ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಮುಂದಿನ ವರ್ಷ ನಡೆಯಲಿದೆ. ಈಗಾಗಲೇ ಎಲ್ಲಾ ತಂಡಗಳು ರಿಟೈನ್ ಮಾಡಿಕೊಂಡು ಬಿಸಿಸಿಐಗೆ ಲಿಸ್ಟ್ ನೀಡಿವೆ. ಹೀಗಾಗಿ ಹೊಸ ಸೀಸನ್ ಶುರುವಾಗೋ ಮುನ್ನ ಮೆಗಾ ಹರಾಜು ನಡೆಯಲಿದೆ. ಅದಕ್ಕಾಗಿ ಎಲ್ಲಾ ತಂಡಗಳು ಉಳಿಸಿಕೊಳ್ಳುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿವೆ.
ಕಳೆದ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ 4 ಆಟಗಾರರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಉಳಿಸಿಕೊಂಡಿದೆ. ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್ ಮತ್ತು ಸುನಿಲ್ ನರೈನ್ ಕೆಕೆಆರ್ ತಂಡದ ಭಾಗವಾಗಿದ್ದಾರೆ.
ಈಗ ಮಿಡಲ್ ಆರ್ಡರ್ ವೀಕ್ ಇರುವುದರಿಂದ ಹಳೆ ಆಟಗಾರರನ್ನು ಮರಳಿ ತರಲು ಪ್ರಯತ್ನಿಸುತ್ತಿದೆ. ಅಲ್ಲದೇ ಕೆಲವು ಹೊಸ ಆಟಗಾರರು ಸಹ ತಂಡಕ್ಕೆ ಬೇಕಾಗಿದ್ದಾರೆ. ಹೀಗಾಗಿ ಇತ್ತೀಚೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಬಂದ ಶ್ರೇಯಸ್ ಅಯ್ಯರ್ ಕೆಕೆಆರ್ ಒಲವಿದೆ. ಇವರು ಮಧ್ಯಮ ಕ್ರಮಾಂಕವನ್ನು ನಿಭಾಯಿಸಬಲ್ಲರು ಮತ್ತು ತಂಡದ ನಾಯಕರು ಆಗಬಹುದು.
The post IPL 2022; ಶ್ರೇಯಸ್ ಅಯ್ಯರ್ ಖರೀದಿಸೋಕೆ KKR ಹದ್ದಿನ ಕಣ್ಣು appeared first on News First Kannada.