IPL 2022: ಸತತ 2 ಗೆಲುವಿನ ಬೆನ್ನಲ್ಲೇ ಸನ್​ರೈಸರ್ಸ್​​ಗೆ ಸಂಕಷ್ಟ..! | IPL 2022: Washington Sundar injured during SRH’s win Over GT, likely out for 1 week


IPL 2022: ಸತತ 2 ಗೆಲುವಿನ ಬೆನ್ನಲ್ಲೇ ಸನ್​ರೈಸರ್ಸ್​​ಗೆ ಸಂಕಷ್ಟ..!

SRH

IPL 2022: ಐಪಿಎಲ್​ ಸೀಸನ್​ 15 ನಲ್ಲಿ ಮೊದಲೆರಡು ಸೋಲುಗಳ ಬಳಿಕ ಇದೀಗ ಸತತ ಎರಡು ಜಯ ಸಾಧಿಸಿ ಗೆಲುವಿನ ಟ್ರ್ಯಾಕ್​ಗೆ ಮರಳಿರುವ ಸನ್​ರೈಸರ್ಸ್​ ಹೈದರಾಬಾದ್ (SRH)​ ತಂಡಕ್ಕೆ ಸಂಕಷ್ಟ ಎದುರಾಗಿದೆ. ಗುಜರಾತ್ ಟೈಟನ್ಸ್ ವಿರುದ್ದದ ಗೆಲುವಿನ ಬೆನ್ನಲ್ಲೇ ಇದೀಗ ತಂಡದ ಇಬ್ಬರು ಆಟಗಾರರು ಗಾಯಗೊಂಡಿರುವುದು ಎಸ್​ಆರ್​ಹೆಚ್​ ಚಿಂತೆಯನ್ನು ಹೆಚ್ಚಿಸಿದೆ. ಸಿಎಸ್​​ಕೆ ಹಾಗೂ ಗುಜರಾತ್ ಟೈಟನ್ಸ್ ವಿರುದ್ದದ ಗೆಲುವಿನಲ್ಲಿ ಕಾಣಿಕೆ ನೀಡಿದ್ದ ಎಸ್​ಆರ್​ಹೆಚ್​ ತಂಡದ ಪ್ರಮುಖ ಬ್ಯಾಟ್ಸ್​ಮನ್​ ರಾಹುಲ್ ತ್ರಿಪಾಠಿ ಮತ್ತು ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಗಾಯಗೊಂಡಿದ್ದಾರೆ.

ಸೋಮವಾರ ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟನ್ಸ್ ವಿರುದ್ದದ ಪಂದ್ಯದಲ್ಲಿ ಎಸ್‌ಆರ್‌ಹೆಚ್ ಮೊದಲು ಬೌಲಿಂಗ್ ಮಾಡಿದ್ದರು. ಈ ವೇಳೆ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಕೇವಲ 3 ಓವರ್‌ಗಳನ್ನು ಎಸೆದಿದ್ದರು. ಈ ವೇಳೆ ಕೈಗೆ ಗಾಯವಾದ ಕಾರಣ ಸುಂದರ್ ತನ್ನ ಮೈದಾನ ತೊರೆದಿದ್ದರು. ಮತ್ತೊಂದೆಡೆ ರಾಹುಲ್ ತ್ರಿಪಾಠಿ ಬ್ಯಾಟಿಂಗ್ ವೇಳೆ ಗಾಯಗೊಂಡರು. ಹೀಗಾಗಿ ಅವರು ಕೂಡ ಅರ್ಧದಲ್ಲೇ ಬ್ಯಾಟಿಂಗ್​ನಿಂದ ನಿರ್ಗಮಿಸಿದ್ದರು.

ಗುಜರಾತ್ ವಿರುದ್ಧ 8 ವಿಕೆಟ್‌ಗಳ ಜಯದ ನಂತರ, ತಂಡದ ಮುಖ್ಯ ಕೋಚ್ ಟಾಮ್ ಮೂಡಿ ಇಬ್ಬರೂ ಆಟಗಾರರ ಫಿಟ್‌ನೆಸ್ ಕುರಿತು ಅಪ್‌ಡೇಟ್ ನೀಡಿದರು. ಈ ಮಾಹಿತಿ ಪ್ರಕಾರ ಸುಂದರ್ ಅವರ ಗಾಯವು ಹೆಚ್ಚು ಗಂಭೀರವಾಗಿದೆ. ಸುಂದರ್ ಅವರ ಬಲಗೈಯ ಹೆಬ್ಬೆರಳು ಮತ್ತು ಬೆರಳಿನ ಮಧ್ಯದಲ್ಲಿ ಗಾಯವಾಗಿದ್ದು, ಈ ಕಾರಣದಿಂದಾಗಿ ಅವರು ಕನಿಷ್ಠ ಒಂದು ವಾರದವರೆಗೆ ಹೊರಗುಳಿಯಲಿದ್ದಾರೆ ಎಂದು ಮೂಡಿ ಹೇಳಿದರು. ವೈದ್ಯಕೀಯ ತಂಡವು ಸುಂದರ್ ಅವರನ್ನು ನೋಡಿಕೊಳ್ಳುತ್ತಿದೆ, ಆದರೆ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಕನಿಷ್ಠ ಸಮಯ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.

ಹಾಗೆಯೇ ರಾಹುಲ್ ತ್ರಿಪಾಠಿ ಕಾಲಿನ ಸ್ನಾಯುಗಳ ಸೆಳೆತದಿಂದಾಗಿ ಹೊರಗುಳಿದಿದ್ದಾರೆ ಎಂದು ಮೂಡಿ ಹೇಳಿದ್ದಾರೆ. ಹಾಗಾಗಿ ಅವರ ಬಗ್ಗೆ ಹೆಚ್ಚು ಚಿಂತೆ ಮಾಡಬೇಕಿಲ್ಲ. ಹೀಗಾಗಿ ಮುಂದಿನ ಪಂದ್ಯದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಎಸ್​ಆರ್​ಹೆಚ್​ ತಂಡದ ಮುಂದಿನ ಪಂದ್ಯಕ್ಕೆ ಇನ್ನೂ 4 ದಿನಗಳ ಸಮಯವಿದೆ. ತಂಡವು ಏಪ್ರಿಲ್ 15 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಲಿದೆ. ಈ ವೇಳೆ ರಾಹುಲ್ ತ್ರಿಪಾಠಿ ಫಿಟ್ ಆಗಬಹುದೆಂದು ನಿರೀಕ್ಷಿಸಲಾಗಿದೆ. ಆದರೆ ವಾಷಿಂಗ್ಟನ್ ಸುಂದರ್ ಅಲಭ್ಯರಾಗುವುದು ಬಹುತೇಕ ಖಚಿತವ ಎನ್ನಬಹುದು.

ಸನ್ ರೈಸರ್ಸ್ ಹೈದರಾಬಾದ್ (SRH) ತಂಡ:
ಕೇನ್ ವಿಲಿಯಮ್ಸನ್ (ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿಕೋಲಸ್ ಪೂರನ್, ಐಡೆನ್ ಮಾರ್ಕ್ರಾಮ್, ಪ್ರಿಯಮ್ ಗರ್ಗ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಜೆ ಸುಚಿತ್, ಶ್ರೇಯಸ್ ಗೋಪಾಲ್, ಕಾರ್ತಿಕ್ ತ್ಯಾಗಿ, ಟಿ ನಟರಾಜನ್, ಉಮ್ರಾನ್ ಮಲಿಕ್, ಸೌರಭ್ ದುಬೆ, ಸೀನ್ ಅಬಾಟ್, ಆರ್ ಸಮರ್ಥ್, ಜೆ ಸುಚಿತ್, ರೊಮಾರಿಯೋ ಶೆಫರ್ಡ್, ವಿಷ್ಣು ವಿನೋದ್, ಗ್ಲೆನ್ ಫಿಲಿಪ್ಸ್, ಫಜಲ್ಹಕ್ ಫಾರೂಕಿ.

TV9 Kannada


Leave a Reply

Your email address will not be published.