
ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಲಿಯಾಮ್ ಲಿವಿಂಗ್ಸ್ಟನ್
IPL 2022: ಈ ಸೀಸನ್ಗೂ ಮುನ್ನವೇ ಮೆಗಾ ಹರಾಜು ನಡೆದಿದ್ದು, ಹಲವು ಆಟಗಾರರು 10 ಕೋಟಿಗೂ ಹೆಚ್ಚು ಹಣಕ್ಕೆ ಮಾರಾಟವಾಗಿದ್ದರು.
ಐಪಿಎಲ್ (IPL)ನ ಪ್ರತಿ ಸೀಸನ್ನಲ್ಲಿ, ಯಾವ ಆಟಗಾರ ಹರಾಜಿನಲ್ಲಿ ಹೆಚ್ಚು ಬೆಲೆಗೆ ಮಾರಾಟವಾಗುತ್ತಾನೆ ಮತ್ತು ಆ ಋತುವಿನಲ್ಲಿ ಆ ಆಟಗಾರ ಹೇಗೆ ಪ್ರದರ್ಶನ ನೀಡುತ್ತಾನೆ ಎಂಬುದನ್ನು ನೋಡಲು ಎಲ್ಲರೂ ಕಾತುರದಿಂದ ಕಾಯುತ್ತಿರುತ್ತಾರೆ. ಐಪಿಎಲ್ 2022 (IPL 2022) ಕೂಡ ಇದಕ್ಕೆ ಭಿನ್ನವಾಗಿರಲಿಲ್ಲ. ಈ ಸೀಸನ್ಗೂ ಮುನ್ನವೇ ಮೆಗಾ ಹರಾಜು ನಡೆದಿದ್ದು, ಹಲವು ಆಟಗಾರರು 10 ಕೋಟಿಗೂ ಹೆಚ್ಚು ಹಣಕ್ಕೆ ಮಾರಾಟವಾಗಿದ್ದರು. ಅಲ್ಲದೆ, ಅವರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ನ ದೀಪಕ್ ಚಹಾರ್ ಅವರನ್ನು 14 ಕೋಟಿಗೆ ಖರೀದಿಸಲಾಯಿತು, ಆದರೆ ಅವರು ಗಾಯದ ಕಾರಣದಿಂದ ಹೊರಗುಳಿದಿದ್ದರು. ಆದ್ದರಿಂದ, ಅವರನ್ನು ಹೊರತುಪಡಿಸಿ, ಟಾಪ್ 6 ಅತಿ ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರರ ಪ್ರದರ್ಶನವನ್ನು ನಾವು ನಿಮಗೆ ಹೇಳಲಿದ್ದೇವೆ.