IPL 2022: ಲಕ್ನೋ ಸೋಲಿಗೆ ನಾಯಕ ರಾಹುಲ್ ಕಾರಣ ಎಂದ ಸಂಜಯ್ ಮಂಜ್ರೇಕರ್- ರವಿಶಾಸ್ತ್ರೀ..! | Ravi Shastri and Sanjay Manjrekar questions KL Rahuls approach to 208 chase continues


IPL 2022: ಲಕ್ನೋ ಸೋಲಿಗೆ ನಾಯಕ ರಾಹುಲ್ ಕಾರಣ ಎಂದ ಸಂಜಯ್ ಮಂಜ್ರೇಕರ್- ರವಿಶಾಸ್ತ್ರೀ..!

ಕೆಎಲ್ ರಾಹುಲ್

KL Rahul: ನನ್ನ ಪ್ರಕಾರ ಕೆಎಲ್ ರಾಹುಲ್ ಕೊನೆಯವರೆಗೂ ಆಡಲು ಪ್ರಯತ್ನಿಸುತ್ತಾರೆ. ಅವರು ಕ್ರೀಸ್‌ನಲ್ಲಿ ಉಳಿಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಾನು ಕೋಚ್ ಆಗಿದ್ದರೆ ಬೇರೆ ರೀತಿಯಲ್ಲಿ ಆಡಲು ಹೇಳುತ್ತೇನೆ.

ಎಲಿಮಿನೆಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (LSG vs RCB) ನೀಡಿದ್ದ 208 ರನ್‌ಗಳ ಗುರಿಯನ್ನು ಬೆಂಬತ್ತಲು ಲಕ್ನೋ ಸೂಪರ್ ಜೈಂಟ್ಸ್ ವಿಫಲವಾಯಿತು. ಲಕ್ನೋದ ಇನಿಂಗ್ಸ್‌ನ ನಾಯಕತ್ವವನ್ನು ಕೆಎಲ್ ರಾಹುಲ್ (KL Rahul) ವಹಿಸಿದ್ದರೂ ಟಾರ್ಗೆಟ್ ತಲುಪಲು ಸಾಧ್ಯವಾಗಲಿಲ್ಲ. ರಾಹುಲ್ 59 ಎಸೆತಗಳಲ್ಲಿ 78 ರನ್ ಗಳಿಸಿ ಲಕ್ನೋ ಪರ ಗರಿಷ್ಠ ಸ್ಕೋರ್ ಮಾಡಿದರು. ಆದರೆ ನಿರ್ಣಾಯಕ ಕ್ಷಣದಲ್ಲಿ ಔಟಾದರು. ಹೀಗಾಗಿ ತಂಡ ಗೆಲ್ಲಲು ವಿಫಲವಾಯಿತು. ಈ ಮೂಲಕ RCB ಲಕ್ನೋವನ್ನು 14 ರನ್‌ಗಳಿಂದ ಸೋಲಿಸಿತು. ಈ ಸೋಲು ಐಪಿಎಲ್ 2022 ರಲ್ಲಿ ಲಕ್ನೋ ಓಟವನ್ನು ಕೊನೆಗೊಳಿಸಿತು. ಲಕ್ನೋ ಸೋಲಿನ ನಂತರ ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ (Ravi Shastri) ಹಾಗೂ ಸಂಜಯ್ ಮಂಜ್ರೆಕರ್, ಕೆಎಲ್ ರಾಹುಲ್ ಅವರ ಬ್ಯಾಟಿಂಗ್​ ಅನ್ನು ಪ್ರಶ್ನಿಸಿದ್ದಾರೆ. ಜೊತೆಗೆ ಈ ಸೋಲಿಗೆ ಅವರನ್ನೇ ಹೊಣೆ ಮಾಡಲಾಗುತ್ತಿದೆ.

ಏಳು ಓವರ್‌ಗಳಲ್ಲಿ ಕೇವಲ ಒಂದು ಬೌಂಡರಿ ಬಾರಿಸಿದ ರಾಹುಲ್

ದೊಡ್ಡ ಗುರಿ ಬೆನ್ನತ್ತಿದ ಕೆಎಲ್ ರಾಹುಲ್ ಮಧ್ಯಮ ಓವರ್‌ಗಳಲ್ಲಿ ಆಡುತ್ತಿದ್ದ ರೀತಿಯನ್ನು ಪ್ರಶ್ನಿಸಲಾಗುತ್ತಿದೆ. ಲಕ್ನೋ ತಂಡ ಉತ್ತಮ ಆರಂಭ ಪಡೆದು ಪವರ್‌ಪ್ಲೇಯ ಆರು ಓವರ್‌ಗಳಲ್ಲಿ 62 ರನ್ ಗಳಿಸಿತು. ಆದರೆ ಪವರ್‌ಪ್ಲೇಯಲ್ಲಿ ರಾಹುಲ್ 17 ಎಸೆತಗಳಲ್ಲಿ 26 ರನ್ ಗಳಿಸಿದರು. ನಂತರದ ಏಳು ಓವರ್‌ಗಳಲ್ಲಿ ರಾಹುಲ್ ಕೇವಲ ಒಂದು ಬೌಂಡರಿ ಬಾರಿಸಿದರು.ಹೀಗಾಗಿ ತಂಡಕ್ಕೆ ಬೇಕಾಗಿದ್ದ ಅವಶ್ಯಕ ರನ್​ರೇಟ್ ಹೆಚ್ಚಾಗಿತ್ತು.

TV9 Kannada


Leave a Reply

Your email address will not be published. Required fields are marked *