ಶಿಖರ್ ಧವನ್ ಜೊತೆ ಇನ್ನಿಂಗ್ಸ್ ಆರಂಭಿಸಲು ಉತ್ಸುಕನಾಗಿದ್ದೇನೆ ಎಂದು ಪಂಜಾಬ್ ಕಿಂಗ್ಸ್ನ ನೂತನ ಕ್ಯಾಪ್ಟನ್ ಮಯಾಂಕ್ ಅಗರ್ವಾಲ್ ಹೇಳಿದ್ದಾರೆ. ಹೊಸ ಜವಾಬ್ದಾರಿ ಸಿಕ್ಕ ಬಳಿಕ ಮೊದಲ ಬಾರಿ ಮಾತನಾಡಿರುವ ಮಯಾಂಕ್, ಐಪಿಎಲ್ನಲ್ಲಿ ಶಿಖರ್ ಧವನ್ ಜತೆ ಇನ್ನಿಂಗ್ಸ್ ಆರಂಭಿಸೋದು ನನಗೆ ಸಿಕ್ಕಿರೋ ಅದ್ಭುತ ಅವಕಾಶ ಎಂದರು.
ನಾನು ಧವನ್ ಅವರ ಜೊತೆ ಆಡಲು ಉತ್ಸುಕನಾಗಿದ್ದೇನೆ. ಅದರ ಜೊತೆಗೆ ಯುವ ಆಲ್ರೌಂಡರ್ ರಾಜ್ ಬಾವ ಸೇರಿದಂತೆ ಹಲವು ಆಟಗಾರರ ಜೊತೆ ಆಡಲು ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.
ಕಳೆದ ಕೆಲ ಸೀಸನ್ಗಳಿಂದ ಪಂಜಾಬ್ ಕಿಂಗ್ಸ್ ಪರ ಆಡ್ತಿರೋ ಮಯಾಂಕ್ಗೆ ಈ ಬಾರಿ ನಾಯಕನ ಪಟ್ಟ ಕಟ್ಟಲಾಗಿದೆ. ಈ ಮುನ್ನ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವ ಪಟ್ಟಕ್ಕೆ ಧವನ್ ಮತ್ತು ಮಯಾಂಕ್ ಅಗರ್ವಾಲ್ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು.
The post IPL 2022: ಶಿಖರ್ ಧವನ್ ಬಗ್ಗೆ ಪಂಜಾಬ್ ಹೊಸ ಕ್ಯಾಪ್ಟನ್ ಮಯಾಂಕ್ ಹೇಳಿದ್ದೇನು..? appeared first on News First Kannada.