IPL 2022: ಮೆಗಾ ಹರಾಜಿನಲ್ಲಿ ಆತನೇ ನಮ್ಮ ಟಾರ್ಗೆಟ್​…ಸಿಎಸ್​ಕೆ ತಂಡದಿಂದ ಘೋಷಣೆ | CSK CEO confirms Chennai will attempt to bring back ex star in IPL 2022

1/6

ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೂ ಮುನ್ನ 8 ಫ್ರಾಂಚೈಸಿಗಳು ತಮಗೆ ಬೇಕಾದ ಸ್ಟಾರ್ ಆಟಗಾರರನ್ನು ಉಳಿಸಿಕೊಂಡಿದೆ. ಇದಾಗ್ಯೂ ಕೆಲ ತಂಡಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಆಟಗಾರರನ್ನು ರಿಲೀಸ್ ಮಾಡಲಾಗಿದೆ. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್​ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಕೆಲ ಪ್ರಮುಖ ಆಟಗಾರರು ಇರುವುದು ವಿಶೇಷ.

2/6

ಏಕೆಂದರೆ ಸಿಎಸ್​ಕೆಯು ಮೊದಲ ಆಯ್ಕೆಯಾಗಿ ರವೀಂದ್ರ ಜಡೇಜಾ ಅವರನ್ನು ಆಯ್ಕೆ ಮಾಡಿಕೊಂಡಿದ್ದರೆ, 2ನೇ ಆಯ್ಕೆಯಾಗಿ ಮಹೇಂದ್ರ ಸಿಂಗ್ ಧೋನಿಯನ್ನು ಉಳಿಸಿಕೊಂಡಿದೆ. ಇನ್ನು ಮೂರನೇ ಆಟಗಾರನಾಗಿ ರುತುರಾಜ್ ಗಾಯಕ್ವಾಡ್ ಹಾಗೂ 4ನೇ ಆಟಗಾರನಾಗಿ ಮೊಯೀನ್ ಅಲಿಯನ್ನು ಉಳಿಸಿಕೊಂಡಿದೆ.

3/6

ಆದರೆ ನಾಲ್ಕು ಆಟಗಾರರ ರಿಟೈನ್ ಹಿನ್ನೆಲೆಯಲ್ಲಿ ತಂಡದಿಂದ ಹೊರಬಿದ್ದಿದ್ದು ಸಿಎಸ್​ಕೆ ತಂಡದ ಸ್ಟಾರ್ ಪ್ಲೇಯರ್  ಫಾಫ್ ಡುಪ್ಲೆಸಿಸ್​. ಡುಪ್ಲೆಸಿಸ್​ ಕಳೆದ ಕೆಲ ವರ್ಷಗಳಿಂದ ಚೆನ್ನೈ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಅದರಲ್ಲೂ ಸಿಎಸ್​ಕೆ ತಂಡದ ಆರಂಭಿಕನಾಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ.

4/6

 ಇನ್ನು ಕಳೆದ ಸೀಸನ್​ನಲ್ಲಿ 16 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಡುಪ್ಲೆಸಿಸ್ 633 ರನ್ ಬಾರಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್​ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದಕ್ಕೂ ಮುನ್ನ 2020ರ ಸೀಸನ್​ನಲ್ಲಿ 13 ಪಂದ್ಯಗಳಲ್ಲಿ 449 ರನ್ ಕಲೆಹಾಕಿದ್ದರು. ಇದಾಗ್ಯೂ ಸಿಎಸ್​ಕೆ ತಂಡಕ್ಕೆ ಫಾಫ್​ ಡುಪ್ಲೆಸಿಸ್​ ಅವರನ್ನು ರಿಟೈನ್ ಮಾಡಿಕೊಳ್ಳಲು ಸಾಧ್ಯವಾಗಿಲ್ಲ.

5/6

 ಆದರೆ ಫಾಫ್ ಡುಪ್ಲೆಸಿಸ್​ ಅವರನ್ನು ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಕೈಬಿಟ್ಟಿಲ್ಲ ಎಂಬುದನ್ನು ದೃಢಪಡಿಸಿದ್ದಾರೆ​ ಸಿಎಸ್​ಕೆ ಸಿಇಒ ಕಾಸಿ ವಿಶ್ವನಾಥನ್. ಫಾಫ್ ಅವರು ಕಳೆದ ಎರಡು ಸೀಸನ್​ಗಳಲ್ಲಿ ನಮ್ಮ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಕಳೆದ ಬಾರಿ ತಂಡವನ್ನು ಫೈನಲ್​ಗೆ ಕೊಂಡೊಯ್ದಿದ್ದ ಆಟಗಾರ. ಹೀಗಾಗಿ ಮೆಗಾ ಹರಾಜಿನಲ್ಲಿ ನಾವು ಮತ್ತೆ ಖರೀದಿಸಲು ಎಲ್ಲಾ ಪ್ರಯತ್ನ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

6/6

ಮೆಗಾ ಹರಾಜಿನಲ್ಲಿ ಫಾಫ್ ಡುಪ್ಲೆಸಿಸ್ ಖರೀದಿಗಾಗಿ ನಮ್ಮೆಲ್ಲಾ ಪ್ರಯತ್ನ ಮಾಡಲಿದ್ದೇವೆ. ಇದಾಗ್ಯೂ ಏನಾಗಲಿದೆ ಎಂಬುದು ಗೊತ್ತಿಲ್ಲ. ಆದರೂ ನಮ್ಮ ಪ್ರಯತ್ನವನ್ನಂತು ನಾವು ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. ಈ ಮೂಲಕ ಆರಂಭಿಕನಾಗಿ ಫಾಫ್ ಡುಪ್ಲೆಸಿಸ್​ ಅವರೇ ನಮ್ಮ ಮೊದಲ ಟಾರ್ಗೆಟ್ ಎಂಬುದನ್ನು ಸಿಎಸ್​ಕೆ ಸಿಇಒ ಕಾಸಿ ವಿಶ್ವನಾಥನ್ ಖಚಿತಪಡಿಸಿದ್ದಾರೆ.

TV9 Kannada

Leave a Reply

Your email address will not be published. Required fields are marked *