ್ವೇನ್ ಬ್ರಾವೋ ಬೌಲಿಂಗ್ ಮಾಡಿದ್ದರು. ಈ ಓವರ್​ನ ನಾಲ್ಕನೇ ಎಸೆತವನ್ನು ಅಂಪೈರ್ ನೋ ಬಾಲ್ ಎಂದರು. 30 ಯಾರ್ಡ್​ ಸರ್ಕಲ್​ನಲ್ಲಿ ಶಾರ್ಟ್ ಫೈನ್ ಲೆಗ್‌ನಲ್ಲಿ ಅಂಬಟಿ ರಾಯುಡು ನಿಂತಿದ್ದರಿಂದ ಅಂಪೈರ್ ನೋ ಬಾಲ್ ಎಂದಿದ್ದರು. ಈ ಬಗ್ಗೆ ಎಂಎಸ್ ಧೋನಿ, ರಾಯುಡು ಮತ್ತು ಡ್ವೇನ್ ಬ್ರಾವೋ ಅಂಪೈರ್ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಲೆಗ್ ಸೈಡ್‌ನಲ್ಲಿ ವಿಕೆಟ್‌ನ ಸ್ಕ್ವೈರ್​ ಹಿಂದೆ ಇಬ್ಬರಿಗಿಂತ ಹೆಚ್ಚು ಫೀಲ್ಡರ್‌ಗಳು ಇರುವಂತಿಲ್ಲ ಎಂಬುದು ಗಮನಕ್ಕೆ ತರಲಾಯಿತು. ಈ ವೇಳೆ CSK ಮೂರು ಫೀಲ್ಡರ್‌ಗಳನ್ನು ಹೊಂದಿತ್ತು. ಇದರಿಂದಾಗಿ ಅಂಪೈರ್ ನೋ ಬಾಲ್ ಕರೆ ನೀಡಿದ್ದರು. ಇದರ ಬೆನ್ನಲ್ಲೇ ಕ್ರಿಕೆಟ್‌ನಲ್ಲಿ ಎಷ್ಟು ರೀತಿಯಲ್ಲಿ ನೋ ಬಾಲ್ ಕರೆ ನೀಡಬಹುದು ಎಂಬ ಚರ್ಚೆಗಳು ಶುರುವಾಗಿದೆ. ಹಾಗಿದ್ರೆ ಯಾವ ರೀತಿಯಲ್ಲಿ ಅಂಪೈರ್ ನೋ ಬಾಲ್ ಕರೆ ನೀಡಬಹುದು ಎಂಬುದನ್ನು ನೋಡೋಣ…

ಕ್ರಿಕೆಟ್‌ನ ಕಾನೂನು ರೂಪಿಸುವ ಸಂಸ್ಥೆಯಾದ ಮೇರಿಲ್‌ಬೋನ್ ಕ್ರಿಕೆಟ್ ಕ್ಲಬ್‌ನ ವೆಬ್‌ಸೈಟ್ ಪ್ರಕಾರ….

# ಚೆಂಡನ್ನು ಎಸೆಯುವ ಸಮಯದಲ್ಲಿ ಬೌಲರ್‌ನ ಪಾದದ ಯಾವುದೇ ಭಾಗವು ಬೌಲಿಂಗ್ ಕ್ರೀಸ್‌ನ ಮುಂಭಾಗದ ಸಾಲಿನ ಹಿಂದೆ ಇಲ್ಲದಿದ್ದರೆ, ಅದು ನೋ ಬಾಲ್ ಆಗಿರುತ್ತದೆ. ಸದ್ಯ, ಅಂಪೈರ್‌ಗಳು ನೋ ಬಾಲ್‌ ವಿಚಾರದಲ್ಲಿ ತುಂಬಾ ಕಟ್ಟುನಿಟ್ಟಾಗಿದ್ದಾರೆ. ಹೀಗಾಗಿ ಚೆಂಡನ್ನು ಎಸೆಯುವಾಗ ಪಾದದ ಕೆಲವು ಭಾಗವು ಕ್ರೀಸ್‌ನೊಳಗೆ ಇರಬೇಕು. ಹೀಗಾಗಿಯೇ ಕಾಲು ರೇಖೆಯಲ್ಲಿದ್ದರೂ ಅದನ್ನು ನೋ ಬಾಲ್ ಎಂದು ಪರಿಗಣಿಸಲಾಗುತ್ತದೆ.

# ಚೆಂಡನ್ನು ಎಸೆಯುವಾಗ, ಬೌಲರ್‌ನ ಹಿಂಭಾಗದ ಪಾದವು ಕ್ರೀಸ್‌ನ ಹಿಂದೆ ಅಥವಾ ಬದಿಯ ರೇಖೆಯ ಹೊರಗೆ ಇದ್ದರೆ ಅದನ್ನು ನೋ ಬಾಲ್ ಎಂದು ಪರಿಗಣಿಸಲಾಗುತ್ತದೆ.

# ಫುಲ್ ಟಾಸ್ ಬಾಲ್ ಬ್ಯಾಟಿಂಗ್ ಮಾಡುವ ಬ್ಯಾಟ್ಸ್‌ಮನ್‌ನ ಸೊಂಟದ ಮೇಲಿದ್ದರೆ, ಅದನ್ನು ಕೂಡ ನೋ ಬಾಲ್ ಎಂದು ಪರಿಗಣಿಸಲಾಗುತ್ತದೆ.

# ಬಾಲ್ ಎಸೆಯುವ ಮೊದಲು ಬೌಲರ್ ತನ್ನ ಬೌಲಿಂಗ್ ಶೈಲಿಯ ಬಗ್ಗೆ  ಹೇಳದಿದ್ದರೆ, ಆ ಎಸೆತವನ್ನು ನೋ ಬಾಲ್ ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ಒಬ್ಬ ಬೌಲರ್ ಬಲಗೈಯಿಂದ ಬೌಲಿಂಗ್ ಮಾಡುತ್ತಿದ್ದರೆ, ಆದರೆ ಇದ್ದಕ್ಕಿದ್ದಂತೆ ಎಡಗೈಯಿಂದ ಚೆಂಡನ್ನು ಎಸೆದರೆ ಅದು ನೋ ಬಾಲ್ ಆಗಲಿದೆ. ಅದೇ ರೀತಿ ವಿಕೆಟ್‌ ಮೇಲೆ ಬೌಲಿಂಗ್‌ ಮಾಡುವಾಗ ಮಾಹಿತಿ ನೀಡದೆ ರೌಂಡ್‌ ದಿ ವಿಕೆಟ್‌ ಬೌಲ್‌ ಮಾಡಿದರೂ ನೋ ಬಾಲ್ ಎಂದು ಪರಿಗಣಿಸಲಾಗುತ್ತದೆ.

# ಬೌಲರ್ ಥ್ರೋ ಎಸೆಯುತ್ತಿದ್ದಾರೆ ಎಂದು ಅಂಪೈರ್ ಭಾವಿಸಿದರೆ, ಅದು ನೋ ಬಾಲ್ ಎಂದು ಪರಿಗಣಿಸಲಾಗುತ್ತದೆ.

# ರನ್ ಅಪ್ ತೆಗೆದುಕೊಳ್ಳುವ ಮೊದಲು ಬೌಲ್ ಮಾಡಿದರೆ, ಅದನ್ನೂ ಕೂಡ ನೋ ಬಾಲ್ ನೀಡಲಾಗುತ್ತದೆ.

# ಚೆಂಡು ಬ್ಯಾಟ್ಸ್‌ಮನ್‌ಗೆ ತಲುಪುವ ಮೊದಲು ಎರಡು ಬಾರಿ ಪಿಚ್​ ಆದರೆ ಅದನ್ನು ಡೆಡ್ ಅಥವಾ ನೋ ಬಾಲ್ ಎಂದು ಪರಿಗಣಿಸಲಾಗುತ್ತದೆ.

# ಅಂಡರ್ ಆರ್ಮ್ ಬಾಲ್ ಎಸೆಯುದರೂ ಕೂಡ ನೋ ಬಾಲ್.

# ಬ್ಯಾಟ್ಸ್‌ಮನ್ ಬ್ಯಾಟ್‌ಗೆ ತಾಗುವ ಮೊದಲು ಚೆಂಡು ನಿಂತರೆ, ಅದು ಸಹ ನೋ ಬಾಲ್.

# ವಿಕೆಟ್‌ಕೀಪರ್ ಸ್ಟಂಪ್‌ಗೆ ಮುಂದೆಯಿಂದ ಚೆಂಡನ್ನು ಹಿಡಿದರೆ, ಅದನ್ನೂ ಕೂಡ ನೋ ಬಾಲ್ ಎಂದು ಪರಿಗಣಿಸಲಾಗುತ್ತದೆ.

# ಎರಡಕ್ಕಿಂತ ಹೆಚ್ಚು ಫೀಲ್ಡರ್‌ಗಳು ಲೆಗ್ ಸೈಡ್‌ನಲ್ಲಿ (ಸ್ಟಂಪ್ ಲೈನ್‌ನ ಹಿಂದೆ) ನಿಂತಿದ್ದರೆ ಅದು ಸಹ ನೋ ಬಾಲ್ ಆಗಿರಲಿದೆ.

# ಬೌಲರ್ ಅಪಾಯಕಾರಿ ರೀತಿಯಲ್ಲಿ ಚೆಂಡನ್ನು ಎಸೆಯುತ್ತಾನೆ ಎಂದು ಅಂಪೈರ್ ಭಾವಿಸಿದರೆ, ಅದನ್ನು ಕೂಡ ನೋ ಬಾಲ್ ಎಂದು ತೀರ್ಪು ನೀಡಬಹುದು.

# ಚೆಂಡು ಎಸೆಯುವಾಗ ಬೌಲರ್‌ನ ಕೈ ಭುಜದ ಕೆಳಗೆ ಹೋದರೆ ಅದನ್ನು ಕೂಡ ನೋ ಬಾಲ್ ಎಂದು ಪರಿಗಣಿಸಲಾಗುತ್ತದೆ.

# ಬೌಲಿಂಗ್ ಮಾಡುವಾಗ ಬೌಲರ್ ನಾನ್-ಸ್ಟ್ರೈಕ್ ಎಂಡ್‌ನ ಸ್ಟಂಪ್‌ಗೆ ಹೊಡೆದರೆ ಅದು ನೋ ಬಾಲ್ ಆಗಿರಲಿದೆ.

# ಚೆಂಡು ಬ್ಯಾಟ್ಸ್‌ಮನ್‌ನ ತಲೆಯ ಮೇಲೆ ಹೋದರೆ ಅದು ನೋ ಬಾಲ್.

# ವಿಕೆಟ್‌ಕೀಪರ್‌ನ ಸ್ಥಾನ ಸರಿಯಾಗಿಲ್ಲ ಎಂದು ಅಂಪೈರ್‌ಗೆ ಅನಿಸಿದರೆ ಆ ವೇಳೆ ಎಸೆದ ಚೆಂಡನ್ನು ಸಹ ನೋ ಬಾಲ್ ಎಂದು ಪರಿಗಣಿಸಬಹುದು.

TV9 Kannada


Leave a Reply

Your email address will not be published. Required fields are marked *