IPL 2022: ಪ್ಲೇಆಫ್​ನಲ್ಲಿ ಮುಗ್ಗರಿಸುವ RCB: ಇದಕ್ಕೆ ಇತಿಹಾಸವೇ ಸಾಕ್ಷಿ..! | IPL 2022: Royal Challengers Bangalore (RCB) IPL playoffs history


IPL 2022 RCB: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ವುಡ್

IPL 2022: ಐಪಿಎಲ್ ಸೀಸನ್ 15 ರ ಪಾಯಿಂಟ್ಸ್ ಟೇಬಲ್​ನಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಆರ್​ಸಿಬಿ (RCB) ತಂಡವು ಪ್ಲೇಆಫ್​ ಪ್ರವೇಶಿಸಿದೆ. ಇಲ್ಲಿ ನಾಲ್ಕನೇ ಸ್ಥಾನ ಪಡೆದಿರುವ ಕಾರಣ ಆರ್​ಸಿಬಿ ಎಲಿಮಿನೇಟರ್ ಪಂದ್ಯವಾಡಬೇಕಿದೆ. ಅಂದರೆ ಆರ್​ಸಿಬಿ ತಂಡವು ಪಾಯಿಂಟ್ ಟೇಬಲ್​ನಲ್ಲಿ 3ನೇ ಸ್ಥಾನ ಪಡೆದಿರುವ ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ನಿರ್ಣಾಯಕ ಪಂದ್ಯವಾಡಲಿದೆ. ಏಕೆಂದರೆ ಈ ಪಂದ್ಯದಲ್ಲಿ ಆರ್​ಸಿಬಿ ಸೋತರೆ ನೇರವಾಗಿ ಐಪಿಎಲ್​ನಿಂದ ಹೊರಬೀಳಲಿದೆ. ಹೀಗಾಗಿಯೇ ಆರ್​ಸಿಬಿಗೆ ಮುಂದಿನ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯ.

ಐಪಿಎಲ್ ಇತಿಹಾಸದಲ್ಲಿ 8ನೇ ಬಾರಿಗೆ ಪ್ಲೇಆಫ್ ಪ್ರವೇಶಿಸುವ ಆರ್​ಸಿಬಿ ಫೈನಲ್​ ತಲುಪಬೇಕಿದ್ದರೆ 2 ಪಂದ್ಯಗಳನ್ನು ಗೆಲ್ಲಬೇಕು. ಅಂದರೆ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ಬಳಿಕ, 2ನೇ ಕ್ವಾಲಿಫೈಯರ್ ಪಂದ್ಯದಲ್ಲೂ ಗೆಲ್ಲಬೇಕಾಗಿದೆ. ಆದರೆ ಆರ್​ಸಿಬಿ ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಈ ಹಿಂದೆ 7 ಬಾರಿ ಪ್ಲೇಆಫ್​ ಪ್ರವೇಶಿಸಿದ್ದ ಆರ್​ಸಿಬಿ 13 ಪಂದ್ಯಗಳನ್ನು ಆಡಿದೆ. ಆದರೆ ಗೆದ್ದಿರುವುದು ಕೇವಲ 5 ಬಾರಿ ಮಾತ್ರ.

2009 ರಲ್ಲಿ ಆರ್​ಸಿಬಿ ತಂಡವು ಮೊದಲ ಬಾರಿಗೆ ಪ್ಲೇಆಫ್ ಪ್ರವೇಶಿಸಿತ್ತು. ಈ ವೇಳೆ ಸಿಎಸ್​ಕೆ ತಂಡದ ವಿರುದ್ದ 6 ವಿಕೆಟ್​ಗಳಿಂದ ಜಯ ಸಾಧಿಸಿ ಫೈನಲ್ ಪ್ರವೇಶಿಸಿತ್ತು. ಇನ್ನು 2010 ರಲ್ಲೂ ಪ್ಲೇಆಫ್​ ಆಡಿದ್ದ ಆರ್​ಸಿಬಿ ಮುಂಬೈ ಇಂಡಿಯನ್ಸ್ ವಿರುದ್ದ 35 ರನ್​ಗಳಿಂದ ಸೋಲನುಭವಿಸಿತ್ತು.

ಇನ್ನು ಆರ್​ಸಿಬಿ ತಂಡ ಮೂರನೇ ಬಾರಿ ಪ್ಲೇಆಫ್ ಆಡಿದ್ದು 2011 ರಲ್ಲಿ. ಈ ವೇಳೆ ಸಿಎಸ್​ಕೆ ವಿರುದ್ದ 6 ವಿಕೆಟ್​ಗಳಿಂದ ಸೋಲನುಭವಿಸಿತ್ತು. ಇದಾಗ್ಯೂ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದು ಆರ್​ಸಿಬಿ ಫೈನಲ್ ಆಡಿತ್ತು.

ಇದಾದ ಬಳಿಕ 2015 ರಲ್ಲಿ ಆರ್​ಸಿಬಿ ಮತ್ತೆ ಪ್ಲೇಆಫ್​ಗೆ ಎಂಟ್ರಿ ಕೊಟ್ಟಿತ್ತು. ಈ ವೇಳೆ ರಾಜಸ್ಥಾನ್ ರಾಯಲ್ಸ್ ವಿರುದ್ದ 71 ರನ್​ಗಳಿಂದ ಸೋತು ಐಪಿಎಲ್ ಅಭಿಯಾನವನ್ನು ಅಂತ್ಯಗೊಳಿಸಿತ್ತು. ಇನ್ನು 2016 ರಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯವಾಡಿದ್ದ ಆರ್​ಸಿಬಿ ಗುಜರಾತ್ ಲಯನ್ಸ್ ವಿರುದ್ದ 4 ವಿಕೆಟ್​ಗಳಿಂದ ಗೆದ್ದು ಫೈನಲ್​ಗೆ ಪ್ರವೇಶಿಸಿತ್ತು.

ಇನ್ನು 2016 ರಲ್ಲಿ ರನ್ನಪ್ ಅಪ್ ಆಗಿ ಹೊರಹೊಮ್ಮಿದ ಆರ್​ಸಿಬಿ ಮತ್ತೆ ಪ್ಲೇಆಫ್ ಪ್ರವೇಶಿಸಿದ್ದು 2020 ರಲ್ಲಿ. ಎಸ್​ಆರ್​ಹೆಚ್​ ವಿರುದ್ದ ಆಡಿದ್ದ ಎಲಿಮಿನೇಟರ್ ಪಂದ್ಯದಲ್ಲಿ 6 ವಿಕೆಟ್​ಗಳಿಂದ ಸೋತು ಆರ್​ಸಿಬಿ ಐಪಿಎಲ್​ನಿಂದ ಹೊರಬಿದ್ದಿತ್ತು. 2021 ರಲ್ಲೂ ಪ್ಲೇಆಫ್ ಆಡಿದ್ದ ಆರ್​ಸಿಬಿ ಕೆಕೆಆರ್ ವಿರುದ್ದ 4 ವಿಕೆಟ್​ಗಳಿಂದ ಸೋತು ನಿರಾಸೆ ಮೂಡಿಸಿತು.

ಹಾಗೆಯೇ 2009, 2011 ಹಾಗೂ 2016 ರಲ್ಲಿ ಫೈನಲ್​ನಲ್ಲೂ ಆರ್​ಸಿಬಿ ತಂಡ ಮುಗ್ಗರಿಸುವ ಮೂಲಕ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವ ಅವಕಾಶವನ್ನು ಕೈತಪ್ಪಿಸಿಕೊಂಡಿದೆ. ಅಂದರೆ ಇಲ್ಲಿ ಆರ್​ಸಿಬಿ ತಂಡವು ಐಪಿಎಲ್ ಇತಿಹಾಸದಲ್ಲಿ 13 ನಿರ್ಣಾಯಕ ಪಂದ್ಯಗಳನ್ನು ಆಡಿದರೂ ಗೆದ್ದಿರುವುದು ಕೇವಲ 5 ಬಾರಿ ಮಾತ್ರ. ಹೀಗಾಗಿಯೇ ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ಆರ್​ಸಿಬಿ ಗೆಲ್ಲಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *