
‘ಕೆಜಿಎಫ್ ಚಾಪ್ಟರ್ 2’ ಹಾಡು ಹಾಕಿದ ಸಂದರ್ಭದಲ್ಲಿ ಜನರ ಸಂಭ್ರಮ (ಎಡ), ಯಶ್ ’ಬಲ)
Narendra Modi Stadium | IPL 2022: 1.32 ಲಕ್ಷ ಪ್ರೇಕ್ಷಕರನ್ನು ಹೊಂದುವ ಸಾಮರ್ಥ್ಯವಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ಐಪಿಎಲ್ 2022ರ ಫೈನಲ್ ಪಂದ್ಯ ನಡೆದಿತ್ತು. ಪಂದ್ಯದ ಆರಂಭಕ್ಕೂ ಮುನ್ನ ‘ಕೆಜಿಎಫ್’ ಚಿತ್ರದ ಹಾಡನ್ನು ಹಾಕಲಾಗಿದೆ. ಈ ಸಂದರ್ಭದಲ್ಲಿ ನೆರೆದಿದ್ದ ಜನರು ಹುಚ್ಚೆದ್ದು ಸಂಭ್ರಮಿಸಿದ್ದು, ವಿಡಿಯೋಗಳು ವೈರಲ್ ಆಗಿವೆ.
ಐಪಿಎಲ್ 2022ರ (IPL 2022) ಫೈನಲ್ ಪಂದ್ಯ ಭಾನುವಾರದಂದು ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆದಿತ್ತು. ಒಂದು ಲಕ್ಷಕ್ಕಿಂತಲೂ ಹೆಚ್ಚು ಜನರು ವೀಕ್ಷಿಸಬಹುದಾದ ಜಗತ್ತಿನ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ಈ ವೇಳೆ ಪಂದ್ಯ ಆರಂಭವಾಗುವುದಕ್ಕೂ ಮುನ್ನ ‘ಕೆಜಿಎಫ್’ (KGF Movie) ಚಿತ್ರದ ಹಿನ್ನೆಲೆ ಸಂಗೀತವನ್ನು ಹಾಕಲಾಗಿದೆ. ಬಣ್ಣ ಬಣ್ಣದ ಬೆಳಕಿನ ಚಿತ್ತಾರದ ಹಿನ್ನೆಲೆಯಲ್ಲಿ ಮೊಳಗಿದ ಹಾಡಿಗೆ ಜನರು ಹುಚ್ಚೆದ್ದು ಕುಣಿದಿದ್ದಾರೆ. ತಮ್ಮ ಮೊಬೈಲ್ ಫ್ಲಾಶ್ ಲೈಟ್ ಆನ್ ಮಾಡಿ ಸಂಭ್ರಮಿಸಿದ್ದಾರೆ. ಹಲವರು ಈ ಸಂದರ್ಭದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದು, ಸದ್ಯ ಅವುಗಳು ವೈರಲ್ ಆಗುತ್ತಿವೆ.
‘ಕೆಜಿಎಫ್’ ಚಿತ್ರದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ:
The feeling of absolute thrill, Goosebumps and massive entertainment.
Only one winner – Indian Cinema!#KGFChapter2 @RaviBasrur #KGFChapter2BGM 🎵🎶 pic.twitter.com/Cl8nxg6nk5— #KGFChapter2 – Box Office Monster 🔥 (@KGFTheFilm) May 31, 2022