IPL 2022: ಫಿನ್ ಅಲೆನ್​ಗೆ ಅವಕಾಶ ಸಿಗುವುದು ಡೌಟ್, ಯಾಕೆಂದ್ರೆ… | IPL 2022: Finn Allen might be benched throughout the season


IPL 2022: ಫಿನ್ ಅಲೆನ್​ಗೆ ಅವಕಾಶ ಸಿಗುವುದು ಡೌಟ್, ಯಾಕೆಂದ್ರೆ...

Finn Allen

IPL 2022: ಐಪಿಎಲ್​ನ 31ನೇ ಪಂದ್ಯದಲ್ಲಿ ಆರ್​ಸಿಬಿ- ಲಕ್ನೋ (RCB vs LSG) ಸೂಪರ್ ಜೈಂಟ್ಸ್ ವಿರುದ್ದ ಆಡಲಿದೆ. ಈ ಪಂದ್ಯದಲ್ಲಿ ಆರ್​ಸಿಬಿ (RCB) ತಂಡದ ಆರಂಭಿಕ ಬದಲಾಗಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಕಳೆದ 6 ಪಂದ್ಯಗಳಲ್ಲಿ ಆರ್​ಸಿಬಿ ಉತ್ತಮ ಆರಂಭ ಪಡೆದಿಲ್ಲ. ಅಂದರೆ ಆರಂಭಿಕನಾಗಿ ಆಡುತ್ತಿರುವ ಅನೂಜ್ ರಾವತ್ ಸತತವಾಗಿ ವಿಫಲರಾಗಿದ್ದಾರೆ. ಹೀಗಾಗಿ ಫಿನ್ ಅಲೆನ್​ಗೆ (Finn Allen) ಚಾನ್ಸ್​ ನೀಡಬೇಕೆಂಬ ಚರ್ಚೆಗಳು ಶುರುವಾಗಿದೆ. ಫಿನ್ ಅಲೆನ್ ಸ್ಪೋಟಕ ಆರಂಭಿಕ ಆಟಗಾರ. ಈ ಹಿಂದೆ ನ್ಯೂಜಿಲೆಂಡ್ ಹಾಗೂ ಇತರೆ ಟಿ20 ಲೀಗ್​ನಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿ ಮಿಂಚಿದ್ದರು. ಇದಾಗ್ಯೂ ಕಳೆದ ಸೀಸನ್​ನಿಂದ ಆರ್​​ಸಿಬಿ ತಂಡದಲ್ಲಿದ್ದರೂ ಅಲೆನ್​​ಗೆ ಅವಕಾಶ ನೀಡಿಲ್ಲ. ಇದೀಗ ಆರ್​ಸಿಬಿ ಆರಂಭಿಕನನ್ನು ಬದಲಿಸಬೇಕಾದ ಅನಿವಾರ್ಯತೆ ಬಂದಿದೆ.

ಆದರೆ ಫಿನ್ ಅಲೆನ್ ಆಯ್ಕೆ ಕೂಡ ಆರ್​ಸಿಬಿಗೆ ಸಮಸ್ಯೆ ಆಗಲಿದೆ. ಏಕೆಂದರೆ ಅಲೆನ್ ಅವರನ್ನು ಆಡಿಸಬೇಕಿದ್ರೆ ತಂಡದಿಂದ ಒಬ್ಬ ವಿದೇಶಿ ಆಟಗಾರರನ್ನು ಕೈ ಬಿಡಬೇಕು. ಅಂದರೆ ಸದ್ಯ ಆರ್​ಸಿಬಿ ತಂಡದಲ್ಲಿ ವಿದೇಶಿ ಆಟಗಾರರಾಗಿ ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್​ವೆಲ್, ಜೋಶ್ ಹ್ಯಾಝಲ್​ವುಡ್ ಹಾಗೂ ವನಿಂದು ಹಸರಂಗ ಇದ್ದಾರೆ. ಇವರಲ್ಲಿ ಡುಪ್ಲೆಸಿಸ್ ಹಾಗೂ ಮ್ಯಾಕ್ಸ್​ವೆಲ್ ಪ್ಲೇಯಿಂಗ್ ಇಲೆವೆನ್​ನಲ್ಲಿ ಇರುವುದು ಖಚಿತ. ಇನ್ನು ವೇಗಿಯಾಗಿ ಜೋಶ್ ಹ್ಯಾಝಲ್​ವುಡ್ ಕೂಡ ತಂಡದಲ್ಲಿ ಇರಲಿದ್ದಾರೆ.

ಅಂದರೆ ವನಿಂದು ಹಸರಂಗ ಅವರನ್ನು ಕೈಬಿಟ್ಟರೆ ಮಾತ್ರ ಅಲೆನ್​ಗೆ ಚಾನ್ಸ್ ನೀಡಬಹುದು. ಈ ಮೂಲಕ ಆರ್​ಸಿಬಿ ಆರಂಭಿಕನಾಗಿ ಫಿನ್ ಅಲೆನ್​ ಅವರನ್ನು ಕಣಕ್ಕಿಳಿಸಬಹುದು. ಹೀಗಾಗಿ ಆರ್​ಸಿಬಿ ತಂಡವು ಹಸರಂಗ ಅವರನ್ನು ಕೈಬಿಟ್ಟು ಅಲೆನ್​ಗೆ ಅವಕಾಶ ನೀಡಲಿದೆಯಾ ಎಂಬುದೇ ಪ್ರಶ್ನೆ. ಏಕೆಂದರೆ ಹಸರಂಗ ಅವರನ್ನು ಆರ್​ಸಿಬಿ 10 ಕೋಟಿಗೂ ಅಧಿಕ ಮೊತ್ತಕ್ಕೆ ಖರೀದಿಸಿದೆ. ಅಲ್ಲದೆ ಈ ಬಾರಿ 11 ವಿಕೆಟ್ ಪಡೆದು ಹಸರಂಗ ಕೂಡ ತಮ್ಮ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ. ಹೀಗಾಗಿ ಆರ್​ಸಿಬಿ ವನಿಂದು ಹಸರಂಗ ಅವರನ್ನೂ ಕೂಡ ಪ್ಲೇಯಿಂಗ್ ಇಲೆವೆನ್​ನಿಂದ ಕೈ ಬಿಡುವುದು ಅನುಮಾನ ಎನ್ನಬಹುದು. ಹಾಗಾಗಿ ಲಕ್ನೋ ಸೂಪರ್ ಜೈಂಟ್ಸ್​ ವಿರುದ್ದದ ಪಂದ್ಯದಲ್ಲೂ ಫಿನ್ ಅಲೆನ್​ಗೆ ಚಾನ್ಸ್​ ಸಿಗೋದು ಡೌಟ್ ಎಂದೇ ಹೇಳಬಹುದು.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB):
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ.

TV9 Kannada


Leave a Reply

Your email address will not be published. Required fields are marked *