IPL 2022: ಮೂವರನ್ನು ಮುಂಬೈ ರಿಟೈನ್ ಮಾಡುವುದು ಖಚಿತ: ಆದರೆ ಇಬ್ಬರ ನಡುವೆಯಿದೆ ಪೈಪೋಟಿ | IPL 2022: Mumbai Indians to retain Rohit Sharma, Jasprit Bumrah and Ishan Kishan

1/7

 ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 15 (IPL 2022) ಸಿದ್ದತೆಗಳು ಶುರುವಾಗಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಮುಂದಿನ ಸೀಸನ್​​ಗಾಗಿ ನಡೆಯಲಿರುವ ಮೆಗಾ ಹರಾಜಿಗಾಗಿ ರೂಪುರೇಷೆಗಳನ್ನು ಸಿದ್ದಪಡಿಸುತ್ತಿದೆ. ಅದರಂತೆ  ಮುಂದಿನ ಸೀಸನ್​ ಮೆಗಾ ಹರಾಜಿಗೂ ಮುನ್ನ ಹಳೆಯ 8 ಫ್ರಾಂಚೈಸಿಗಳು 4 ಆಟಗಾರರನ್ನು ಉಳಿಸಿಕೊಳ್ಳಬಹುದು.

2/7

 ಆದರೆ ಕೆಲ ತಂಡಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸ್ಟಾರ್ ಆಟಗಾರರು ಇದ್ದು, ಹೀಗಾಗಿ ನಾಲ್ವರನ್ನು ಉಳಿಸಿಕೊಳ್ಳುವುದು ಕೂಡ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅದರಂತೆ ಮುಂಬೈ ಇಂಡಿಯನ್ಸ್ ತಂಡವು ಯಾರನ್ನು ಉಳಿಸಿಕೊಳ್ಳುವುದು ಯಾರನ್ನು ಬಿಡುಗಡೆ ಮಾಡುವುದು ಎಂಬ ಸಂದಿಗ್ಧತೆಯಲ್ಲಿ ಸಿಲುಕಿದೆ.

3/7

ಏಕೆಂದರೆ ತಂಡದಲ್ಲಿರುವ ಬಹುತೇಕ ಆಟಗಾರರು ಕಳೆದ ಎರಡು ಸೀಸನ್​ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಇನ್ನು ಈ ಬಾರಿ ನಡೆದ ದ್ವಿತಿಯಾರ್ಧದ ಐಪಿಎಲ್​ನಲ್ಲಿ ಕೆಲ ಆಟಗಾರರು ವಿಫಲರಾದರೂ, ಕೊನೆಯ ಪಂದ್ಯಗಳ ವೇಳೆ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದರು. ಹೀಗಾಗಿ ಮುಂಬೈ ಇಂಡಿಯನ್ಸ್​ ನಾಲ್ವರನ್ನು ಉಳಿಸಿ ಉಳಿದ ಆಟಗಾರರನ್ನು ಬಿಡುಗಡೆ ಮಾಡಿದರೆ, ಅವರ ಖರೀದಿಗೆ ಉಳಿದ ಫ್ರಾಂಚೈಸಿಗಳು ಪೈಪೋಟಿ ನಡೆಸಲಿದೆ. ಇದಾಗ್ಯೂ ಮುಂಬೈ ಇಂಡಿಯನ್ಸ್​ ಈ ಮೂವರನ್ನು ಉಳಿಸಿಕೊಳ್ಳುವುದು ಖಚಿತ ಎನ್ನಲಾಗಿದೆ. ಅವರೆಂದರೆ...

ಏಕೆಂದರೆ ತಂಡದಲ್ಲಿರುವ ಬಹುತೇಕ ಆಟಗಾರರು ಕಳೆದ ಎರಡು ಸೀಸನ್​ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಇನ್ನು ಈ ಬಾರಿ ನಡೆದ ದ್ವಿತಿಯಾರ್ಧದ ಐಪಿಎಲ್​ನಲ್ಲಿ ಕೆಲ ಆಟಗಾರರು ವಿಫಲರಾದರೂ, ಕೊನೆಯ ಪಂದ್ಯಗಳ ವೇಳೆ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದರು. ಹೀಗಾಗಿ ಮುಂಬೈ ಇಂಡಿಯನ್ಸ್​ ನಾಲ್ವರನ್ನು ಉಳಿಸಿ ಉಳಿದ ಆಟಗಾರರನ್ನು ಬಿಡುಗಡೆ ಮಾಡಿದರೆ, ಅವರ ಖರೀದಿಗೆ ಉಳಿದ ಫ್ರಾಂಚೈಸಿಗಳು ಪೈಪೋಟಿ ನಡೆಸಲಿದೆ. ಇದಾಗ್ಯೂ ಮುಂಬೈ ಇಂಡಿಯನ್ಸ್​ ಈ ಮೂವರನ್ನು ಉಳಿಸಿಕೊಳ್ಳುವುದು ಖಚಿತ ಎನ್ನಲಾಗಿದೆ. ಅವರೆಂದರೆ…

4/7

 ರೋಹಿತ್ ಶರ್ಮಾ: ಮುಂಬೈ ಇಂಡಿಯನ್ಸ್​ ತಂಡದ ನಾಯಕನಾಗಿ ಮುಂದಿನ ಸೀಸನ್​ನಲ್ಲೂ ಹಿಟ್​ಮ್ಯಾನ್ ತಂಡವನ್ನು ಮುನ್ನಡೆಸಲಿದ್ದಾರೆ. ಐಪಿಎಲ್​ನ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿರುವ ರೋಹಿತ್ ಶರ್ಮಾ ಅವರನ್ನು ಬಿಡುಗಡೆ ಮಾಡುವುದಿಲ್ಲ ಎಂಬುದು ಖಚಿತ. ಹೀಗಾಗಿ ಮುಂಬೈ ಫ್ರಾಂಚೈಸಿಯ ಮೊದಲ ಆಯ್ಕೆ ರೋಹಿತ್ ಶರ್ಮಾ ಆಗಲಿದ್ದಾರೆ.

5/7

ಜಸ್​ಪ್ರೀತ್ ಬುಮ್ರಾ: ಯಾರ್ಕರ್ ಸ್ಪೆಷಲಿಸ್ಟ್ ಜಸ್​ಪ್ರೀತ್ ಬುಮ್ರಾರನ್ನು ಮುಂಬೈ ಇಂಡಿಯನ್ಸ್ ಉಳಿಸಿಕೊಳ್ಳಲಿದೆ. ಏಕೆಂದರೆ ಐಪಿಎಲ್​ನ ಅತ್ಯುತ್ತಮ ವೇಗಿಗಳಲ್ಲಿ ಬುಮ್ರಾ ಕೂಡ ಒಬ್ಬರು. ಹೀಗಾಗಿ ಬುಮ್ರಾರನ್ನು ಬಿಡುಗಡೆ ಮಾಡಿ, ಮತ್ತೆ ಖರೀದಿಸುವ ಸಾಹಸಕ್ಕೆ ಮುಂಬೈ ಫ್ರಾಂಚೈಸಿ ಕೈಹಾಕುವುದಿಲ್ಲ.

6/7

ಇಶಾನ್ ಕಿಶನ್: ಈ ಪಟ್ಟಿಯಲ್ಲಿರುವ ಮೂರನೇ ಆಟಗಾರ ಇಶಾನ್ ಕಿಶನ್. ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಇಶಾನ್ ಕಿಶನ್ ಅತ್ಯುತ್ತಮ ಆಟಗಾರ ಎಂಬುದರಲ್ಲಿ ಸಂದೇಹವಿಲ್ಲ. ಅಷ್ಟೇ ಅಲ್ಲದೆ ವಿಕೆಟ್ ಕೀಪರ್ ಕೂಡ ಆಗಿರುವುದರಿಂದ ತಂಡದಲ್ಲೇ ಉಳಿಸಿಕೊಳ್ಳಲಿದ್ದಾರೆ. ಏಕೆಂದರೆ ಪ್ರಸ್ತತ ತಂಡದಲ್ಲಿರುವ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿಕಾಕ್ ಅವರನ್ನು ಮುಂಬೈ ಬಿಡುಗಡೆ ಮಾಡುತ್ತಿದೆ. ಹೀಗಾಗಿ ಇಶಾನ್ ಕಿಶನ್​ಗೆ ಸ್ಥಾನ ಖಚಿತ.

7/7

ಮತ್ತೊಂದೆಡೆ ಮುಂಬೈ ಇಂಡಿಯನ್ಸ್​ ನಾಲ್ಕನೇ ಆಟಗಾರನಾಗಿ ಯಾರನ್ನು ಉಳಿಸಿಕೊಳ್ಳುವುದು ಎಂಬ ಚಿಂತೆಯಲ್ಲಿದೆ. ಏಕೆಂದರೆ ಆಲ್​ರೌಂಡರ್​ ಆಗಿ ಕೀರನ್ ಪೊಲಾರ್ಡ್​ ಇದ್ದರೆ, ವೇಗಿಯಾಗಿ ಟ್ರೆಂಟ್ ಬೌಲ್ಟ್ ಇದ್ದಾರೆ. ಈ ಇಬ್ಬರೂ ಕೂಡ ಮುಂಬೈ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆ ಕೂಡ ಇದೆ. ಹಾಗೆಯೇ ಮುಂಬೈ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಶಕ್ತಿ ಸೂರ್ಯಕುಮಾರ್ ಯಾದವ್ ಅವರನ್ನು ಬಿಡುಗಡೆ ಮಾಡಿ, ಮತ್ತೆ ಖರೀದಿಸುವ ಇರಾದೆಯಲ್ಲಿದೆ ಮುಂಬೈ ಇಂಡಿಯನ್ಸ್.

TV9 Kannada

Leave a Reply

Your email address will not be published. Required fields are marked *